ರವಿಚಂದ್ರನ್ ಮಗನ 2ನೇ ಸಿನಿಮಾ ಜನವರಿಯಲ್ಲಿ ರಿಲೀಸ್

By Bharath Kumar

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಗ ಮನೋರಂಜನ್ ಅಭಿನಯದ 'ಸಾಹೇಬ' ಸಿನಿಮಾ ಈ ವರ್ಷ ತೆರೆಕಂಡಿತ್ತು. ತಮ್ಮ ಚೊಚ್ಚಲ ಚಿತ್ರದಲ್ಲಿ ತಮ್ಮ ನಟನೆ, ಡ್ಯಾನ್ಸ್, ಫೈಟ್ ಹೀಗೆ ಎಲ್ಲದರಲ್ಲೂ ಕ್ರೇಜಿಪುತ್ರ ಗಮನ ಸೆಳೆದಿದ್ದರು. ತಮ್ಮ ಮೊದಲ ಸಿನಿಮಾದಲ್ಲೇ ಸ್ಯಾಂಡಲ್ ವುಡ್ ನಲ್ಲಿ ಹೊಸ ಭರವಸೆ ಮೂಡಿಸಿದ್ದರು.

ಅಷ್ಟರಲ್ಲೇ ಈಗ ಮನೋರಂಜನ್ ಅಭಿನಯದ ಎರಡನೇ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ನಂದಕಿಶೋರ್ ನಿರ್ದೇಶನದಲ್ಲಿ ತಯಾರಾಗಿರುವ 'ಬೃಹಸ್ಪತಿ' ಸಿನಿಮಾ ತೆರೆಗೆ ಬರ್ತಿದೆ. ಹೊಸ ವರ್ಷದ ಮೊದಲ ತಿಂಗಳಲ್ಲೇ ರವಿಮಾಮನ ಮಗ ಬಿಗ್ ಸ್ಕ್ರೀನ್ ಮೇಲೆ ಮತ್ತೆ ಅಬ್ಬರಿಸಲಿದ್ದಾನೆ.

Manoranjan Starrer Brihaspati Will Release on January 5th

ಹೌದು, ಜನವರಿ 5 ರಂದು 'ಬೃಹಸ್ಪತಿ' ರಿಲೀಸ್ ಆಗುತ್ತಿದೆ. ಅಂದ್ಹಾಗೆ, 'ಬೃಹಸ್ಪತಿ' ಸಿನಿಮಾ ತಮಿಳಿನ ಸೂಪರ್ ಹಿಟ್ 'ವಿಐಪಿ' ಚಿತ್ರದ ರೀಮೇಕ್. ತಮಿಳಿನಲ್ಲಿ ಧನುಷ್ ನಾಯಕನಾಗಿ ಅಭಿನಯಿಸಿದ್ದರು. ಅದೇ ಪಾತ್ರವನ್ನ ಮನೋರಂಜನ್ ಕನ್ನಡದಲ್ಲಿ ನಿರ್ವಹಿಸಿದ್ದಾರೆ.

ಇನ್ನುಳಿದಂತೆ ಹಿಂದಿ ಹಾಗೂ ತೆಲುಗು ಚಿತ್ರದಲ್ಲಿ ಗುರುತಿಸಿಕೊಂಡಿರುವ ನಟಿ 'ಮಿಷ್ಠಿ ಚಕ್ರವರ್ತಿ' ಈ ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಡೈಲಾಗ್ ಕಿಂಗ್ ಸಾಯಿ ಕುಮಾರ್ ಮನೋರಂಜನ್ ಅವರ ತಂದೆಯಾಗಿ ಕಾಣಿಸಿಕೊಂಡಿದ್ದಾರೆ. ವಿ ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದು, ರಾಕ್ ಲೈನ್ ವೆಂಕಟೇಶ್ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ.

More from Filmibeat

English summary
Crazy star Ravichandran son manoranjan Starrer Brihaspati Movie will Release on January 5th. The movie directed by nanda kishore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X