ಕ್ರೇಜಿಸ್ಟಾರ್ ಪುತ್ರನ ಪ್ರೇಯಸಿ ಯಾರು? ಇಂದೇ ಸಿಗುತ್ತೆ ಉತ್ತರ
ಪ್ರೇಮಿಗಳ ದಿನ ಅದೆಷ್ಟೋ ಲವ್ ಸ್ಟೋರಿಗಳು ಹುಟ್ಟಿಕೊಳ್ಳುತ್ತದೆ. ಇನ್ನಷ್ಟು ಲವ್ ಸ್ಟೋರಿಗಳು ರಿವೀಲ್ ಆಗುತ್ತದೆ. ಅದೇ ರೀತಿ ಈ ವರ್ಷ ಕ್ರೇಜಿ ಸ್ಟಾರ್ ಪುತ್ರನ ಪ್ರೇಮಕತೆ ತಿಳಿಯೋ ಸಮಯ ಬಂದಿದೆ.
ಪ್ರೇಮಿಗಳ ದಿನವಾದ ಇಂದು ರವಿಚಂದ್ರನ್ ಮದುವೆ ನಡೆದಿತ್ತು. ಆ ಕಾರಣ ಇದೇ ತಮ್ಮ ಪ್ರೀತಿಯನ್ನ ಅಪ್ಪನಿಗೆ ಹೇಳುವ ತಯಾರಿಯನ್ನ ಮನೋರಂಜನ್ ಮಾಡಿಕೊಂಡಿದ್ದಾರೆ.
ಮನೋರಂಜನ್ ಪ್ರೀತಿ ಮಾಡುತ್ತಿರುವ ಸಂಗತಿ ಯಾರಿಗೂ ತಿಳಿದಿರಲಿಲ್ಲ. ಆದರೆ, ಈ ವಿಷಯವನ್ನು ಅವರೇ ತಮ್ಮ ಟ್ವಿಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ತಂದೆ ತಾಯಿಗೆ ವಿವಾಹ ವಾರ್ಷಿಕೋತ್ಸವದ ವಿಶ್ ಮಾಡುವ ವೇಳೆ ''ಇಂದು ನನ್ನ ವ್ಯಾಲೆಂಟೈನ್ ಅನ್ನು ಪರಿಚಯ ಮಾಡಿಸುತ್ತೇನೆ'' ಎಂದು ಬರೆದಿದ್ದಾರೆ.

ಮನೋರಂಜನ್ ತಾವು ಪ್ರೀತಿಸುತ್ತಿರುವ ಹುಡುಗಿಯನ್ನ ಇಂದು ಅಪ್ಪ ಅಮ್ಮನಿಗೆ ಪರಿಚಯ ಮಾಡಿಕೊಡಲಿದ್ದಾರೆ. ಈ ಮೂಲಕ ಕ್ರೇಜಿ ಕುಟುಂಬದ ಖುಷಿ ಇನ್ನಷ್ಟು ಜಾಸ್ತಿಯಾಗಲಿದೆ.
ನಟ ಮನೋರಂಜನ್ 'ಸಾಹೇಬ' ಸಿನಿಮಾದ ಮೂಲಕ ಲಾಂಚ್ ಆದರು. ಅದರ ಬಳಿಕ 'ಬೃಹಸ್ಪತಿ' ಚಿತ್ರ ಮಾಡಿದರು. ಸದ್ಯಕ್ಕೆ ಅವರು 'ಪ್ರಾರಂಭ' ಹಾಗೂ 'ಚಿಲ್ಲಿಂ' ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ.


Click it and Unblock the Notifications











