For Quick Alerts
  ALLOW NOTIFICATIONS  
  For Daily Alerts

  ಯಶ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ಆಗಿ ವಿಶ್ ಮಾಡಿದ ಮನೋರಂಜನ್

  |

  ರಾಕಿಂಗ್ ಸ್ಟಾರ್ ಯಶ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಪ್ರತಿವರ್ಷದಂತೆ ಈ ವರ್ಷ ಬರ್ತಡೇ ಆಚರಣೆ ಮಾಡಿಕೊಂಡಿಲ್ಲ. ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನ ಕಳೆದುಕೊಂಡ ಕಾರಣ, ಹುಟ್ಟುಹಬ್ಬ ಸಂಭ್ರಮಿಸಲು ಯಶ್ ನಿರಾಕರಿಸಿದರು.

  ಆದ್ರೆ, ರಾಜಾಹುಲಿಯ ಜನುಮದಿನವನ್ನ ಅಭಿಮಾನಿಗಳು ಸೆಲೆಬ್ರೇಟ್ ಮಾಡಿದ್ದಾರೆ. ಅಭಿಮಾನಿಗಳಷ್ಟೇ ಅಲ್ಲದೇ ಸಿಂಪಲ್ ಸುನಿ, ಶ್ರುತಿ ಹರಿಹರನ್, ರಶ್ಮಿಕಾ ಮಂದಣ್ಣ, ಪವನ್ ಒಡೆಯರ್, ಸಂತೋಷ್ ಆನಂದ್ ರಾಮ್, ವಿಜಯ್ ಕಿರಗಂದೂರ್ ಸೇರಿದಂತೆ ಹಲವು ತಾರೆಯರು ವಿಶ್ ಮಾಡಿದ್ದಾರೆ.

  ಇವರ ಜೊತೆ ಕ್ರೇಜಿಸ್ಟಾರ್ ಪುತ್ರ ಮನೋರಂಜನ್ ಕೂಡ ಶುಭಕೋರಿದ್ದು, ಯಶ್ ವ್ಯಕ್ತಿತ್ವದ ಬಗ್ಗೆ ಹೊಗಳಿದ್ದಾರೆ. ಯಶಸ್ಸಿನ ಹಿಂದೆ ಸವಾರಿ ಮಾಡ್ತಿರುವ ಯಶ್ ಬಗ್ಗೆ ಮನೋರಂಜನ್ ಖುಷಿ ವ್ಯಕ್ತಪಡಿಸಿದ್ದಾರೆ.

  ರಾಕಿ ಭಾಯ್ ಯಶ್ ಹುಟ್ಟುಹಬ್ಬಕ್ಕೆ ಶುಭ ಕೋರಿದ ಸ್ಯಾಂಡಲ್ ವುಡ್ ತಾರೆಯರುರಾಕಿ ಭಾಯ್ ಯಶ್ ಹುಟ್ಟುಹಬ್ಬಕ್ಕೆ ಶುಭ ಕೋರಿದ ಸ್ಯಾಂಡಲ್ ವುಡ್ ತಾರೆಯರು

  ''ಹ್ಯಾಪಿ ಹ್ಯಾಪಿ ಬರ್ತಡೇ ಯಶ್. ಹತ್ತು ವರ್ಷಗಳಿಂದ ನಿಮ್ಮನ್ನ ನಾನು ಬಲ್ಲೆ. ಆಗ ಹೇಗಿದ್ರೋ, ಈಗಲೂ ಹಾಗೇ ಇದ್ದೀರಾ. ಒಂದು ಸ್ವಲ್ಪವೂ ಬದಲಾಗಿಲ್ಲ. ಯಶಸ್ಸು ಗಳಿಸಬೇಕು ಎಂಬ ಛಲ ನಿಮ್ಮನ್ನ ದೊಡ್ಡ ಸೂಪರ್ ಸ್ಟಾರ್ ಆಗಿ ಮಾಡಿದೆ'' ಎಂದು ಮನೋರಂಜನ್ ರವಿಚಂದ್ರನ್ ಟ್ವೀಟ್ ಮಾಡಿದ್ದಾರೆ.

  English summary
  Kannada actor ravichandran son Manoranjan has taken his twitter account to wish rocking star yash birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X