ರಾಜಧಾನಿಯಲ್ಲಿ ಪಿಎಂ ಮೋದಿ 35 ಕಿ.ಮೀ ರೋಡ್‌ ಶೋ: ಈ ಶೋಕಿ ಬೇಕಾ ಎಂದು ನಿರ್ದೇಶಕ ಮಂಸೋರೆ ಪ್ರಶ್ನೆ

ಮತದಾನದ ದಿನ ಹತ್ತಿರವಾದಂತೆ ರಾಜ್ಯದಲ್ಲಿ ಚುನಾವಣೆ ಪ್ರಚಾರ ಜೋರಾಗುತ್ತಲೇ ಇದೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಸೇರಿದಂತೆ ದೆಹಲಿ ನಾಯಕರೇ ರಾಜ್ಯದ ರಸ್ತೆಗಿಳಿದು ಪ್ರಚಾರ ನಡೆಸುತ್ತಿದ್ದಾರೆ. ಇದೇ ಶನಿವಾರ ಬೆಂಗಳೂರಿನಲ್ಲಿ ಪ್ರಧಾನಿ ಮೋದಿ 35 ಕಿ. ಮೀ ರೋಡ್‌ ಶೋಗೆ ಸಿದ್ಧತೆ ನಡೆದಿದೆ. ಇದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸ್ತಿದ್ದಾರೆ.

ಪದೇ ಪದೇ ರಾಜಕೀಯ ಮುಖಂಡರು ಈ ರೀತಿ ರೋಡ್ ಶೋ ನಡೆಸುವುದರಿಂದ ಟ್ರಾಫಿಕ್ ಜಾಮ್ ಆಗಿ ಜನಸಾಮಾನ್ಯರು ಸಮಸ್ಯೆ ಎದುರಿಸುವಂತಾಗಿದೆ. ಪ್ರಧಾನಿ ಮೋದಿ ರೋಡ್ ಶೋ ಅಂದ್ರೆ ಕೇಳ್ಬೇಕಾ? ಮೊದಲೇ ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿ ಕಿರಿ. ಸಹಜವಾಗಿಯೇ ಈ ಟ್ರಾಫಿಕ್‌ಗೆ ವಾಹನ ಸವಾರರು ಹೈರಾಣಗುತ್ತಾರೆ. ಅಂಥಾದ್ದರಲ್ಲಿ ರಾಜಧಾನಿಯಲ್ಲಿ ಪ್ರಧಾನಿ 35 ಕಿ. ಮೀ ಅಂದರೆ ಇದೀ ಬೆಂಗಳೂರು ಟ್ರಾಫಿಕ್‌ ಜಾಮ್‌ನಿಂದ ಸಮಸ್ಯೆ ಎದುರಿಸಬೇಕಾಗುತ್ತದೆ. ಇದೇ ಕಾರಣಕ್ಕೆ ಇಂತಹ ರೋಡ್‌ಶೋಗೆ ಅನುಮತಿ ಕೊಡಬಾರದು ಎನ್ನುವ ಕೂಗು ಕೇಳಿಬರ್ತಿದೆ.

ManSoRe appeals to the EC not to give permission for PM Modi 35 km Bengaluru Roadshow

ಕನ್ನಡ ಸಿನಿಮಾ ನಿರ್ದೇಶನ ಮಂಸೋರೆ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. "6ನೇ ತಾರೀಖು ಮತ್ತೆ ಬೆಂಗಳೂರಿನಲ್ಲಿ ರೋಡ್‌ಶೋ ಅಂತೆ. ಮೊನ್ನೆ ಆದ ಸಮಸ್ಯೆ ಇನ್ನು ಜನ ಮರೆತಿಲ್ಲಾ. ಈಗ ಮತ್ತೆ ಸುಮಾರು 35km ರೋಡ್‌ಶೋ ಅಂತೆ. ಜನರ ದೈನಂದಿನ ಬದುಕನ್ನು ಸಮಸ್ಯೆಗೆ ದೂಡುವ ಈ ಶೋಕಿ ಬೇಕಾ? ದಯವಿಟ್ಟು ಚುನಾವಣೆ ಆಯೋಗ ಇದಕ್ಕೆ ಅನುಮತಿ ಕೊಡಬೇಡಿ. ಅವರು ಅಭಿವೃದ್ಧಿ ಮಾಡಿದ್ದರೆ ಜನರೇ ಓಟು ಹಾಕ್ತಾರೆ" ಎಂದು ಆಗ್ರಹಿಸಿದ್ದಾರೆ.

ಸದ್ಯ ನಿರ್ದೇಶಕ ಮಂಸೋರೆ ಪೋಸ್ಟ್‌ಗೆ ಸಾಕಷ್ಟು ಜನ ಬೆಂಬಲ ಸೂಚಿಸುತ್ತಿದ್ದಾರೆ. ಒಂದು ದಿನ ರೋಡ್ ಶೋ ಮಾಡಿದ ಮಾತ್ರಕ್ಕೆ ಜನ ಮತ ಹಾಕಲ್ಲ. ನಿಮ್ಮ ಸರ್ಕಾರ ಏನಾದರೂ ಅಭಿವೃದ್ಧ ಕೆಲಸ ಮಾಡಿದ್ದರೆ ಮತ ಹಾಕುತ್ತಾರೆ ಎಂದು ಹೇಳುತ್ತಿದ್ದಾರೆ. ಸದ್ಯ ಮಂಸೋರೆ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

ಏಪ್ರಿಲ್ 29ರಂದು ಭಾನುವಾರ ಪ್ರಧಾನಿ ಮೋದಿ ರೋಡ್‌ ಶೋ ನಡೆಸಿದ್ದರು. ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕರ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಇದರಿಂದ ಸುತ್ತಾಮುತ್ತ ಭಾಗಗಳಲ್ಲಿ ವಿಪರೀತ ಜನದಟ್ಟಣೆ ಉಂಟಾಗಿ ಸಮಸ್ಯೆ ಆಗಿತ್ತು. ಗಂಟೆಗಟ್ಟಲೇ ವಾಹನಗಳು ರಸ್ತೆಯಲ್ಲಿ ನಿಂತು ಕಿರಿ ಕಿರಿ ಅನುಭವಿಸುವಂತಾಗಿತ್ತು.

ManSoRe appeals to the EC not to give permission for PM Modi 35 km Bengaluru Roadshow

ಇನ್ನು ಇದೇ ಶನಿವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ಸಿ. ವಿ ರಾಮನ್‌ ನಗರದಿಂದ ಬ್ರಿಗೇಟ್ ರಸ್ತೆಯವರೆಗೆ ಮೋದಿ ರೋಡ್ ಶೋ ನಡೆಸುವ ಬಗ್ಗೆ ಚರ್ಚೆ ನಡೀತಿದೆ. ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8.30 ರ ತನಕ 2ನೇ ರೋಡ್ ಶೋ ಕೋಣನಕುಂಟೆ ಬಳಿಯ ಬ್ರಿಗೇಡ್ ಮಿಲೆನಿಯಂನಿಂದ ಶುರುವಾರಿ ಸ್ಯಾಂಕಿ ಕೆರೆಯವರೆಗೆ 29.4 ಕಿ.ಮೀ ದೂರ ಮುಂದುವರೆಯಲಿದೆ. ಈ ಭಾಗದಲ್ಲಿ ಆ ದಿನ ಭಾರೀ ಟ್ರಾಫಿಕ್ ಜಾಮ್ ಆಗಲಿದೆ.

ಕೆಲವರು ಮೇ 6ರಂದು ಮನೆಯಿಂದ ಹೊರಗೆ ಬರದಿರಲು ನಿರ್ಧರಿಸಿದ್ದಾರೆ. ಮತ್ತೆ ಕೆಲವರು ಕೆಲಸ ಕಾರ್ಯಗಳ ನಿಮಿತ್ತ ಹೊರಗೆ ಬರಲೇಬೇಕು. ಆದರೆ ಈ ರೀತಿ ಟ್ರಾಫಿಕ್ ಜಾಮ್ ಆದರೆ ಹೇಗೆ? ಎಂದು ಪ್ರಶ್ನಿಸುತ್ತಿದ್ದಾರೆ. ಈ ರೋಡ್‌ ಶೋ ಕೈಬಿಡುವಂತೆ ಕೆಲವರು ಮನವಿ ಮಾಡಿಕೊಳ್ಳುತ್ತಿದ್ದಾರೆ.

More from Filmibeat

English summary
ManSoRe appeals to the Election Commission not to give permission for PM Modi 35 km Bengaluru Road show. BJP is planning to organise a roadshow of PM in Bengaluru on May 6. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X