For Quick Alerts
  ALLOW NOTIFICATIONS  
  For Daily Alerts

  'ಆಕ್ಟ್-1978': ಲಾಕ್ ಡೌನ್ ಬಳಿಕ ಚಿತ್ರಮಂದಿರದಲ್ಲಿ ರಿಲೀಸ್ ಆಗುತ್ತಿರುವ ಮೊದಲ ಸಿನಿಮಾ

  |

  ಕೊರೊನಾ ಲಾಕ್ ಡೌನ್ ಬಳಿಕ ಚಿತ್ರಮಂದಿರಗಳಲ್ಲಿ ಹೊಸ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ. ಸಿನಿಮಾ ಯಾವಾಗ ರಿಲೀಸ್? ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿತ್ತು. ಆದರೀಗ ಇದಕ್ಕೆ ಉತ್ತರ ಸಿಕ್ಕಿದೆ. ಸ್ಯಾಂಡಲ್ ವುಡ್ ನ ಬಹು ನಿರೀಕ್ಷೆಯ ಆಕ್ಟ್ 1978 ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದ್ದು, ಅನೇಕ ತಿಂಗಳ ನಂತರ ಚಿತ್ರಮಂದಿರಗಳಲ್ಲಿ ಹೊಸ ಸಿನಿಮಾ ಬಿಡುಗಡೆಯಾಗುತ್ತಿದೆ.

  Act-1978 : 25 ವರ್ಷದ ನಂತರ ನನಗೆ ಇದೊಂದು ಹೊಸ ಅನುಭವ | Shruthi | Puneeth Rajkumar

  ಸಿನಿಮಾದ ನಿರ್ದೇಶಕ ಮಂಸೋರೆ ಸಿನಿಮಾದ ರಿಲೀಸ್ ಡೇಟ್ ಅನೋನ್ಸ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಈ ಮೂಲಕ ಲಾಕ್ ಡೌನ್ ಬಳಿಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿರುವ ದಕ್ಷಿಣ ಭಾರತದ ಮೊದಲ ಸಿನಿಮಾ ಎನ್ನುವ ಖ್ಯಾತಿ ಸಹ ಗಳಿಸುತ್ತಿದೆ. ಅಂದ್ಹಾಗೆ ಸಿನಿಮಾ ಇದೇ ತಿಂಗಳು 20ರಂದು ತೆರೆಗೆ ಬರುತ್ತಿದೆ.

  Act-1978 ಟ್ರೇಲರ್: ಸಾಮಾನ್ಯ ಜನರ ಅಸಾಮಾನ್ಯ ಕತೆ! ನಿರೀಕ್ಷೆ ದ್ವಿಗುಣ

  ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮೂಲಕ ಆಕ್ಟ್-1798 ಚಿತ್ರ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಸಿನಿಮಾ ರಿಲೀಸ್ ಬಗ್ಗೆ ನಿರ್ದೇಶಕ ಮಂಸೋರೆ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾಗಿ ಬರೆದುಕೊಂಡಿದ್ದಾರೆ.

  'ಯಾವಾಗ ಸಿನೆಮಾ ರಿಲೀಸ್? ಲಾಕ್ ಡೌನ್ ಶುರುವಾದಾಗ ಹುಟ್ಟಿದ ಈ ಪ್ರಶ್ನೆಗೆ ಈಗ ನಿಮ್ಮ ಮುಂದೆ ನಮ್ಮ ಉತ್ತರ. ಪ್ರಶ್ನೆ ನಿಮ್ಮದಷ್ಟೇ ಅಲ್ಲಾ, ನಮ್ಮದೂ ಕೂಡ ಆಗಿತ್ತು. ನನಗೇ ನಾನೇ ಅದೆಷ್ಟು ಬಾರಿ ಕೇಳಿಕೊಂಡೆನೋ, ಈ ಸಿನೆಮಾ ಯಾವಾಗ ಬಿಡುಗಡೆಯಾಗುತ್ತದೆ? ಎಲ್ಲಿ ಬಿಡುಗಡೆಯಾಗುತ್ತದೆ? ಇವತ್ತಿನವರೆಗೂ ಇದರ ಬಗ್ಗೆ ನಡೆದದ್ದು ಅದೆಷ್ಟೋ ಚರ್ಚೆಗಳು. ಸಂಪರ್ಕಿಸಿದ್ದು ಸಾಕಷ್ಟು ಜನರನ್ನು. ಹಿರಿಯರು, ಕಿರಿಯರು, ಚಿತ್ರರಂಗದ ಒಳಗೆ, ಹೊರಗೆ, ಅನುಭವಿಗಳು, ಯುವಕರು, ಮಹಿಳೆಯರು, ಪತ್ರಕರ್ತರು, ಥಿಯೇಟರುಗಳ ಮಾಲೀಕರು, ಹೀಗೆ ಸಾಧ್ಯವಾದ ವಲಯದಲ್ಲೆಲ್ಲಾ ಇದರ ಬಗ್ಗೆ ಚರ್ಚೆ ಮಾಡಿ ಕೊನೆಗೂ ಈ ನಿರ್ಧಾರ ತೆಗೆದುಕೊಂಡಿದ್ದೇವೆ.'

  'ಇನ್ನು ಕೆಲವೇ ದಿನಗಳಲ್ಲಿ, ಅಂದರೆ ನವೆಂಬರ್ 20 ರಂದು ನಮ್ಮ ಸಿನೆಮಾ 'ಥಿಯೇಟರ್'ನಲ್ಲಿ ತೆರೆಕಾಣಲಿದೆ. ನೂರಾರು ಜನರ ಶ್ರಮ, ನಮ್ಮೆಲ್ಲರ ಕನಸು ನಿಮ್ಮ ಮುಂದೆ ಬರಲಿದೆ. ಈ ಸಿನೆಮಾ ತೆರೆಗೆ ಬರುವುದು ಬರೀ ಸಿನೆಮಾವಾಗಿ ಮಾತ್ರವಲ್ಲಾ, ಸಾವಿರಾರು ಮಂದಿ ಸಿನೆಮಾ ಕುಟುಂಬದ ಭರವಸೆಯ ನಿರೀಕ್ಷೆಯಂತೆ ಇದು ತೆರೆಕಾಣುತ್ತಿದೆ. ಇದರ ಫಲಿತಾಂಶದ ಮೇಲೆ ಸಾವಿರಾರು ಮಂದಿ ಕಾರ್ಮಿಕರು ಮುಂದಿನ ದಿನಗಳ ಭವಿಷ್ಯದ ಕುರಿತು ಇರುವ ಆತಂಕದ ಕಾರ್ಮೋಡ ಸರಿಯುವುದೆಂಬ ನಿರೀಕ್ಷೆಯಲ್ಲಿ ಈ ಸಿನೆಮಾದ ಫಲಿತಾಂಶವನ್ನು ಎದುರು ನೋಡುತ್ತಿದ್ದಾರೆ. ಪ್ರೇಕ್ಷಕ ಪ್ರಭುಗಳು ಆ ಕಾರ್ಮೋಡವನ್ನು ಸರಿಸುವಿರಿ ಎಂಬ ನಿರೀಕ್ಷೆಯಲ್ಲಿ ನಾನು ಹಾಗೂ ನಮ್ಮ ತಂಡ. ತಪ್ಪದೇ ಚಿತ್ರಮಂದಿರಗಳಲ್ಲಿ ನೋಡಿ, ಹರಿಸಿ, ಹಾರೈಸಲು ಪ್ರೇಕ್ಷಕ ಪ್ರಭುಗಳಲ್ಲಿ ಕೋರುವ ACT-1978 ಚಿತ್ರತಂಡ.' ಎಂದು ಬರೆದುಕೊಂಡಿದ್ದಾರೆ.

  ಈ ಸಿನಿಮಾದ ಮೇಲೆ ಹೊಸ ಸಿನಿಮಾಗಳ ರಿಲೀಸ್ ನಿರ್ಧಾರ ನಿಂತಿದೆ. ಪ್ರೇಕ್ಷಕರು ಈ ಸಿನಿಮಾವನ್ನು ಹೇಗೆ ಸ್ವೀಕಾರ ಮಾಡುತ್ತಾರೆ ಎನ್ನುವ ಭಾರಿ ಕುತೂಹಲ ಮೂಡಿಸಿದೆ. ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ ಹೊಸ ಸಿನಿಮಾಗಳು ಧೈರ್ಯವಾಗಿ ಚಿತ್ರಮಂದಿರಗಳ ಬರುವ ಸಾಧ್ಯತೆ ಇದೆ.

  English summary
  Mansore's Act 1978 movie set to release on November 20th. This is the First south Indian film to release in theater post-covid unlock.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X