ಮಂಸೋರೆ ಹೊಸ ಸಿನಿಮಾ ಮುಹೂರ್ತ: ನಟರು ಯಾರು?
ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಕೆಲವು ದಿನಗಳ ಹಿಂದಷ್ಟೆ ಹೊಸ ಸಿನಿಮಾ ಘೋಷಿಸಿದ್ದರು. ಸಿನಿಮಾದ ಹೆಸರು ಹಾಗೂ ಪೋಸ್ಟರ್ ಬಹಳ ಭಿನ್ನವಾಗಿತ್ತು. ಸಿನಿಮಾದ ಹೆಸರು '19.20.21'.
ಇಂದು (ಫೆಬ್ರವರಿ 07) ಸಿನಿಮಾದ ಮುಹೂರ್ತವನ್ನು ಸರಳವಾಗಿ ಜಯನಗರದ 4ನೇ ಬ್ಲಾಕ್‌ನಲ್ಲಿರುವ ಗಣೇಶನ ದೇವಾಲಯದಲ್ಲಿ ನೆರವೇರಿಸಲಾಗಿದೆ. ಜೊತೆಗೆ ಸಿನಿಮಾದಲ್ಲಿ ನಟಿಸುತ್ತಿರುವ ಕಲಾವಿದರ ಪರಿಚಯವನ್ನು ಮಾಡಿಕೊಡಲಾಗಿದೆ.
ಮಂಸೋರೆಯ ತಾಯಿ ಸೇರಿದಂತೆ ಸಿನಿಮಾದ ಕಲಾವಿದರು, ಕ್ಯಾಮೆರಾಮನ್ ಸತ್ಯ ಹೆಗಡೆ, ನಿರ್ಮಾಪಕ ಡಿ ಕ್ರಿಯೇಶನ್ಸ್‌ನ ದೇವರಾಜ್, ಸಿನಿಮಾದ ಕಲಾವಿದರು ಹಾಗೂ ಕೆಲವು ಮಂಸೋರೆಯ ಹಿತೈಷಿಗಳು ಮುಹೂರ್ತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಸಿನಿಮಾವನ್ನು ಧಾರವಾಡ, ಯಲ್ಲಾಪುರ, ಕರಾವಳಿಯ ಪ್ರಮುಖ ಸ್ಥಳಗಳಲ್ಲಿ ಹಾಗೂ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲು ಯೋಜಿಸಿದ್ದು, ಚಿತ್ರೀಕರಣ ಪೂರ್ವದ ತಯಾರಿ ಪೂರ್ಣಗೊಳಿಸಿ ಶೀಘ್ರದಲ್ಲೇ ಚಿತ್ರೀಕರಣವನ್ನು ಆರಂಭಿಸಲಿದೆ ಚಿತ್ರತಂಡ.

'19.20.21' ಸಿನಿಮಾಕ್ಕೆ ಬಿಂದು ಮಾಲಿನಿ ಹಾಗೂ ಬಕ್ಕೇಶ್ ರೋಣದ ಸಂಗೀತ ನೀಡಿದ್ದಾರೆ. ಸಂಕಲನ ಮಾಡಲಿರುವುದು ಸುರೇಶ್ ಆರ್ಮುಗಂ. ಶಬ್ದ ವಿನ್ಯಾಸ ಮಹಾವೀರ್ ಸಾಬಣ್ಣವರ್, ಸಿನಿಮಾದ ಕತೆ ಹಾಗೂ ಚಿತ್ರಕತೆ ವೀರೇಶ್ ಮಲ್ಲಣ್ಣ ಹಾಗೂ ಮಂಸೋರೆಯದ್ದಾಗಿದ್ದರೆ, ಸಂಭಾಷಣೆಯನ್ನು ಅವಿನಾಶ್ ಜಿ. ಬರೆದಿದ್ದಾರೆ.
ಮಂಸೋರೆ ರಾಣಿ ಅಬ್ಬಕ್ಕನ ಕುರಿತಾದ ಸಿನಿಮಾವನ್ನು ಮಾಡಬೇಕಿತ್ತು. ಆದರೆ ಕೊರೊನಾ ಸೃಷ್ಟಿಸಿರುವ ಬಿಕ್ಕಟ್ಟಿನಿಂದಾಗಿ ಆ ಯೋಜನೆ ತುಸು ಮುಂದಕ್ಕೆ ಹೋಗಿದೆ.


Click it and Unblock the Notifications











