twitter
    For Quick Alerts
    ALLOW NOTIFICATIONS  
    For Daily Alerts

    ಅಪ್ಪ ಸಿಕ್ಕಿದ್ದು ಹೀಗೆ: ನಟಿ ಮಾನ್ವಿತಾ ಕಾಮತ್ ಹಂಚಿಕೊಂಡ ಈ ಚಿತ್ರದ ಹಿಂದಿದೆ ನೋವಿನ ಕಥೆ

    |

    'ಅಪ್ಪಾ ಐ ಲವ್ ಯೂ ಪಾ...'- ಈ ಹಾಡು ಎಷ್ಟೊಂದು ಜನರ ಬಾಯಲ್ಲಿ ನಲಿದಾಡುತ್ತಲೇ ಇರತ್ತದೆ. 'ಚೌಕ' ಚಿತ್ರದ ಈ ಹಾಡು ಎಂಥಹವರನ್ನೂ ಭಾವುಕರನ್ನಾಗಿಸುತ್ತದೆ. ತಂದೆ ಮಗಳ ಬಾಂಧವ್ಯವನ್ನು ಸಾರುವ ಈ ಹಾಡನ್ನು ವಿ. ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಅನುರಾಧಾ ಭಟ್ ಸ್ವರದಲ್ಲಿ ಹಾಡು ಕೇಳಿ ಮುಗಿಸುವಾಗ ನಮಗೆ ಅರಿವಿಲ್ಲದಂತೆ ಕಣ್ಣಂಚಲಿ ನೀರು ಜಿನುಗುತ್ತದೆ. ಈ ಹಾಡಿನಲ್ಲಿ ತಂದೆ ಮಗಳಾಗಿ ಮಾನ್ವಿತಾ ಕಾಮತ್ ಮತ್ತು ಕಾಶಿನಾಥ್ ಕಾಣಿಸಿಕೊಂಡಿದ್ದರು. 'ಅಪ್ಪಾ ಐ ಲವ್ ಯೂ ಪಾ' ಹಾಡು ಮಾನ್ವಿತಾ ನಿಜ ಜೀವನಕ್ಕೂ ಎಷ್ಟು ಹತ್ತಿರ ಎಂಬುದನ್ನು ಅವರೇ ಹೇಳಿಕೊಂಡಿದ್ದಾರೆ.

    Recommended Video

    Kushee Ravi Alias Dia Soup Photoshoot | Filmibeat Kannada

    ಸಾಮಾಜಿಕ ಜಾಲತಾಣದಲ್ಲಿ ಮಾನ್ವಿತಾ ಅಪರೂಪದ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಅದು ಕೂಡ ಅಪ್ಪ-ಮಗಳ ಬಾಂಧವ್ಯದ ಕಥೆ ಹೇಳುವ ಸಿನಿಮಾ. 'ಟಗರು ಪುಟ್ಟಿ' ಎಂದೇ ಹೆಸರಾದ ಮಾನ್ವಿತಾ, ಆ ಚಿತ್ರದಲ್ಲಿರುವಂತೆ ಡೇರಿಂಗ್ ಯುವತಿಯೂ ಹೌದು, ಹಾಗೆಯೇ 'ಅಪ್ಪಾ ಐ ಲವ್‌ ಯೂ ಪಾ' ಹಾಡಿನಲ್ಲಿ ಕಾಣಿಸಿಕೊಂಡ ಅತಿ ಭಾವುಕ ಹುಡುಗಿಯೂ ಹೌದು. ಮಾನ್ವಿತಾ ಶೇರ್ ಮಾಡಿರುವ ರೇಖಾ ಚಿತ್ರದ ಹಿಂದಿನ ಕಥೆ ಸುಮಧುರ ಪ್ರೀತಿಯ ಹಿಂದಿನ ನೋವಿನ ಕಥೆಯನ್ನು ಹೇಳುತ್ತದೆ. ಮುಂದೆ ಓದಿ.

    ಪೊಲೀಸರ ವರ್ತನೆ ಬಗ್ಗೆ ಸಿಟ್ಟಾದ ಟಗರು ಮಾನ್ವಿತಾ ಪುಟ್ಟಿಪೊಲೀಸರ ವರ್ತನೆ ಬಗ್ಗೆ ಸಿಟ್ಟಾದ ಟಗರು ಮಾನ್ವಿತಾ ಪುಟ್ಟಿ

    ಅಪ್ಪನ ಜತೆಗೆ ಫೋಟೊ ಇಲ್ಲ

    ಅಪ್ಪನ ಜತೆಗೆ ಫೋಟೊ ಇಲ್ಲ

    ಇದು ನನ್ನ ಭಾವನಾತ್ಮಕ ಕಥೆ ಎಂದು ಮಾನ್ವಿತಾ ಹೇಳಿಕೊಂಡಿದ್ದಾರೆ. ಅಪ್ಪಂದಿರ ದಿನದಂದು ಎಲ್ಲರೂ ತಮ್ಮ ತಂದೆಯ ಜತೆಗಿನ ಬಾಲ್ಯದ ಫೋಟೊವನ್ನು ಹಂಚಿಕೊಳ್ಳುತ್ತಿದ್ದರೆ ಮಾನ್ವತಾ, ಅಂದು ಅಕ್ಷರಶಃ ಕಣ್ಣೀರಿಟ್ಟಿದ್ದರು. 'ನನ್ನ ಅಪ್ಪನೊಂದಿಗೆ ಒಂದೂ ಒಳ್ಳೆಯ ಫೋಟೊ ಇಲ್ಲ ಮತ್ತು ನನ್ನ ಬಾಲ್ಯದ ಅವರ ಜತೆಗಿನ ಒಂದೇ ಒಂದು ಫೋಟೊ ಕೂಡ ಇಲ್ಲ ಎಂಬುದನ್ನು ಅರಿತಾಗ ಅಪ್ಪಂದಿರ ದಿನ ಪೂರ್ತಿ ನಾನು ಕಣ್ಣೀರಿಟ್ಟಿದ್ದೆ' ಎಂದು ಮಾನ್ವಿತಾ ತಿಳಿಸಿದ್ದಾರೆ.

    ನನಗೂ ಇಂತಹ ಚಿತ್ರ ಬೇಕೆನಿಸಿತು

    ನನಗೂ ಇಂತಹ ಚಿತ್ರ ಬೇಕೆನಿಸಿತು

    ನನ್ನ ಸ್ನೇಹಿತರೊಬ್ಬರು ಒಂದು ದಿನ ತನ್ನ ತಂದೆಯ ಜತೆ ಇರುವಂತೆ ಬಿಡಿಸಿದ ಚಿತ್ರವನ್ನು ನನಗೆ ಕಳುಹಿಸಿದ್ದರು. ಅದನ್ನು ಕಂಡು ಬೆರಗಾದೆ. ದೈವಿಕ ಶಕ್ತಿಗೆ ಪರೋಕ್ಷವಾಗಿ ನಾನು ಶರಣಾಗತಳಾದೆ. ಈ ಆರ್ಟ್ ನನಗೂ ಸಿಗುವಂತಾಗಬೇಕು ಎಂಬ ಆಲೋಚನೆ ನನ್ನ ತಲೆಯಲ್ಲಿ ಓಡಿತು ಎಂದು ಮಾನ್ವಿತಾ ಹೇಳಿದ್ದಾರೆ.

    ಒಂದೇ ದಿನ ಕನ್ನಡದ ಇಬ್ಬರು ನಟಿಯರ ಮೇಲೆ ಬಿತ್ತು ಕಿಡಿಗೇಡಿಗಳ ವಕ್ರದೃಷ್ಟಿಒಂದೇ ದಿನ ಕನ್ನಡದ ಇಬ್ಬರು ನಟಿಯರ ಮೇಲೆ ಬಿತ್ತು ಕಿಡಿಗೇಡಿಗಳ ವಕ್ರದೃಷ್ಟಿ

    ತಂದೆಯಿಂದಾಗಿ ಚಿತ್ರರಂಗ

    ತಂದೆಯಿಂದಾಗಿ ಚಿತ್ರರಂಗ

    ತಂದೆಯ ಜತೆಗಿನ ಹಲವು ನೆನಪುಗಳನ್ನು ಈ ಹಿಂದೆ ಮಾನ್ವಿತಾ ಹಂಚಿಕೊಂಡಿದ್ದರು. ಇತ್ತೀಚೆಗೆ ಬರಹಗಾರ್ತಿಯಾಗಿ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಮಾನ್ವಿತಾ, ಅದಕ್ಕೆ ಅಪ್ಪನೇ ಸ್ಫೂರ್ತಿ ಎಂದಿದ್ದರು. ಸಿನಿಮಾ ಕ್ಷೇತ್ರಕ್ಕೆ ಬರಲೂ ಅವರೇ ಕಾರಣ. ಚಿಕ್ಕಂದಿನಲ್ಲಿ ರಾಜಕುಮಾರ್, ಕಮಲಹಾಸನ್ ಮುಂತಾದವರು ಕ್ಲಾಸಿಕ್ ಚಿತ್ರಗಳನ್ನು ತೋರಿಸುತ್ತಿದ್ದರು. ಈಗ ಸಿನಿಮಾ ಕ್ಷೇತ್ರದಲ್ಲಿ ನಾನಿದ್ದೇನೆ. ಆದರೆ ಅದನ್ನು ನೋಡಲು ಅಪ್ಪನೇ ಜತೆಗಿಲ್ಲ ಎಂಬ ನೋವನ್ನು ಹೇಳಿಕೊಂಡಿದ್ದರು.

    English summary
    Actress Manvita Kamath got emotional after receiving pencil sketch picture with her father.
    Saturday, August 8, 2020, 10:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X