ಚಂದನವನದ ಕೆಂಡಸಂಪಿಗೆಗೆ ಭಾರಿ ಬೇಡಿಕೆ
ಕೆಂಡಸಂಪಿಗೆ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ನಾಯಕಿಯಾಗಿ ಪಾದಾರ್ಪಣೆ ಮಾಡಿದ ನಟಿ ಮಾನ್ವಿತಾ ಹರೀಶ್ ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಅಭಿನಯಿಸಿದ ಮೊದಲ ಚಿತ್ರದಲ್ಲೇ ಸೂಪರ್ ಸಕ್ಸಸ್ ಕಂಡ ಮಾನ್ವಿತಾ ವಿಶೇಷ ಎನ್ನಿಸುವ ಪಾತ್ರಗಳನ್ನ ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಮಾನ್ವಿತಾ ಅಭಿನಯದ ಎರಡನೇ ಸಿನಿಮಾ ಕನಕ ಇತ್ತಿಚಿಗಷ್ಟೇ ಬಿಡುಗಡೆ ಆಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಸದ್ಯ ಮಾನ್ವಿತಾ ಆಕ್ಟ್ ಮಾಡಿರುವ ಇನ್ನೂ ಮೂರು ಚಿತ್ರಗಳು ಬಿಡುಗಡೆಗೆ ಸಿದ್ದವಾಗಿದೆ.
ಫೆಬ್ರವರಿ ತಿಂಗಳಲ್ಲಿ 'ಟಗರು' ಚಿತ್ರ ಬಿಡುಗಡೆ ಆಗಲಿದ್ದು ಮಾರ್ಚ್ ನಲ್ಲಿ 'ರಿಲ್ಯಾಕ್ಸ್ ಸತ್ಯಾ' ರಿಲೀಸ್ ಆಗುತ್ತೆ. ಈ ಎರಡು ಸಿನಿಮಾದ ನಂತರ 'ರಥಾವರ' ಸಿನಿಮಾ ಖ್ಯಾತಿಯ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಡೈರೆಕ್ಟ್ ಮಾಡಿರುವ 'ತಾರಕಾಸುರ' ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿಯೂ ಮಾನ್ವಿತಾ ಅವರೇ ನಾಯಕಿ.

ಮಾನ್ವಿತಾ ಅಭಿನಯದ ಮೂರು ಚಿತ್ರಗಳು ಬಿಡುಗಡೆಯಾದ ನಂತ್ರ ಮಾನ್ವಿತಾ ಬೇರೆಯದ್ದೇ ರೀತಿಯ ಪಾತ್ರಗಳತ್ತಾ ಗಮನ ಹರಿಸಲಿದ್ದಾರೆ. ಟಗರು ಚಿತ್ರದಲ್ಲಿ ಎಲ್ಲರನ್ನೂ ಮೆಚ್ಚುವಂತಹ ಪಾತ್ರದಲ್ಲಿ ಮಾನ್ವಿತಾ ಕಾಣಿಸಿಕೊಂಡಿದ್ದಾರೆ.
ಒಂದೇ ರೀತಿಯ ಪಾತ್ರಗಳಿಗೆ ಅಂಟಿಕೊಳ್ಳದೆ ವಿಭಿನ್ನ ಪಾತ್ರಗಳತ್ತ ಗಮನಹರಿಸುತ್ತಿರುವ ಮಾನ್ವಿತಾ ಮುಂದಿನದಿನಗಳಲ್ಲಿ ಮತ್ತಷ್ಟು ಚಿತ್ರಗಳಲ್ಲಿ ಬ್ಯುಸಿ ಆಗಲಿದ್ದಾರೆ.


Click it and Unblock the Notifications











