'ಟಗರು' ಪೋರಿ ಮಾನ್ವಿತಾ ಹೆಸರು ಬದಲು: ಹಿಂದಿನ ರಹಸ್ಯ ಏನು.?
'ಕೆಂಡಸಂಪಿಗೆ', 'ಟಗರು' ಚಿತ್ರಗಳಲ್ಲಿ ಅಭಿನಯಿಸಿದ ಪಟಪಟ ಅಂತ ಮಾತನಾಡುವ ಚೆಲುವೆ ಮಾನ್ವಿತಾ ಹರೀಶ್ ಯಾರಿಗ್ತಾನೆ ಗೊತ್ತಿಲ್ಲ ಹೇಳಿ. 'ಟಗರು' ಚಿತ್ರದಲ್ಲಿನ ತಮ್ಮ ಅಭಿನಯದ ಮೂಲಕ ರಾಮ್ ಗೋಪಾಲ್ ವರ್ಮಾ ರನ್ನೇ ಕ್ಲೀನ್ ಬೌಲ್ಡ್ ಮಾಡಿದ್ದ ಸುಂದರಿ ಈಕೆ.!
ಇಂತಿಪ್ಪ ಮಾನ್ವಿತಾ ಹರೀಶ್ ಇದೀಗ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಇಷ್ಟು ದಿನ 'ಮಾನ್ವಿತಾ ಹರೀಶ್' ಆಗಿದ್ದ ಈಕೆ ಇದೀಗ 'ಮಾನ್ವಿತಾ ಕಾಮತ್' ಆಗಿದ್ದಾರೆ.

ಇದ್ದಕ್ಕಿದ್ದ ಹಾಗೆ ನಟಿ ಮಾನ್ವಿತಾ ಹೆಸರು ಬದಲಾಯಿಸಿಕೊಂಡಿದ್ದ ನೋಡಿ, ಮದುವೆ ಆಗ್ಬಿಟ್ರಾ ಅಂತ ಕೇಳಿದವರೂ ಇದ್ದಾರೆ. ಆದ್ರೆ, ವಾಸ್ತವ ಅದಲ್ಲ.!
ಅಷ್ಟಕ್ಕೂ, ಮಾನ್ವಿತಾ ತಂದೆ ಹೆಸರು ಹರೀಶ್ ಕಾಮತ್. ಇಷ್ಟು ದಿನ 'ಮಾನ್ವಿತಾ ಹರೀಶ್' ಎಂದು ಕರೆಯಿಸಿಕೊಳ್ಳುತ್ತಿದ್ದ ಈಕೆ ಇದೀಗ ತಮ್ಮ ಕುಟುಂಬದ ಸರ್ ನೇಮ್ 'ಕಾಮತ್' ಎಂಬುದನ್ನು ತಮ್ಮ ಹೆಸರಿನ ಕೊನೆಗೆ ಸೇರಿಸಿಕೊಂಡಿದ್ದಾರೆ.
ಫೇಸ್ ಬುಕ್, ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಮಾನ್ವಿತಾ ತಮ್ಮ ಹೊಸ ಹೆಸರನ್ನ ಅಪ್ ಡೇಟ್ ಮಾಡಿಕೊಂಡಿದ್ದಾರೆ. ಇನ್ಮುಂದೆ ನೀವು ಈಕೆಯನ್ನ ಮಾನ್ವಿತಾ ಕಾಮತ್ ಅಂತಲೇ ಕರೆಯಬೇಕು.
ಅಂದ್ಹಾಗೆ, ಮಾನ್ವಿತಾ ಸದ್ಯ 'ತಾರಕಾಸುರ', 'ಅರಿಷಡ್ವರ್ಗ' ಚಿತ್ರಗಳ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ.


Click it and Unblock the Notifications











