For Quick Alerts
  ALLOW NOTIFICATIONS  
  For Daily Alerts

  'ತಾರಕಾಸುರ'ನಿಗೆ ಜೋಡಿಯಾದ 'ಕೆಂಡಸಂಪಿಗೆ' ಮಾನ್ವಿತ

  By Bharath Kumar
  |

  ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಹೊಸ ಚಿತ್ರ 'ತಾರಕಾಸುರ' ಸ್ಯಾಂಡಲ್ ವುಡ್ ನಲ್ಲಿ ಹೊಸ ಭರವಸೆಯನ್ನ ಮೂಡಿಸಿದೆ. ಈಗಾಗಲೇ ಚಿತ್ರದ ಫಸ್ಟ್ ಟೀಸರ್ ಬಿಡುಗಡೆ ಮಾಡಿದ್ದ 'ತಾರಕಾಸುರ' ಮತ್ತೊಂದು ರಥಾವರ ಚಿತ್ರವಾಗಲಿದೆ ಎಂಬ ನಿರೀಕ್ಷೆ ಮೂಡಿಸಿದೆ.

  ನವನಟ ವೈಭವ್ 'ತಾರಕಾಸುರ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ನಾಯಕನಾಗಿ ಪರಿಚಯವಾಗುತ್ತಿದ್ದಾರೆ. ಈಗ ವೈಭವ್ ಗೆ ನಾಯಕಿ ಆಗಿ ಕೆಂಡಸಂಪಿಗೆ ಖ್ಯಾತಿಯ ಮಾನ್ವಿತ ಹರೀಶ್ ಆಯ್ಕೆ ಆಗಿದ್ದಾರೆ. ಚಿತ್ರದಲ್ಲಿ ಮಾನ್ವಿತ ಅವರು ಎರಡು ವಿಭಿನ್ನ ಶೇಡ್ ಗಳಲ್ಲಿ ಅಭಿನಯಿಸುತ್ತಿದ್ದು, ಜೂನ್ 25 ರಿಂದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರಂತೆ.

  'ರಥಾವರ' ನಿರ್ದೇಶಕನ 'ತಾರಕಾಸುರ' ಟೀಸರ್ ನೋಡಿ

  ಅಂದ್ಹಾಗೆ, ವೈಭವ್, ಕರ್ನಾಟಕ ಚಲನಚಿತ್ರ ಮಂಡಳಿಯ ಕಾರ್ಯದರ್ಶಿ ನರಸಿಂಹಲು ಅವರ ಪುತ್ರ. ವಿಶೇಷ ಅಂದ್ರೆ, ಈ ಚಿತ್ರವನ್ನ ನರಸಿಂಹಲು ಅವರೇ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಧರ್ಮ ವಿಶ್ ಸಂಗೀತ ನೀಡುತ್ತಿದ್ದು, ಕುಮಾರ್ ಗೌಡ ಅವರ ಛಾಯಾಗ್ರಹಣ ಇದೆ.

  English summary
  Tarakasura, directed by Chandrashekar Bandiyappa, has found its heroine in Manvitha Harish. The actress will be paired opposite debutant Vaibhav

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X