'ರಾಜಸ್ಥಾನ್ ಡೈರಿ' ಹುಡುಕುತ್ತಾ ಮರಾಠಿ ಇಂಡಸ್ಟ್ರಿಗೆ ಹೊರಟ ಮಾನ್ವಿತಾ

ಟಗರು ಪುಟ್ಟಿ ಅಂತನೇ ಖ್ಯಾತಿ ಗಳಿಸಿರುವ ನಟಿ ಮಾನ್ವಿತಾ ಹರೀಶ್ ಈಗ ಏನು ಮಾಡುತ್ತಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಯಾಕಂದ್ರೆ, ಸೂಪರ್ ಹಿಟ್ 'ಟಗರು' ಚಿತ್ರದ ನಂತರ 'ತಾರಕಾಸುರ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಮಾನ್ವಿತಾ ಆಮೇಲೆ ಪ್ರೇಕ್ಷಕರ ಮುಂದೆ ಬಂದಿಲ್ಲ.

ಮಾನ್ವಿತಾ ಈಗ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. 'ಟಗರು' ಖ್ಯಾತಿಯ ಪುನರ್ವಸು 'ದಾರಿ ತಪ್ಪಿದ ಮಗ'ನ ಜೊತೆ 'ಲಂಡನ್' ಸುತ್ತಾಡಿ, ಈಗ ರಾಜಸ್ಥಾನಕ್ಕೆ ಹೊರಟಿದ್ದಾರೆ. ಅಂದ್ರೆ, ಮಾನ್ವಿತಾ ಪ್ರವಾಸ ಮಾಡುತ್ತಿದ್ದಾರಾ ಅಂದುಕೊಳ್ಳಬೇಡಿ. ಇದೆಲ್ಲ ಮಾನ್ವಿತಾ ಅಭಿನಯಸುತ್ತಿರುವ ಸಿನಿಮಾಗಳು.

ಮಾನ್ವಿತಾ ಬಳಿ ಸದ್ಯ ಮೂರ್ನಾಲ್ಕು ಸಿನಿಮಾಗಳಿವೆ. ಕನ್ನಡ ಸಿನಿಮಾಗಳ ಜೊತೆಗೆ ಈಗ ಮಾನ್ವಿತಾ ಮರಾಠಿ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಹಾಗಿದ್ರೆ, ಟಗರು ಪೋರಿ ಮಾನ್ವಿತಾ ಅಭಿನಯಿಸುತ್ತಿರುವ ಮರಾಠಿ ಸಿನಿಮಾ ಯಾವುದು? ಯಾವಾಗ ಚಿತ್ರೀಕರಣ ಆರಂಭ? ಮುಂದೆ ಓದಿ.

'ರಾಜಸ್ಥಾನ್ ಡೈರೀಸ್' ಸಿನಿಮಾದಲ್ಲಿ ಮಾನ್ವಿತಾ

'ರಾಜಸ್ಥಾನ್ ಡೈರೀಸ್' ಸಿನಿಮಾದಲ್ಲಿ ಮಾನ್ವಿತಾ

ಮಾನ್ವಿತಾ ಹರೀಶ್ ಅಭಿನಯಿಸುತ್ತಿರುವ ಮರಾಠಿ ಚಿತ್ರದ ಹೆಸರು 'ರಾಜಸ್ಥಾನ್ ಡೈರೀಸ್'. ಕನ್ನಡ ಮತ್ತು ಮರಾಠಿ ಎರಡು ಭಾಷೆಯಲ್ಲೂ ತಯಾರಾಗುತ್ತಿದೆ. ಈ ಸಿನಿಮಾದಲ್ಲಿ ಮಾನ್ವಿತಾ ಅವರಿಗೆ ಜೋಡಿಯಾಗಿ ಯುವ ಪ್ರತಿಭೆ ಸುಮುಖ ಅಭಿನಯಿಸುತ್ತಿದ್ದಾರೆ. ಇದೊಂದು ರೋಮ್ಯಾಂಟಿಕ್ ಸಿನಿಮಾವಾಗಿದ್ದು, ನಂದಿತಾ ಯಾದವ್ ನಿರ್ದೇಶನ ಮಾಡ್ತಿದ್ದಾರೆ. ಯುಗಾದಿ ಹಬ್ಬದಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.

'ದಾರಿ ತಪ್ಪಿದ ಮಗ'ನ ಜೊತೆ ಮಾನ್ವಿತಾ

'ದಾರಿ ತಪ್ಪಿದ ಮಗ'ನ ಜೊತೆ ಮಾನ್ವಿತಾ

ಡಾ ರಾಜ್ ಕುಮಾರ್ ಮೊಮ್ಮಗ ಧೀರೆನ್ ರಾಮ್ ಕುಮಾರ್

ಅಭಿನಯಿಸುತ್ತಿರುವ 'ದಾರಿ ತಪ್ಪಿದ ಮಗ' ಚಿತ್ರದಲ್ಲಿ ಮಾನ್ವಿತಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಧೀರೆನ್ ಚೊಚ್ಚಲ ಚಿತ್ರದಲ್ಲಿ ಮಾನ್ವಿತಾ ವಿಭಿನ್ನ ಪಾತ್ರದ ಮೂಲಕ ಮಿಂಚಿದ್ದಾರೆ. ಈಗಾಗಲೆ ಟಾಕಿ ಪೋಷನ್ ಮುಗಿಸಿರುವ ಚಿತ್ರತಂಡ ಹಾಡಿನ ಚಿತ್ರೀಕರಣವನ್ನು ಬಾಕಿ ಇಟ್ಟುಕೊಂಡಿದೆ. ಧೀರೆನ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು ಧೀರೆನ್ ಅವರ ರಾ ಗೆಟಪ್ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಈ ಚಿತ್ರ ಕೃಷ್ಣ ರುಕ್ಕು ಖ್ಯಾತಿಯ ಅನಿಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಲಂಡನ್ ಪ್ರವಾಸ ಮುಗಿಸಿದ ಮಾನ್ವಿತಾ

ಲಂಡನ್ ಪ್ರವಾಸ ಮುಗಿಸಿದ ಮಾನ್ವಿತಾ

'ಲವ್ ಇನ್ ಲಂಡನ್' ಚಿತ್ರದಲ್ಲಿ ಮಾನ್ವಿತಾ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. 'ಲವ್ ಇನ್ ಲಂಡನ್' ನಾಗತಿಹಳ್ಳಿ ಚಂದ್ರ ಶೇಖರ್ ನಿರ್ದೇಶನದ ಚಿತ್ರ. ಈ ಸಿನಿಮಾದಲ್ಲಿ ನಾಯಕನಾಗಿ ವಸಿಷ್ಠ ಸಿಂಹ ಕಾಣಿಸಿಕೊಂಡಿದ್ದಾರೆ. 'ಟಗರು' ಚಿತ್ರದ ನಂತರ ವಸಿಷ್ಠ ಮತ್ತು ಮಾನ್ವಿತಾ ಈ ಚಿತ್ರದ ಮೂಲಕ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.

ರಿಲ್ಯಾಕ್ಸ್ ಎನ್ನುತ್ತಲೇ ಭಯ ಹುಟ್ಟಿಸಿದ ಮಾನ್ವಿತಾ

ರಿಲ್ಯಾಕ್ಸ್ ಎನ್ನುತ್ತಲೇ ಭಯ ಹುಟ್ಟಿಸಿದ ಮಾನ್ವಿತಾ

'ಟಗರು' ಚಿತ್ರದ ನಂತರ ಮಾನ್ವಿತಾ 'ರಿಲ್ಯಾಕ್ಸ್ ಸತ್ಯಾ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾ ಸೆಟ್ಟೇರಿ ವರ್ಷವೇ ಆದ್ರು ಇನ್ನು ರಿಲೀಸ್ ಆಗಿಲ್ಲ. ಟ್ರೈಲರ್ ಮೂಲಕ ಪ್ರೇಕ್ಷಕರ ಗಮನ ಸಳೆದಿರುವ 'ರಿಲ್ಯಾಕ್ಸ್ ಸತ್ಯ' ಚಿತ್ರಕ್ಕೆ ಅಕಿರಾ ಖ್ಯಾತಿಯ ನಿರ್ದೇಶಕ ನವೀನ್ ರೆಡ್ಡಿ ಅಕ್ಷನ್ ಕಟ್ ಹೇಳಿದ್ದಾರೆ.

ಆರ್ ಜಿ ವಿ ಸಿನಿಮಾ ಏನಾಯಿತು?

ಆರ್ ಜಿ ವಿ ಸಿನಿಮಾ ಏನಾಯಿತು?

ಕನ್ನಡ ಮತ್ತು ಒಂದು ಮರಾಠಿ ಚಿತ್ರಗಳನ್ನು ಮಾಡುತ್ತಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಮಾನ್ವಿತಾ ಇದೆಲ್ಲದರ ಜೊತೆಗೆ ತೆಲುಗು ನಿರ್ದೇಶಕ ರಾಮ್ ಗೋಪಾಲ್ ವರ್ಮ ಸಿನಿಮಾದಲ್ಲೂ ಅಭಿನಯಿಸುತ್ತಾರೆ ಎನ್ನುವ ಸುದ್ದಿ ಕೂಡ ಇದೆ. ಆದ್ರೆ, ಮಾನ್ವಿತಾ ಮತ್ತು ಆರ್ ಜಿ ವಿ ಸಿನಿಮಾದ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ.

More from Filmibeat

English summary
Kannada actress Manvitha Harish next movie 'Rajastan Diaries' will start from Ugadi. Manvitha is busy in four movies including Marathi movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X