»   » ಟಗರು ಪೋರಿ ಮಾನ್ವಿತಾಗೆ ಒಲಿದು ಬಂದ ಹೊಸ ಅದೃಷ್ಟ

ಟಗರು ಪೋರಿ ಮಾನ್ವಿತಾಗೆ ಒಲಿದು ಬಂದ ಹೊಸ ಅದೃಷ್ಟ

Posted By:
Subscribe to Filmibeat Kannada

'ಕೆಂಡಸಂಪಿಗೆ' ಚಿತ್ರದ ಮೂಲಕ ಕಂಪು ಸೂಸಿದ ನಟಿ ಮಾನ್ವಿತಾ ಹರೀಶ್ ಸದ್ಯ, ಶಿವರಾಜ್ ಕುಮಾರ್ ಅಭಿನಯದ 'ಟಗರು' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಕಥೆ ಮತ್ತು ಪಾತ್ರದ ಆಯ್ಕೆಯಲ್ಲಿ ತುಂಬ ಕಾಳಜಿ ವಹಿಸುವ ಟಗರು ಪೋರಿ ಈ ಮಧ್ಯೆ ಸದ್ದಿಲ್ಲದೇ ಮತ್ತೊಂದು ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ.['ಟಗರು' ಚಿತ್ರದಲ್ಲಿ ಶಿವಣ್ಣನಿಗೆ ಜೋಡಿಯಾಗಿ ಮಾನ್ವಿತಾ]

ಹೌದು, 'ಅಕಿರ' ಖ್ಯಾತಿಯ ನವೀನ್ ರೆಡ್ಡಿ ಆಕ್ಷನ್-ಕಟ್ ಹೇಳಲಿರುವ ಇನ್ನೂ ಹೆಸರಿಡದ ಚಿತ್ರಕ್ಕೆ ಮಾನ್ವಿತಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಚಿತ್ರದಲ್ಲಿ ಮಾನ್ವಿತಾಗೆ ಜೋಡಿಯಾಗಿ ನವ ನಟ ಪ್ರಭು ಅಭಿನಯಿಸಲಿದ್ದಾರೆ. ಪ್ರಭು ಸದ್ಯ, ಬಿಡುಗಡೆಗೆ ಸಜ್ಜಾಗುತ್ತಿರುವ 'ಉರ್ವಿ' ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಭು ಮತ್ತು ಮಾನ್ವಿತಾ ಜತೆಗೆ 'ಉಗ್ರಂ' ಖ್ಯಾತಿಯ ಮಂಜು ಕೂಡ ಪ್ರಮುಖ ಪಾತ್ರ ನಿಭಾಯಿಸಲಿದ್ದಾರಂತೆ.['ಟಗರು' ಗೊಂಬೆ ಮಾನ್ವಿತಾ ಹೊಸ ಲುಕ್ ನೋಡಿದ್ರೆ ನೀವು ಶಾಕ್ ಆಗ್ತೀರಾ]

 Manvitha Harish's Next Film with Akira Director

ಅಂದಹಾಗೆ, ಇದು ಕಾಮಿಡಿ ಥ್ರಿಲ್ಲರ್ ಸಬ್ಜೆಕ್ಟ್ ಆಗಿದ್ದು, ಜತೆಗೆ ಸಸ್ಪೆನ್ಸ್ ನಿಂದ ಕೂಡಿದೆಯಂತೆ. ಇದೇ ಮೊದಲ ಬಾರಿಗೆ ಇಂತಹ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿರುವುದರಿಂದ ಮಾನ್ವಿತಾ ಸಖತ್ ಎಕ್ಸೈಟ್ ಆಗಿದ್ದಾರಂತೆ.[ಚಿತ್ರಗಳು: 'ಟಗರು' ಶೂಟಿಂಗ್ ನಲ್ಲಿ ಶಿವಣ್ಣ, ಮಾನ್ವಿತಾ ಸ್ಟೈಲಿಶ್ ಲುಕ್!]

 Manvitha Harish's Next Film with Akira Director

ಎಲ್ಲವೂ ಅಂದುಕೊಂಡಂತೆ ನಡೆದರೆ ಮಾರ್ಚ್ ಕೊನೇ ವಾರದಲ್ಲಿ ಈ ಚಿತ್ರಕ್ಕೆ ಶೂಟಿಂಗ್ ಶುರುವಾಗಲಿದೆ. ಯೋಗಿ ಕ್ಯಾಮರಾ, ಶ್ರೀಕಾಂತ್ ಸಂಕಲನ ಇರಲಿದೆ. ಈ ಚಿತ್ರದ ಮೂಲಕ ಹೊಸ ಸಂಗೀತ ನಿರ್ದೇಶಕರೊಬ್ಬರನ್ನು ಗಾಂಧಿನಗರಕ್ಕೆ ಪರಿಚಯಿಸಲಿದ್ದಾರಂತೆ ನಿರ್ದೇಶಕರು.

English summary
Manvitha Harish, who is currently busy with Tagaru, has signed her next project with Akira director Naveen Reddy. she will be paired opposite Prabhu, who has just debuted in the yet to be released film Urvi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada