ಕನಸಿನ ರಾಜನ ಬಗ್ಗೆ ಬಾಯ್ಬಿಟ್ಟ ಕೆಂಡಸಂಪಿಗೆ ಮಾನ್ವಿತಾ
Recommended Video

ಕೆಂಡಸಂಪಿಗೆ ಅಂದ ಕೂಡಲೆ ಮೊದಲಿಗೆ ನೆನಪಾಗುವುದು ನಟಿ ಮಾನ್ವಿತಾ ಹರೀಶ್. ಹೌದು 'ಕೆಂಡಸಂಪಿಗೆ' ಸಿನಿಮಾ ಮೂಲಕವೇ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಮಾನ್ವಿತಾ ಇಲ್ಲಿಯವರೆಗೂ ಮದುವೆ ಬಗ್ಗೆ ತುಟಿ ಬಿಚ್ಚಿರಲಿಲ್ಲ. 'ಟಗರು' ಸಕ್ಸಸ್ ಖುಷಿಯಲ್ಲಿರುವ 'ಟಗರು' ಪುಟ್ಟಿಯ ವಿವಾಹದ ಬಗ್ಗೆ ಯಾರು ಹೆಚ್ಚೆನೂ ತಲೆ ಕೆಡಿಸಿಕೊಂಡಿರಲಿಲ್ಲ.
ಯಾಕೆಂದ್ರೆ ಮಾನ್ವಿತಾ ಚಿತ್ರರಂಗದವರಿಗೆ ಇನ್ನೂ ಕೂಡ ಚಿಕ್ಕ ಹುಡುಗಿ ಅಂತಲೇ ಅನ್ನಿಸುತ್ತಾರೆ. ಆದರೆ ಈಗ ಮಾನ್ವಿತಾ ತನ್ನ ಕನಸಿನ ರಾಜನ ಬಗ್ಗೆ ಮಾತನಾಡಿದ್ದಾರೆ. ತಾನು ಮದುವೆ ಆಗುವ ಹುಡುಗ ಹೇಗಿರಬೇಕೆಂದು ತಮ್ಮ ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದಾರೆ.

ಸಾಮಾನ್ಯವಾಗಿ ಎಲ್ಲಾ ಹುಡುಗಿಯರು ಬಯಸುವಂತೆ ಮಾನ್ವಿತಾಗೂ ಒಳ್ಳೆ ಮನಸ್ಸಿರುವ ಹುಡಗಬೇಕಂತೆ. ಅದಷ್ಟೇ ಅಲ್ಲದೆ ಘನೆತೆವುಳ್ಳ ವ್ಯಕ್ತಿ ಆದರೆ ಇನ್ನು ಚೆನ್ನಾಗಿರುತ್ತೆ ಎನ್ನುವುದು ಕೆಂಡಸಂಪಿಗೆಯ ಆಸೆ. ಪುಸ್ತಕ ಓದುವ ಹುಡುಗರ ಗಮನಕ್ಕೆ ಈ ವಿಷ್ಯ ಇರಲಿ ಯಾಕಂದರೆ ಮಾನ್ವಿತಾ ಗೆ ಪುಸ್ತಕ ಓದುವ ಹುಡುಗರು ಎಂದರೆ ಪ್ರೀತಿ ಅಂತೆ. ಹೆಚ್ಚು ವಿಚಾರಗಳನ್ನು ತಿಳಿದುಕೊಂಡಿದ್ದರೆ ಖುಷಿಯಂತೆ.

ಟಗರು ಪುಟ್ಟಿಗೆ ಸಂಗೀತ ಅಂದ್ರೆ ತುಂಬಾ ಇಷ್ಟ. ಹಾಗಾಗಿ ಹಾಡೋದಕ್ಕೆ ಆಗಿಲ್ಲ ಅಂದರೂ, ಹಾಡು ಬರೆಯೋದಕ್ಕೆ ಬಂದರೆ ಉತ್ತಮ ಅಂತಾರೆ. ಇನ್ನೂ ಸಿನಿಮಾ ಬಗ್ಗೆ ಹೆಚ್ಚು ಆಸಕ್ತಿ ಇದ್ದರೆ ನನಗೆ ಮಾತನಾಡಲು ಅಭಿಪ್ರಾಯ ಹಂಚಿಕೊಳ್ಳಲು ಉಪಯೋಗವಾಗುತ್ತೆ ಎಂದಿದ್ದಾರೆ. ಒಟ್ಟಾರೆ ಟಗರು ಪುಟ್ಟಿ ಸಾಕಷ್ಟು ದಿನಗಳ ನಂತರ ತಮ್ಮ ಕನಸಿನ ಹುಡುಗನ ಬಗ್ಗೆ ನಾಚುತ್ತಲೇ ಹೇಳಿಕೊಂಡಿದ್ದಾರೆ.


Click it and Unblock the Notifications











