ತೆಲುಗು ಸಿನಿಮಾರಂಗಕ್ಕೆ ಕಾಲಿಟ್ಟ ಕನ್ನಡದ ಮತ್ತೋರ್ವ ಖ್ಯಾತ ನಟಿ
ತೆಲುಗು ಸಿನಿಮಾರಂಗದಲ್ಲೀಗ ಕನ್ನಡದ ಸುಂದರಿಯರ ಹವಾ ಜೋರಾಗಿದೆ. ಟಾಲಿವುಡ್ ನಲ್ಲಿ ಮಿಂಚುತ್ತಿರುವ ಸಾಕಷ್ಟು ನಟಿಯರಲ್ಲಿ ಕನ್ನಡದವರೇ ಹೆಚ್ಚಾಗಿದ್ದಾರೆ. ರಶ್ಮಿಕಾ ಮಂದಣ್ಣ, ನಬಾ ನಟೇಶ್, ರಚಿತಾ ರಾಮ್, ಶ್ರೀಲೀಲಾ, ಕೃತಿ ಶೆಟ್ಟಿ, ನೇಹಾ ಶೆಟ್ಟಿ ಹೀಗೆ ಸಾಕಷ್ಟು ಕನ್ನಡದ ನಟಿಯರು ತೆಲುಗು ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.
Recommended Video
ಇದೀಗ ಮತ್ತೋರ್ವ ಕನ್ನಡದ ನಟಿ ತೆಲುಗು ಸಿನಿಮಾರಂಗದ ಕಡೆ ಮುಖ ಮಾಡಿದ್ದಾರೆ. ಅದು ಮತ್ಯಾರು ಅಲ್ಲ ಟಗರು ಪುಟ್ಟಿ ಎಂದೇ ಖ್ಯಾತಿಗಳಿಸಿರುವ ನಟಿ ಮಾನ್ವಿತಾ ಕಾಮತ್. ಮಾನ್ವಿತಾ ತೆಲುಗಿನ ಚೊಚ್ಚಲ ಸಿನಿಮಾಗೆ ಸಹಿ ಮಾಡಿದ್ದು, ಈಗಾಗಲೇ ಹೊಸ ಸಿನಿಮಾದ ಮುಹೂರ್ತ ಕೂಡ ನೆರವೇರಿದೆ.
ಈ ಬಗ್ಗೆ ಮಾನ್ವಿತಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಚಿತ್ರದ ಮುಹೂರ್ತದ ಫೋಟೋವನ್ನು ಹಂಚಿಕೊಂಡು ಮಾನ್ವಿತಾ ಸಂತಸ ಪಟ್ಟಿದ್ದಾರೆ. ಅಂದಹಾಗೆ ಮೊದಲ ತೆಲುಗು ಸಿನಿಮಾಗೆ 'ಮಲ್ಲಿ ಮೊದಲೈಂದಿ' ಎಂದು ಶೀರ್ಷಿಕೆ ಇಡಲಾಗಿದೆ.

ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಮಾನ್ವಿತಾ ಜೊತೆ ಯಾರೆಲ್ಲ ನಟಿಸುತ್ತಾರೆ, ನಿರ್ದೇಶಕ ಯಾರು? ಎನ್ನುವ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ. ಮುಹೂರ್ತದ ಫೋಟೋ ಹಂಚಿಕೊಂಡು ಸದ್ಯದಲ್ಲೇ ಹೆಚ್ಚಿನ ಮಾಹಿತಿ ನೀಡುವುದಾಗಿ ಹೇಳಿದ್ದಾರೆ.
ಮಾನ್ವಿತಾ ಕೊನೆಯದಾಗಿ ಕನ್ನಡದಲ್ಲಿ ಇಂಡಿಯಾ V/S ಇಂಗ್ಲೆಂಡ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ರಾಜಸ್ಥಾನ್ ಡೈರಿ ಮತ್ತು ರೈಂಬೊ ಸಿನಿಮಾ ಮುಗಿಸಿರುವ ಮಾನ್ವಿತಾ ಇದೀಗ ತೆಲುಗಿನಲ್ಲಿ ಮಿಂಚಲು ಸಜ್ಜಾಗಿದ್ದಾರೆ.


Click it and Unblock the Notifications











