ಬಾಲಿವುಡ್ ಗೆ ಜಿಗಿಯಲು ಸಜ್ಜಾದ ಟಗರು ಪುಟ್ಟಿ ಮಾನ್ವಿತಾ
'ಟಗರು' ಚಿತ್ರದಲ್ಲಿ ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದ ಮಾನ್ವಿತಾ ಕಾಮತ್ ಇದೀಗ ಬಾಲಿವುಡ್ ಕಡೆ ಮುಖ ಮಾಡಿದ್ದಾರೆ. ಖ್ಯಾತ ಫೋಟೋಗ್ರಾಫರ್ ಮೋಹಿತ್ ಹೊಲಾನಿ ನಡೆಸಿದ ಫೋಟೋ ಶೂಟ್ ನಲ್ಲಿ ಮಾನ್ವಿತಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಸದ್ಯ ಮುಂಬೈನಲ್ಲೇ ಬೀಡು ಬಿಟ್ಟಿರುವ ಮಾನ್ವಿತಾ ಕಾಮತ್, ಬಾಲಿವುಡ್ ಗೆ ಕಾಲಿಡಲು ಸಕಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
'ಟಗರು' ಚಿತ್ರದ ಬಳಿಕ ಮಾನ್ವಿತಾ ಕಾಮತ್ ಅದೃಷ್ಟ ಖುಲಾಯಿಸಿತು. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಇನ್ನೂ ಹೆಸರಿಡದ ಸಿನಿಮಾ ಹಾಗೂ ಧೀರೇನ್ ರಾಮ್ ಕುಮಾರ್ ಅಭಿನಯದ ಚೊಚ್ಚಲ ಚಿತ್ರ 'ದಾರಿ ತಪ್ಪಿದ ಮಗ'ದಲ್ಲಿ ಮಾನ್ವಿತಾ ಅಭಿನಯಿಸಲಿದ್ದಾರೆ.

ಇದಿಷ್ಟೇ ಅಲ್ಲ, ಮಾನ್ವಿತಾ ಕೈಯಲ್ಲಿ ಇನ್ನೂ ಹಲವು ಆಫರ್ ಗಳಿವೆ. ಪಾತ್ರಗಳನ್ನು ಅಳೆದು ತೂಗಿ ಮಾನ್ವಿತಾ ಆಯ್ಕೆ ಮಾಡುತ್ತಿದ್ದಾರೆ. ಬಾಲಿವುಡ್ ಪ್ರಾಜೆಕ್ಟ್ ಕುರಿತು ಮಾತುಕತೆ ನಡೆದಿದ್ದು, ಸದ್ಯದಲ್ಲೇ ಗುಟ್ಟನ್ನು ರಟ್ಟು ಮಾಡುವುದಾಗಿ ಮಾನ್ವಿತಾ ಹೇಳಿಕೊಂಡಿದ್ದಾರೆ.
English summary
Kannada Actress Manvitha Kamath is planning to make Bollywood Debut.


Click it and Unblock the Notifications