For Quick Alerts
  ALLOW NOTIFICATIONS  
  For Daily Alerts

  ಭರವಸೆ ಈಡೇರಿಸಿದ ಯಶ್, ಕಲಾವಿದರಿಗೆ ತಲುಪಿದ ಹಣ

  |

  ಕೊರೊನಾ ಲಾಕ್‌ಡೌನ್‌ನಿಂದಾಗಿ ಕಳೆದ ವರ್ಷದಿಂದಲೂ ಸಿನಿಮಾ ಕಾರ್ಮಿಕರಿಗೆ, ಕಲಾವಿದರಿಗೆ ಕೆಲಸ ಇಲ್ಲದಂತಾಗಿದೆ. ಸಿನಿಮಾ ಕಾರ್ಮಿಕರು, ಪೋಷಕ ಕಲಾವಿದರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ.

  ಕೊಟ್ಟ ಮಾತನ್ನು ಎರಡೇ ದಿನದಲ್ಲಿ ಉಳಿಸಿಕೊಂಡ ಯಶ್ | Filmibeat Kannada

  ಸಿನಿಮಾ ಕಾರ್ಮಿಕರ ಹಾಗೂ ಕಲಾವಿದರ ಸಂಕಷ್ಟಕ್ಕೆ ಸ್ಪಂದಿಸಿರುವ ನಟ ಯಶ್, ತಮ್ಮ ಸಂಪಾದನೆಯ ಹಣದಿಂದ ಕಲಾವಿದರ ಹಾಗೂ ಸಿನಿಮಾ ಕಾರ್ಮಿಕರ ಖಾತೆಗಳಿಗೆ ಐದು ಸಾವಿರ ಹಣ ಹಾಕುವುದಾಗಿ ನಿನ್ನೆಯಷ್ಟೆ ಘೋಷಿಸಿದ್ದರು. ಯಶ್ ಅವರ ಈ ಮಹತ್ವದ ಕಾರ್ಯಕ್ಕೆ ನಟ ಉಪೇಂದ್ರ ಸೇರಿದಂತೆ ಹಲವಾರು ಮಂದಿ ಅಭಿನಂದನೆಗಳನ್ನು ಸಲ್ಲಿಸಿದ್ದರು.

  3 ಸಾವಿರ ಸಿನಿ ಕುಟುಂಬಗಳಿಗೆ ತಲಾ 5 ಸಾವಿರ ನೆರವು ಘೋಷಿಸಿದ ಯಶ್3 ಸಾವಿರ ಸಿನಿ ಕುಟುಂಬಗಳಿಗೆ ತಲಾ 5 ಸಾವಿರ ನೆರವು ಘೋಷಿಸಿದ ಯಶ್

  ಹೇಳಿದ್ದ ಒಂದೇ ದಿನದಲ್ಲಿ ಕಾರ್ಯ ಆರಂಭ ಮಾಡಿರುವ ನಟ ಯಶ್, ಹಲವಾರು ಮಂದಿ ಕಾರ್ಮಿಕರಿಗೆ, ಕಲಾವಿದರ ಖಾತೆಗಳಿಗೆ 5000 ಹಣ ಜಮಾವಣೆ ಮಾಡಿದ್ದಾರೆ.

  ಮೀಸೆ ಪ್ರಕಾಶ್, ಮಂಜೇಗೌಡ, ಮೈಸೂರು ಶಿವಪ್ರಕಾಶ್ ಇನ್ನೂ ಹಲವಾರು ಮಂದಿ ಕಲಾವಿದರು, ಸಿನಿಮಾ ಕಾರ್ಮಿಕರುಗಳು ತಮ್ಮ ಖಾತೆಗೆ ಯಶ್ ಹಾಕಿರುವ ಹಣ ಬಂದಿರುವುದಾಗಿ ಖಾತ್ರಿ ಪಡಿಸಿದ್ದಾರೆ. ಕೆಲವರು ಸಾಮಾಜಿಕ ಜಾಲತಾಣ ಮೂಲಕ ಯಶ್‌ಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

  ಮೂರು ಸಾವಿರಕ್ಕೂ ಹೆಚ್ಚು ಕಲಾವಿದರಿಗೆ 5000 ಹಣವನ್ನು ಖಾತೆಗೆ ಹಾಕುವುದಾಗಿ ಯಶ್ ಹೇಳಿದ್ದರು. ಅದರಂತೆ 1.50 ಕೋಟಿ ರುಪಾಯಿಗಳನ್ನು ಯಶ್ ಸಿನಿಮಾ ಕಾರ್ಮಿಕರು ಮತ್ತು ಕಲಾವಿದರಿಗೆ ನೀಡುತ್ತಿದ್ದಾರೆ.

  ಕಲಾವಿದರ ಹಾಗೂ ಕಾರ್ಮಿಕರ ಖಾತೆಗಳ ಸಂಖ್ಯೆಗಳನ್ನು ಪಡೆದುಕೊಳ್ಳಲು ಒಕ್ಕೂಟ ಹಾಗೂ ಅಕಾಡೆಮಿಯ ನೆರವನ್ನು ಯಶ್ ಪಡೆದುಕೊಂಡಿದ್ದಾರೆ. ಸಾ.ರಾ.ಗೋವಿಂದು ಸೇರಿದಂತೆ ಹಲವರು ಯಶ್‌ಗೆ ಈ ಮಹತ್‌ ಕಾರ್ಯದಲ್ಲಿ ನೆರವು ನೀಡಿದ್ದಾರೆ. ಯಶ್‌ ತಮ್ಮ ದುಡಿಮೆಯ ಹಣದಿಂದ ಸಿನಿ ಕಾರ್ಮಿಕರು, ಕಲಾವಿದರ ಕುಟುಂಬಗಳಿಗೆ ನೆರವಾಗಿದ್ದಾರೆ.

  English summary
  Actor Yash announced yesterday that he will deposit 5000 money to movie artists and labors. Today many artists and labors confirmed that they received money.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X