ಸಂಕ್ರಾಂತಿ ಸಂದರ್ಭ ಬಿಡುಗಡೆ ಆದ ಕನ್ನಡ ಸಿನಿಮಾ ಪೋಸ್ಟರ್‌ಗಳು

ಚಿತ್ರರಂಗಕ್ಕೆ ಈ ಬಾರಿಯ ಸಂಕ್ರಾಂತಿ ಹಬ್ಬ ಅಷ್ಟೇನೂ ಚೇತೋಹಾರಿಯಾಗಿಲ್ಲ, ಕಾರಣ ಕೊರೊನಾ. ಸಂಕ್ರಾಂತಿ ಹಬ್ಬಕ್ಕೆ ರಾಜ್ಯದಾದ್ಯಂತ ಚಿತ್ರಮಂದಿರಗಳು ಬಾಗಿಲು ಹಾಕಿರುತ್ತವೆ.

ಕೊರೊನಾ ಹೆಚ್ಚಾಗಿರುವ ಕಾರಣ ರಾಜ್ಯದೆಲ್ಲೆಡೆ ವೀಕೆಂಡ್ ಕರ್ಫ್ಯೂ ಮತ್ತು ನೈಟ್ ಕರ್ಫ್ಯೂ ಹೇರಲಾಗಿದೆ. ಚಿತ್ರಮಂದಿರಗಳಲ್ಲಿ ಶೇ 50 ಪ್ರತಿಷತ ಪ್ರೇಕ್ಷಕರಿಗಷ್ಟೆ ಅವಕಾಶ ನೀಡಲಾಗಿದೆ ಹಾಗೂ ವಾರಾಂತ್ಯಗಳಲ್ಲಿ ಚಿತ್ರಮಂದಿರಗಳನ್ನು ಬಂದ್ ಮಾಡುವಂತೆ ಆದೇಶ ನೀಡಲಾಗಿದೆ. ಚಿತ್ರಮಂದಿರಗಳು ಇಲ್ಲದ ಕಾರಣ ಚಿತ್ರರಂಗ ಸಿನಿಮಾ ಬಿಡುಗಡೆ ಇಲ್ಲದೆ ಮಂಕಾಗಿದೆ.

ಆದರೆ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಹೊಸ ಭರವಸೆಗಳೊಂದಿಗೆ ಕೆಲವು ಚಿತ್ರತಂಡಗಳು ತಮ್ಮ ಹೊಸ ಸಿನಿಮಾ ಘೋಷಿಸಿವೆ. ಕೆಲವು ಚಿತ್ರತಂಡಗಳೂ ಸಿನಿಮಾ ಪೋಸ್ಟರ್ ಪ್ರಕಟಿಸಿವೆ. ಅಂಥಹಾ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ.

ಧನಂಜಯ್ ನಟನೆಯ 'ಹೊಯ್ಸಳ'

ಧನಂಜಯ್ ನಟನೆಯ 'ಹೊಯ್ಸಳ'

'ರತ್ನನ್ ಪ್ರಪಂಚ' ಸಿನಿಮಾ ಅದ್ಧೂರಿ ಹಿಟ್ ಆದ ಬಳಿಕ ಧನಂಜಯ್ ಎರಡನೇ ಬಾರಿ ಕೆಆರ್‌ಜಿ ಪ್ರೊಡಕ್ಷನ್ ಜೊತೆ ಕೈಜೋಡಿಸಿದ್ದು, 'ಹೊಯ್ಸಳ' ಹೆಸರಿನ ಸಿನಿಮಾ ಘೋಷಿಸಿದ್ದಾರೆ. ಈ ಸಿನಿಮಾದಲ್ಲಿ ಡಾಲಿ ಧನಂಜಯ್ ಪೊಲೀಸ್ ಪಾತ್ರದಲ್ಲಿ ನಟಿಸಲಿದ್ದಾರೆ. ಸಿನಿಮಾವನ್ನು ವಿಜಯ್ ಎನ್ ನಿರ್ದೇಶನ ಮಾಡುತ್ತಿದ್ದಾರೆ. 'ಹೊಯ್ಸಳ' ಸಿನಿಮಾವನ್ನು ಶಿವರಾಜ್ ಕುಮಾರ್ ಅವರಿಗಾಗಿ ಕೋಟಿ ರಾಮು ನಿರ್ಮಾಣ ಮಾಡುವ ಆಸೆ ಹೊಂದಿದ್ದರು ಆದರೆ ಆ ಆಸೆ ಈಡೇರಲಿಲ್ಲ. ಈಗ ಧನಂಜಯ್ 'ಹೊಯ್ಸಳ' ಸಿನಿಮಾ ಮಾಡುತ್ತಿದ್ದಾರೆ.

'ಅಂದೊಂದಿತ್ತು ಕಾಲ'

'ಅಂದೊಂದಿತ್ತು ಕಾಲ'

ರಾಘವೇಂದ್ರ ರಾಜ್‌ಕುಮಾರ್ ಪುತ್ರ ವಿನಯ್ ರಾಜ್‌ಕುಮಾರ್ ನಟನೆಯ 'ಅಂದೊಂದಿತ್ತು ಕಾಲ' ಸಿನಿಮಾವು ಸಂಕ್ರಾಂತಿ ವಿಶೇಷವಾಗಿ ಹೊಸ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ. ಕೀರ್ತಿ ನಿರ್ದೇಶನದ ಈ ಸಿನಿಮಾದಲ್ಲಿ ವಿನಯ್ ರಾಜ್‌ಕುಮಾರ್ ಜೊತೆಗೆ ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಿದ್ದಾರೆ. ವಿಶೇಷವೆಂದರೆ ಈ ಸಿನಿಮಾಕ್ಕೆ ಕ್ಲಾಪ್ ಮಾಡಿದ್ದಿದ್ದು ಪುನೀತ್ ರಾಜ್‌ಕುಮಾರ್. ಈ ಸಿನಿಮಾವು 1990-2006 ರ ನಡುವೆ ನಡೆವ ಕತೆಯನ್ನು ಒಳಗೊಂಡಿದೆ. ಭುವನ್ ಸಿನಿಮಾಸ್‌ ಮೂಲಕ ಸುರೇಶ್ ಎಂಬುವರು ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.

ರವಿಚಂದ್ರನ್ ಮಗನ 'ತ್ರಿವಿಕ್ರಮ'

ರವಿಚಂದ್ರನ್ ಮಗನ 'ತ್ರಿವಿಕ್ರಮ'

ನಟ ರವಿಚಂದ್ರನ್ ಪುತ್ರ ವಿಕ್ರಂ ರವಿಚಂದ್ರನ್ ನಟನೆಯ ಹೊಸ ಸಿನಿಮಾ 'ತ್ರಿವಿಕ್ರಮ' ಸಿನಿಮಾದ ಪೋಸ್ಟರ್ ಅನ್ನು ಸಂಕ್ರಾಂತಿ ಸಂದರ್ಭ ಬಿಡುಗಡೆ ಮಾಡಲಾಗಿದೆ. ಸಹನ ಮೂರ್ತಿ ನಿರ್ದೇಶನದ ಈ ಸಿನಿಮಾದಲ್ಲಿ ಆಕಾಂಕ್ಷಾ ಶರ್ಮಾ, ಅಕ್ಷರಾ ಗೌಡ ನಾಯಕಿಯರಾಗಿ ನಟಿಸಿದ್ದಾರೆ. ಸಿನಿಮಾವನ್ನು ಸೋಮಣ್ಣ ನಿರ್ಮಾಣ ಮಾಡಿದ್ದಾರೆ. ವಿಕ್ರಂ ರವಿಚಂದ್ರನ್‌ಗೆ ಇದು ಮೊದಲ ಸಿನಿಮಾ.

ಧನ್ವೀರ್ ಮೂರನೇ ಸಿನಿಮಾ

ಧನ್ವೀರ್ ಮೂರನೇ ಸಿನಿಮಾ

ನಟ ಧನ್ವೀರ್‌ರ ಮೂರನೇ ಸಿನಿಮಾದ ಪೋಸ್ಟರ್ ಇಂದು ಬಿಡುಗಡೆ ಆಗಿದೆ. ಸಿನಿಮಾಕ್ಕೆ 'ವಾಮನ' ಎಂಬ ಮಾಸಿ ಹೆಸರು ಇಡಲಾಗಿದ್ದು, ಇಂದು ಬಿಡುಗಡೆ ಆಗಿರುವ ಪೋಸ್ಟರ್‌ನಲ್ಲಿ ರಕ್ತ ಮೆತ್ತಿದ ಚಾಕು ಹಿಡಿದು ಖತರ್‌ನಾಕ್ ಲುಕ್‌ನಲ್ಲಿ ಧನ್ವೀರ್ ಕುಳಿತಿದ್ದಾರೆ. ಸಿನಿಮಾವನ್ನು ಶಂಕರ್ ರಾಮನ್ ಎಸ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾವನ್ನು ಚೇತನ್ ಕುಮಾರ್ ಗೌಡ ನಿರ್ಮಾಣ ಮಾಡಿದ್ದಾರೆ.

'ಹರಿಕತೆ ಅಲ್ಲ ಗಿರಿ ಕತೆ'

'ಹರಿಕತೆ ಅಲ್ಲ ಗಿರಿ ಕತೆ'

ರಿಷಬ್ ಶೆಟ್ಟಿ ನಟನೆ ಹಾಸ್ಯಮಯ ಕೌಟುಂಬಿಕ ಸಿನಿಮಾ 'ಹರಿ ಕತೆ ಅಲ್ಲ ಗಿರಿ ಕತೆ' ಸಿನಿಮಾದ ಪೋಸ್ಟರ್ ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆ ಆಗಿದೆ. ಸಿನಿಮಾವನ್ನು ಕರಣ್ ಅನಂತ್ ಮತ್ತು ಅನಿರುದ್ಧ ಮಹೇಶ್ ನಿರ್ದೇಶನ ಮಾಡಿದ್ದಾರೆ. ಪೋಸ್ಟರ್ ಬಹಳ ವಿಭಿನ್ನವಾಗಿಯೂ ಗಮನ ಸೆಳೆವಂತೆ ಇದೆ. ಸಿನಿಮಾವನ್ನು ರಿಷಬ್ ಶೆಟ್ಟಿ ಫಿಲಮ್ಸ್‌ ಪ್ರೆಸೆಂಟ್ ಮಾಡುತ್ತಿದ್ದು, ಸಿನಿಮಾಕ್ಕೆ ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ.

'ಬನಾರಸ್' ಪೋಸ್ಟರ್ ಬಿಡುಗಡೆ

'ಬನಾರಸ್' ಪೋಸ್ಟರ್ ಬಿಡುಗಡೆ

ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ನಟನೆಯ ಮೊದಲ ಸಿನಿಮಾ 'ಬನಾರಸ್' ಸಿನಿಮಾದ ಪ್ರೇಮಮಯ ಪೋಸ್ಟರ್ ಸಂಕ್ರಾಂತಿ ಪ್ರಯುಕ್ತ ಬಿಡುಗಡೆ ಆಗಿದೆ. ಈಗ ಬಿಡುಗಡೆ ಆಗಿರುವ ಪೋಸ್ಟರ್ ಅನ್ನು ಪುನೀತ್ ರಾಜ್‌ಕುಮಾರ್ ಬಿಡುಗಡೆ ಮಾಡಬೇಕಿತ್ತು. ಆದರೆ ಅಪ್ಪು ನಿಧನದಿಂದ ಅದು ಸಾಧ್ಯವಾಗಿರಲಿಲ್ಲ. ಈಗ ಪೋಸ್ಟರ್ ಬಿಡುಗಡೆ ಆಗಿದ್ದು, ಪೋಸ್ಟರ್‌ನಲ್ಲಿ ಪಂಚೆ-ಶಲ್ಯ ತೊಟ್ಟು ನಾಯಕಿ ಸೋನಲ್ ಮೊಂಥೇರೋ ಜೊತೆ ದೀಪ ಹಚ್ಚುತ್ತಿರುವ ಚಿತ್ರ ಪೋಸ್ಟರ್‌ನಲ್ಲಿದೆ. ಈ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದೆ. ಸಿನಿಮಾವನ್ನು ತಿಲಕ್ ರಾಜ್ ಬಲ್ಲಾಳ್ ನಿರ್ಮಾಣ ಮಾಡಿದ್ದಾರೆ.

More from Filmibeat

English summary
Many Kannada movie posters released on the occasion of Sankranthi festival. Here is list and newly released posters.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X