ಚಿತ್ರೀಕರಣ ಆರಂಭಿಸುತ್ತಿರುವ ಕನ್ನಡದ ಪ್ರಮುಖ ಐದು ಸಿನಿಮಾಗಳು
ಕೊರೊನಾ ಕಾರಣದಿಂದಾಗಿ ಚಿತ್ರೀಕರಣ ಸ್ಥಗಿತಗೊಳಿಸಿ ಮೂರು ತಿಂಗಳ ಮೇಲಾಯಿತು. ಸಿನಿಮಾವನ್ನೇ ನಂಬಿ ಕೂತಿದ್ದ ಸಾವಿರಾರು ಮಂದಿ ಹಾಗೂ ಅವರ ಕುಟುಂಬಗಳು ಆದಾಯಕ್ಕಾಗಿ ಆಕಾಶನೋಡುವಂತಾಗಿತ್ತು.
Recommended Video
ಆದರೆ ನಿನ್ನೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಅರ್ಧಕ್ಕೆ ನಿಂತಿದ್ದ ಸಿನಿಮಾಗಳ ಚಿತ್ರೀಕರಣವನ್ನು ಪೂರ್ಣಗೊಳಿಸಿಕೊಳ್ಳಬಹುದು ಎಂದು ಹೇಳಿದೆ.
ಸರ್ಕಾರದ ಆದೇಶ ಹೊರಬಿದ್ದ ಕೂಡಲೇ ಗಾಂಧಿನಗರದಲ್ಲಿ ಮತ್ತೆ ಉತ್ಸಾಹದಲ್ಲಿ ಪುಟಿದೆದ್ದಿದ್ದು, ಅರ್ಧಕ್ಕೆ ನಿಂತ ಹಲವಾರು ಸಿನಿಮಾಗಳು ಚಿತ್ರೀಕರಣವನ್ನು ಪುನರ್ ಆರಂಭಗೊಳಿಸಲಿವೆ. ಕೆಲವು ಪ್ರಮುಖ ಸಿನಿಮಾಗಳ ಚಿತ್ರೀಕರಣ ಪುನಃ ಆರಂಭವಾಗುತ್ತಿದ್ದು, ಅದರ ಪಟ್ಟಿ ಇಲ್ಲಿದೆ.

ಅಪ್ಪು ಅಭಿನಯದ ಜೇಮ್ಸ್ ಚಿತ್ರ
ಪುನೀತ್ ರಾಜ್‌ಕುಮಾರ್ ಅಭಿನಯದ 'ಜೇಮ್ಸ್' ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದೆ. ಯುವರತ್ನ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದ್ದು ಬಿಡುಗಡೆಗೆ ತಯಾರಾಗಿದೆ.

ವಿಕ್ರಾಂತ್ ರೋಣ ಪ್ಯಾಂಟಮ್
ಲಾಕ್‌ಡೌನ್‌ಗೆ ಮುನ್ನಾ ಸೆಟ್ಟೇರಿದ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ ಪ್ಯಾಂಟಮ್' ಸಿನಿಮಾ ಮೊದಲಿಗೆ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ. ಜುಲೈ 1 ರಿಂದ ಹೈದರಾಬಾದ್‌ನಲ್ಲಿ ಇದರ ಚಿತ್ರೀಕರಣ ಆರಂಭವಾಗಲಿದೆ.

ವೀರಮದಕರಿ ನಾಯಕ ಚಿತ್ರೀಕರಣ
ದರ್ಶನ್ ಅಭಿನಯದ ವೀರಮದಕರಿ ನಾಯಕ ಸಿನಿಮಾ ಈಗಾಗಲೇ ಮೊದಲ ಶೆಡ್ಯೂಲ್ ಚಿತ್ರೀಕರಣವನ್ನು ಕೇರಳದಲ್ಲಿ ಮುಗಿಸಿದೆ. ಎರಡನೇ ಹಂತದ ಚಿತ್ರೀಕರಣ ಚಿತ್ರದುರ್ಗ, ಶಿವಮೊಗ್ಗ, ಬೆಂಗಳೂರುಗಳಲ್ಲಿ ನಡೆಯಲಿದೆ.

ಕೆಜಿಎಫ್ 2 ಸಿನಿಮಾ ಚಿತ್ರೀಕರಣ
ಕನ್ನಡದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ 2 ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಬಾಕಿ ಇದೆ. ಅದರಲ್ಲಿಯೂ ವಿಲನ್ ಸಂಜಯ್ ದತ್ ನಟನೆಯ ಚಿತ್ರೀಕರಣ ಬಾಕಿ ಇದೆ ಎನ್ನಲಾಗುತ್ತಿದ್ದು, ಸಂಜಯ್ ದತ್ ಕಾಲ್‌ಶೀಟ್ ಆಧಾರದಲ್ಲಿ ಚಿತ್ರೀಕರಣ ನಿಗದಿಯಾಗುವ ಸಾಧ್ಯತೆ ಇದೆ.

ಭಜರಂಗಿ 2 ಚಿತ್ರೀಕರಣ
ಶಿವರಾಜ್ ಕುಮಾರ್ ಅವರ ಸೂಪರ್ ಹಿಟ್ ಸಿನಿಮಾ ಭಜರಂಗಿಯ ಮುಂದುವರೆದ ಭಾಗ ಭಜರಂಗಿ 2 ಸಿನಿಮಾದ ಚಿತ್ರೀಕರಣ ಸಹ ಆರಂಭದಲ್ಲಿಯೇ ಮೊಟಕುಗೊಂಡಿತ್ತು. ಇದೀಗ ಅದರ ಚಿತ್ರೀಕರಣ ಮತ್ತೆ ಪ್ರಾರಂಭವಾಗಲಿದೆ.

ಕಬ್ಜ ಸಿನಿಮಾ ಚಿತ್ರೀಕರಣ
ಉಪೇಂದ್ರ ಅಭಿನಯದ ಕಬ್ಜ ಸಿನಿಮಾದ ಚಿತ್ರೀಕರಣ ಅರ್ಧಕ್ಕೆ ನಿಂತಿತ್ತು. ಈ ಸಿನಿಮಾದ ಚಿತ್ರೀಕರಣ ಇದೀಗ ಪುನಃ ಪ್ರಾರಂಭವಾಗಲಿದೆ. ಸಿನಿಮಾವನ್ನು ಚಂದ್ರು ನಿರ್ದೇಶಿಸುತ್ತಿದ್ದಾರೆ.


Click it and Unblock the Notifications











