ಹಲವು ಸೆಲೆಬ್ರಿಟಿಗಳಿಗೆ ಕೊರೊನಾ ಪಾಸಿಟಿವ್: ಯಾರ್ಯಾರು?
ದೇಶದಲ್ಲಿ ಒಮ್ಮಿಂದೊಮ್ಮೆಲೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ದಿನೇ-ದಿನೇ ಸಕ್ರಿಯ ಕೊರೊನಾ ಪ್ರಕರಣಗಳಲ್ಲಿ ಆಗುತ್ತಿರುವ ಏರಿಕೆ ದೇಶ ಮೂರನೇ ಕೊರೊನಾ ಅಲೆಯತ್ತ ಸಾಗುತ್ತಿದೆ ಎಂಬ ಆತಂಕ ಮೂಡಿಸಿದೆ.
ಕೆಲವೇ ದಿನಗಳಲ್ಲಿ ಹಲವು ಸಿನಿಮಾ ಸೆಲೆಬ್ರಿಟಿಗಳಿಗೆ ಕೊರೊನಾ ಸೋಂಕು ತಗುಲಿದೆ. ಬಾಲಿವುಡ್‌ನಲ್ಲಿ ಆರಂಭವಾಗಿ ತೆಲುಗು, ತಮಿಳು, ಮಲಯಾಳಂ ಈಗ ಕನ್ನಡ ಚಿತ್ರರಂಗದ ಕೆಲವರಿಗೂ ಕೊರೊನಾ ಸೋಂಕು ಧೃಡವಾಗಿದೆ.
ಚಂದನವನದ ನಟಿ ನಿಶ್ವಿಕಾ ನಾಯ್ಡುಗೆ ಕೊರೊನಾ ಪಾಸಿಟಿವ್ ಆಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ನಟಿ ನಿಶ್ವಿಕಾ, ''ಕಡಿಮೆ ರೋಗಲಕ್ಷಣಗಳೊಂದಿಗೆ ಇಂದು ನನಗೆ ಕೋವಿಡ್ ಪಾಸಿಟಿವ್ ಆಗಿದೆ. ನಾನು ಸ್ವಯಂಪ್ರೇರಿತವಾಗಿ ಐಸೋಲೇಶನ್ ಆಗಿದ್ದೇನೆ ಮತ್ತು ವೈದ್ಯರು ಹೇಳಿರುವಂತೆ ಚಿಕಿತ್ಸೆ ಪಡೆಯುತ್ತಿದ್ದೇನೆ. ಇತ್ತೀಚಿನ ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದವರು ದಯವಿಟ್ಟು ಪರೀಕ್ಷೆ ಮಾಡಿಸಿಕೊಳ್ಳಿ'' ಎಂದಿದ್ದಾರೆ ನಟಿ.

'ಬಾಹುಬಲಿ' ಸಿನಿಮಾದ ಕಟ್ಟಪ್ಪ ಖ್ಯಾತಿಯ ಸತ್ಯರಾಜ್‌ಗೆ ಕೊರೊನಾ ಪಾಸಿಟಿವ್ ಆಗಿದೆ. ಸತ್ಯಜಿತ್ ಆರೋಗ್ಯದಲ್ಲಿ ವ್ಯತ್ಯವಾಗಿರುವ ಕಾರಣ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕನ್ನಡದಲ್ಲಿಯೂ ನಟಿಸಿರುವ ಬಹುಭಾಷಾ ನಟಿ ತ್ರಿಶಾಗೂ ಕೊರೊನಾ ಪಾಸಿಟಿವ್ ಆಗಿದೆ. ತ್ರಿಶಾಗೆ ಕೋವಿಡ್ ಪಾಸಿಟಿವ್ ಆಗಿ ಒಂದು ವಾರದ ಮೇಲಾಗಿದೆಯಾದರೂ ನಟಿ ಈಗ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ''ಕಳೆದ ಒಂದು ವಾರದಿಂದಲೂ ಬಹಳ ಸಂಕಟ ಅನುಭವಿಸಿದೆ. ಕೋವಿಡ್‌ನ ಎಲ್ಲ ರೋಗಲಕ್ಷಣಗಳೂ ನನಗೆ ಇದ್ದವು. ಈಗ ತುಸುವೇ ಸುಧಾರಿಸಿಕೊಳ್ಳುತ್ತಿದ್ದೇನೆ'' ಎಂದಿದ್ದಾರೆ ನಟಿ.
ದೇಶದ ಜನಪ್ರಿಯ ನಿರ್ದೇಶಕರಲ್ಲಿ ಒಬ್ಬರಾದ ಪ್ರಿಯದರ್ಶನ್‌ಗೆ ಕೊರೊನಾ ಪಾಸಿಟಿವ್ ಆಗಿದೆ. ಅವರ ಆರೋಗ್ಯದಲ್ಲಿ ವ್ಯತ್ಯಯ ಆಗಿರುವ ಕಾರಣ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಟ ಮಹೇಶ್ ಬಾಬು ಹಾಗೂ ಅವರ ಕುಟುಂಬಕ್ಕೆ ಕೋವಿಡ್ ಪಾಸಿಟಿವ್ ಆಗಿದೆ. ಕೆಲವೇ ದಿನಗಳ ಹಿಂದೆ ಮಹೇಶ್ ಬಾಬು ಹಾಗೂ ಕುಟುಂಬ ದುಬೈಗೆ ಪ್ರವಾಸ ಹೋಗಿತ್ತು. ಪ್ರವಾಸದಿಂದ ಮರಳುತ್ತಿದ್ದಂತೆ ಇಡೀ ಕುಟುಂಬಕ್ಕೆ ಕೋವಿಡ್ ಆಗಿದೆ.
ಬಾಲಿವುಡ್ ನಟ ಅರ್ಜುನ್ ಕಪೂರ್ ಹಾಗೂ ಅವರ ಗರ್ಲ್‌ಫ್ರೆಂಡ್ ಮಲೈಕಾ ಅರೋರಾಗೆ ಕೋವಿಡ್ ಪಾಸಿಟಿವ್ ಆಗಿದೆ. ಕೆಲವು ದಿನಗಳ ಹಿಂದೆ ಮಲೈಕಾ ಅರೋರಾ ತಮ್ಮ 48ನೇ ವರ್ಷದ ಹುಟ್ಟುಹಬ್ಬವನ್ನು ಗೆಳೆಯರೊಂದಿಗೆ ಆಪ್ತರೊಂದಿಗೆ ಆಚರಿಸಿಕೊಂಡಿದ್ದರು. ಅದರ ಬಳಿಕ ಅವರಿಗೆ ಕೋವಿಡ್ ಪಾಸಿಟಿವ್ ಆಗಿದೆ.


Click it and Unblock the Notifications











