For Quick Alerts
  ALLOW NOTIFICATIONS  
  For Daily Alerts

  ನಟ ದರ್ಶನ್ ಮಾಡಿದ್ದ ಮನವಿಗೆ ಭಾರಿ ಜನಸ್ಪಂದನೆ

  |

  ಅತಿ ಹೆಚ್ಚು ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಇತ್ತೀಚಿನ ಕನ್ನಡ ನಟರಲ್ಲಿ ಮೊದಲಿಗರು ನಟ ದರ್ಶನ್. ಬಹಳ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ನಟ ದರ್ಶನ್ ಹೊಂದಿದ್ದಾರೆ.

  ನಟ ದರ್ಶನ್ ಇತ್ತೀಚೆಗೆ ಸಾಮಾಜಿಕ ಜಾಲತಾಣದ ಮೂಲಕ ಸಾಮಾಜಿಕ ಸೇವೆಯ ಕರೆಯೊಂದನ್ನು ನೀಡಿದ್ದರು. ದರ್ಶನ್ ಮಾತನ್ನು ವೇದವಾಕ್ಯದಂತೆ ಪಾಲಿಸುವ ಅವರ ಅಭಿಮಾನಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ದರ್ಶನ್ ಮಾಡಿದ್ದ ಮನವಿಗೆ ಉತ್ತಮ ಸ್ಪಂದಿಸಿದ್ದಾರೆ.

  ಶನಿವಾರ ವಿಡಿಯೋ ಹಾಕಿದ್ದ ನಟ ದರ್ಶನ್, 'ರಾಜ್ಯದಲ್ಲಿ 9 ಮೃಗಾಲಯಗಳಿವೆ. ಲಾಕ್‌ಡೌನ್ ಕಾರಣ ಮೃಗಾಲಯಗಳಿಗೆ ಪ್ರವಾಸಿಗರು ಬರುತ್ತಿಲ್ಲ. ಹಾಗಾಗಿ ಪ್ರಾಣಿಗಳ ಆರೈಕೆ, ಮೃಗಾಲಯ ಸಿಬ್ಬಂದಿ ಸಂಬಳ, ಮೃಗಾಲಯ ನಿರ್ವಹಣೆ ಕಷ್ಟವಾಗುತ್ತಿದೆ. ಇಂಥಹಾ ಸಮಯದಲ್ಲಿ ಮೃಗಾಲಯದ ಪ್ರಾಣಿಗಳನ್ನು ದತ್ತು ತೆಗೆದುಕೊಂಡರೆ ಪ್ರಾಣಿ-ಪಕ್ಷಿಗಳ ಆರೈಕೆ ಮಾಡಿದಂತಾಗುತ್ತದೆ, ಮೃಗಾಲಯ ಸಿಬ್ಬಂದಿಗೂ ಸಹಾಯವಾಗುತ್ತದೆ ಎಂದಿದ್ದರು.

  ಹಲವಾರು ಮಂದಿ ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ

  ಹಲವಾರು ಮಂದಿ ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ

  ಕೂಡಲೇ ಹಲವಾರು ಸಂಖ್ಯೆಯಲ್ಲಿ ಅಭಿಮಾನಿಗಳು ಮೃಗಾಲಯಗಳಿಂದ ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆದಿದ್ದಾರೆ. ದತ್ತು ಪಡೆದಾಗ ಮೃಗಾಲಯ ಅಧಿಕಾರಿಗಳು ನೀಡುವ ಪ್ರಮಾಣ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಧನ್ಯವಾದ ಹೇಳಿರುವ ನಟ ದರ್ಶನ್

  ಧನ್ಯವಾದ ಹೇಳಿರುವ ನಟ ದರ್ಶನ್

  ತಮ್ಮ ಮಾತಿಗೆ ಗೌರವಿಸಿ ಪ್ರಾಣಿಗಳನ್ನು ದತ್ತು ಪಡೆದವರಿಗೆ ನಟ ದರ್ಶನ್ ಧನ್ಯವಾದ ಹೇಳಿದ್ದಾರೆ. ಯಾರ್ಯಾರು ಪ್ರಾಣಿ ದತ್ತು ಪಡೆದು ಪ್ರಮಾಣ ಪತ್ರ ಹಾಕುತ್ತಿದ್ದಾರೊ ಅವರೆಲ್ಲರ ಪ್ರಮಾಣ ಪತ್ರದ ಚಿತ್ರವನ್ನು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡು ಧನ್ಯವಾದ ಹೇಳುತ್ತಿದ್ದಾರೆ.

  ಸಿಂಹವನ್ನು ದತ್ತು ಪಡೆದ ಶೈಲಜಾ ನಾಗ್

  ಸಿಂಹವನ್ನು ದತ್ತು ಪಡೆದ ಶೈಲಜಾ ನಾಗ್

  ದರ್ಶನ್ ನಟನೆಯ 'ಯಜಮಾನ' ಸಿನಿಮಾ ನಿರ್ಮಾಣ ಮಾಡಿದ್ದ ಶೈಲಜಾ ನಾಗ್ ಅವರು ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಸಿಂಹವೊಂದನ್ನು ದತ್ತು ಪಡೆದಿದ್ದಾರೆ. ಆ ಸಿಂಹಕ್ಕೆ ದರ್ಶನ್ ಎಂದೇ ಹೆಸರಿಟ್ಟಿದ್ದಾರೆ. ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಸಹ ಪ್ರಾಣಿಯನ್ನು ದತ್ತು ಪಡೆದಿದ್ದಾರೆ.

  ಪ್ರಾಣಿಗಳಿಗೂ ಕೊರೊನಾಗೂ ಏನ್ ಸಂಬಂಧ ಅಂತ ಹೇಳಿದ Darshan | Filmibeat Kannada
  ಪ್ರಾಣಿ ಪ್ರೇಮಿ ನಟ ದರ್ಶನ್

  ಪ್ರಾಣಿ ಪ್ರೇಮಿ ನಟ ದರ್ಶನ್

  ಅಪಾರ ಪ್ರಾಣಿ ಪ್ರೀತಿಯುಳ್ಳ ದರ್ಶನ್ ಸ್ವತಃ ಕೆಲವು ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ. ತಮ್ಮ ಫಾರಂ ಹೌಸ್‌ನಲ್ಲಿ ಹಲವು ಪ್ರಾಣಿ-ಪಕ್ಷಿಗಳನ್ನು ಸಾಕಿದ್ದಾರೆ. ಆಗಾಗ್ಗೆ ಅರಣ್ಯಕ್ಕೆ ಭೇಟಿ ನೀಡುವ ದರ್ಶನ್ ಪ್ರಾಣಿ ವೀಕ್ಷಣೆ ಮತ್ತು ಛಾಯಾಗ್ರಹಣ ಮಾಡುತ್ತಾರೆ. ತಾವು ತೆಗೆದ ವನ್ಯಜೀವಿಗಳ ಚಿತ್ರಗಳನ್ನು ಮಾರಾಟ ಮಾಡಿ ಬಂದ ಹಣವನ್ನು ಅರಣ್ಯ ಇಲಾಖೆಗೆ ನೀಡುತ್ತಾರೆ ದರ್ಶನ್.

  English summary
  After actor Darshan's request many people adopting zoo animals. Darshan thanking them through social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X