ಮರಾಠಿ ಹಿರಿಯ ನಟಿ ಆಶಾಲತಾ ಕೊರೊನಾದಿಂದ ಸಾವು

ಕೊರೊನಾ ಸೋಂಕಿಗೆ ತುತ್ತಾಗಿದ್ದ ಮರಾಠಿ ಭಾಷೆಯ ಹಿರಿಯ ನಟಿ ಆಶಾಲತಾ ವಬ್‌ಗಾಂವಕರ್ ಅವರು ಇಂದು (ಮಂಗಳವಾರ) ನಿಧನ ಹೊಂದಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು.

ಆಶಾಲತಾ ವಬ್‌ಗಾಂವಕರ್ ಅವರು ಟಿವಿ ಧಾರಾವಾಹಿ ಚಿತ್ರೀಕರಣಕ್ಕಾಗಿ ಸತಾರಾಗೆ ಬಂದಿದ್ದರು. ಚಿತ್ರೀಕರಣದ ಸೆಟ್‌ನಲ್ಲಿ 20 ಮಂದಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಆಶಾಲತಾ ಅವರು ಸತಾರಾದಲ್ಲಿಯೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಶಾಲತಾ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಅವರು ಮಂಗಳವಾರ ಬೆಳಿಗ್ಗೆ 4:45 ರ ವೇಳೆಗೆ ನಿಧನ ಹೊಂದಿದ್ದಾರೆ.

Marathi Actress Ashalata Wabgaonkar Died Of Covid 19

ಆರಂಭದ ದಿನಗಳಲ್ಲಿ ಹಲವು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದ, ಆಶಾಲತಾ ಮರಾಠಿಯಲ್ಲಿಯೂ ಬಹು ಖ್ಯಾತ ನಟಿಯಾಗಿ ಗುರುತಿಸಿಕೊಂಡಿದ್ದರು. ಹಲವಾರು ಟಿವಿ ಧಾರಾವಾಹಿಗಳಲ್ಲಿ ಆಶಾಲತಾ ನಟಿಸಿದ್ದರು.

Recommended Video

RCB ಮೇಲೆ ಯಾಕಿಷ್ಟು ಕೋಪ ಗುರು | Filmibeat Kannada

ಹಿಂದಿಯ ಅಂಕುಶ್, ಆಹಿಸ್ತಾ-ಆಹಿಸ್ತಾ, ಓ ಸಾಥ್ ದಿನ್, ಶೌಕೀನ್ , ನಮಕ್ ಹಲಾಲ್ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮರಾಠಿಯ ಉಂಬರ್ತ್, ನವಿ ಮಿಲೇ ಉಂಬಾರ್ಲಾ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

More from Filmibeat

English summary
Marathi senior actress Ashalata Wabgaonkar died of coronavirus in Satara at the age of 79.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X