ಸರಿಯಾದ ಸಮಯಕ್ಕೆ ಅಂಬುಲೆನ್ಸ್ ಸಿಗದೆ ಚಿತ್ರನಟಿ ನಿಧನ
ಸೂಕ್ತ ಸಮಯಕ್ಕೆ ಅಂಬುಲೆನ್ಸ್ ಸಿಗದ ಕಾರಣ ನಟಿ ಪೂಜಾ ಜುಂಜರ್ ಹಾಗೂ ಆಕೆಯ ನವಜಾತ ಶಿಶು ನಿಧನ ಹೊಂದಿದ್ದಾರೆ. 25 ವರ್ಷ ವಯಸ್ಸಿನ ಪೂಜಾ ಜುಂಜರ್ ಮರಾಠಿ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಭಾನುವಾರ ಬೆಳಗ್ಗೆ ಮುಂಬೈನಿಂದ 600 ದೂರದಲ್ಲಿ ಇರುವ ಹಿಂಗೊಳಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ನಟಿ ಪೂಜಾ ಜುಂಜರ್ ಗೋರೆಗಾಂವ್ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು. ಮಗು ಹುಟ್ಟಿದ ಕೆಲವೇ ನಿಮಿಷಗಳಲ್ಲಿ ಕೊನೆಯುಸಿರೆಳೆಯಿತು. ಬೆಳಗ್ಗೆ 2 ಗಂಟೆ ಸುಮಾರಿಗೆ ಪೂಜಾ ಜುಂಜರ್ ಆರೋಗ್ಯದಲ್ಲಿ ಏರುಪೇರು ಉಂಟಾಯಿತು.
ಆಂಬುಲೆನ್ಸ್ ವಿಳಂಬವಾಗಿ ಮರಾಠಿ ನಟಿ ಮತ್ತು ಆಕೆಯ ಶಿಶು ಸಾವು
ಈ ವೇಳೆ ಅವರನ್ನು ಮತ್ತೊಂದು ಆಸ್ಪತ್ರೆಗೆ ಶಿಫ್ಟ್ ಮಾಡಬೇಕು ಎಂದು ವೈದ್ಯರು ಸೂಚಿಸಿದರು. 40 ಕಿಲೋ ಮೀಟರ್ ದೂರ ಇದ್ದ ಆ ಆಸ್ಪತ್ರೆಗೆ ಹೋಗಲು ಅಂಬುಲೆನ್ಸ್ ಅಗತ್ಯ ಇತ್ತು. ಸರಿಯಾದ ಸಮಯಕ್ಕೆ ಅಂಬುಲೆನ್ಸ್ ಸಿಗಲಿಲ್ಲ. ಅಂಬುಲೆನ್ಸ್ ಗಾಗಿ ಹುಡುಕಾಡಿದ ಕುಟುಂಬ ನಂತರ, ಖಾಸಗಿ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆಸುಕೊಂಡು ಹೋಗುತ್ತಿದ್ದರು.

ಆದರೆ, ಖಾಸಗಿ ಅಂಬುಲೆನ್ಸ್ ನಲ್ಲಿ ಹೋಗುವಾಗಲೇ, ಆಸ್ಪತ್ರೆ ತಲುಪುವ ಮುನ್ನ ಪೂಜಾ ಜುಂಜರ್ ವಿಧಿವಶರಾದರು.
ನಟಿ ಪೂಜಾ ಜುಂಜರ್ ಎರಡು ಮರಾಠಿ ಸಿನಿಮಾಗಳಲ್ಲಿ ನಟಿಸಿದ್ದು, ಹೆರಿಗೆ ಕಾರಣ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದರು.


Click it and Unblock the Notifications











