»   » ಆಸ್ಕರ್ ರೇಸಿನಿಂದ ಹೊರ ಬಿದ್ದ ಮರಾಠಿ ಚಿತ್ರ 'ಕೋರ್ಟ್'

ಆಸ್ಕರ್ ರೇಸಿನಿಂದ ಹೊರ ಬಿದ್ದ ಮರಾಠಿ ಚಿತ್ರ 'ಕೋರ್ಟ್'

By ಜೇಮ್ಸ್ ಮಾರ್ಟಿನ್
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಆಸ್ಕರ್ ಪ್ರಶಸ್ತಿಗಾಗಿ ಭಾರತದಿಂದ ಅಧಿಕೃತವಾಗಿ ನಾಮನಿರ್ದೇಶನಗೊಂಡಿದ್ದ ಮರಾಠಿ ಚಿತ್ರ 'ಕೋರ್ಟ್' ಈಗ ರೇಸಿನಿಂದ ಹೊರಬಿದ್ದಿದೆ. ಅಮೋಲ್ ಪಾಲೇಕರ್ ನೇತೃತ್ವದ ಸಮಿತಿ ಅಳೆದು ತೂಗಿ ಬಾಹುಬಲಿ ಸೇರಿದಂತೆ ಅನೇಕ ಚಿತ್ರಗಳನ್ನು ಬದಿಗೊತ್ತಿ ಮರಾಠಿ ಚಿತ್ರ 'ಕೋರ್ಟ್' ಆಯ್ಕೆ ಮಾಡಿ ಆಸ್ಕರ್ ಸ್ಪರ್ಧೆಗೆ ಕಳಿಸಿದ್ದರು.

  ಚೊಚ್ಚಲ ಬಾರಿಗೆ ನಿರ್ದೇಶಕರಾಗಿ ಚೈತನ್ಯ ತಮ್ಹಾನೆ ಅವರು ಮೊದಲ ಯತ್ನದಲ್ಲೇ ಆಸ್ಕರ್ ಗೆ ಲಗ್ಗೆ ಇಟ್ಟಿದ್ದರು. ವೀರ್ ಸಾಥಿದಾರ್ ಹಾಗೂ ವಿವೇಕ್ ಗೊಂಬೆರ್ ಚಿತ್ರದಲ್ಲಿದ್ದಾರೆ. ಅತ್ಯುತ್ತಮ ವಿದೇಶಿ ಚಿತ್ರ ಎಂಬ ಕೆಟಗೆರಿಯಲ್ಲಿ 'ಕೋರ್ಟ್' ಚಿತ್ರ ಸ್ಪರ್ಧಿಸಿತ್ತು. ಆದರೆ, ಅಂತಿಮ 9 ಚಿತ್ರಗಳ ಆಯ್ಕೆ ಪಟ್ಟಿಯಲ್ಲಿ ಕೋರ್ಟ್ ಚಿತ್ರದ ಹೆಸರು ಕಾಣಿಸಿಕೊಂಡಿಲ್ಲ.

  ಕೆ ವಿಶ್ವನಾಥ್ ಹಾಗೂ ಕಮಲ್ ಹಾಸನ್ ಅವರ ಕಾಂಬಿನೇಷ್ ನ ಸ್ವಾತಿ ಮುತ್ಯಂ ಚಿತ್ರದ ನಂತರ ಯಾವ ತೆಲುಗು ಚಿತ್ರವೂ ಆಸ್ಕರ್ ಕನಸು ಕಂಡಿರಲಿಲ್ಲ. [ಆಸ್ಕರ್ ಗೆ ಅರ್ಹತೆ ಪಡೆದ ರಂಗಿತರಂಗ, ಕೇರ್ ಆಫ್ ಫುಟ್ಪಾತ್ 2]

  ಎಸ್ ಎಸ್ ರಾಜಮೌಳಿ ಅವರ ನಿರ್ದೇಶನದ ಅತ್ಯಂತ ದುಬಾರಿ ಚಿತ್ರ 'ಬಾಹುಬಲಿ' ಜೊತೆಗೆ ವಿಶಾಲ್ ಭಾರದ್ವಾಜ್ ಅವರ 'ಹೈದರ್', ರಾಜಕುಮಾರ್ ಹಿರಾನಿ ಅವರ 'ಪಿಕೆ', ಅನುರಾಗ್ ಕಶ್ಯಪ್ ಅವರ 'ಅಗ್ಲಿ', ಒಮುಂಗ್ ಕುಮಾರ್ ಅವರ 'ಮೇರಿ ಕೋಮ್', ಮಸಾನ್ (ಹಿಂದಿ), ತಮಿಳಿನ ಕಾಕಾ ಮುಟ್ಟೈ ಚಿತ್ರಗಳನ್ನು ಹಿಂದೆ ಹಾಕಿ ಮುಂದೆ ಹೋಗಿದ್ದ ಕೋರ್ಟ್ ಈಗ ಖಾಲಿ ಕೈನೊಂದಿಗೆ ಹಿಂತಿರುಗುತ್ತಿದೆ.

  ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಕನ್ನಡ ಎರಡು ಚಿತ್ರಗಳು ಸೇರಿ ನಾಲ್ಕು ಭಾರತೀಯ ಚಿತ್ರಗಳು ಅರ್ಹತೆ ಪಡೆದುಕೊಂಡಿವೆ. ಲ್ಯಾಟರಲ್ ಎಂಟ್ರಿ ಮೂಲಕ ಸ್ಪರ್ಧೆಗಿಳಿದಿದ್ದ ನೂರಾರು ಚಿತ್ರಗಳ ಪೈಕಿ ಅನುಪ್ ಭಂಡಾರಿ ಅವರ ರಂಗಿತರಂಗ ಹಾಗೂ ಕಿಶನ್ ಅವರ ಕೇರ್ ಆಫ್ ಫುಟ್ಪಾತ್ 2 ಮುಂದಿನ ಹಂತಕ್ಕೆ ತೇರ್ಗಡೆಗೊಂಡಿರುವುದು ಸಂತಸದ ವಿಷಯ.

  ಅಂತಿಮ ಹಂತಕ್ಕೆ ಆಯ್ಕೆಯಾಗಿರುವ 9 ಚಿತ್ರಗಳ ಪೈಕಿ 7 ಚಿತ್ರಗಳು ಯುರೋಪ್ ಮೂಲದಿಂದ ಆಯ್ಕೆಯಾಗಿವೆ. ಮಿಕ್ಕೆರಡು ಮಧ್ಯಪ್ರಾಚ್ಯ ಹಾಗೂ ದಕ್ಷಿಣ ಅಮೆರಿಕದಿಂದ ಆಯ್ಕೆಯಾಗಿದೆ.

  * Belgium, "The Brand New Testament," Jaco Van Dormael, director;
  * Colombia, "Embrace of the Serpent," Ciro Guerra, director;
  * Denmark, "A War," Tobias Lindholm, director;
  * Finland, "The Fencer," Klaus Härö, director;
  * France, "Mustang," Deniz Gamze Ergüven, director;
  * Germany, "Labyrinth of Lies," Giulio Ricciarelli, director;
  * Hungary, "Son of Saul," László Nemes, director;
  * Ireland, "Viva," Paddy Breathnach, director;
  * Jordan, "Theeb," Naji Abu Nowar, director.

  88 ನೇ ಆಸ್ಕರ್ ಪ್ರಶಸ್ತಿಯ ಅಂತಿಮ ಪಟ್ಟಿಯನ್ನು ಜನವರಿ 14ರಂದು ಪ್ರಕಟಿಸಲಾಗುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭ ಹಾಲಿವುಡ್ ನ ಡಾಲ್ಬಿ ಥಿಯೇಟರ್ ನಲ್ಲಿ ಫೆಬ್ರವರಿ 28ರಂದು ನಡೆಯಲಿದೆ.

  English summary
  Chaitanya Tamhane's Marathi film 'Court' is out of the best foreign film Oscar race after it failed to qualify in the Academy's latest shortlist. Nine films have advanced in the race for the Oscar for foreign-language film out of 80 movies and they have moved on to the next phase of voting for the 88th Academy Awards.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more