Don't Miss!
- News ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಉಳುವಿಗಾಗಿ ಸೆಣಸಾಟ: ಕಾಂಗ್ರೆಸ್ ಅವಕಾಶಕ್ಕಾಗಿ ಹೋರಾಟ
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Sports IPL 2024: ಮುಂಬೈ ಇಂಡಿಯನ್ಸ್ ವಿರುದ್ಧ ಶತಕ; ರೋಹಿತ್, ಕೊಹ್ಲಿಗೆ ಕ್ರೆಡಿಟ್ ನೀಡಿದ ಯಶಸ್ವಿ ಜೈಸ್ವಾಲ್!
- Technology Itel: ಭಾರತದಲ್ಲಿ ಐಟೆಲ್ S24 ಲಾಂಚ್! 108MP ಕ್ಯಾಮೆರಾ.. ಬೆಲೆ ಇಷ್ಟೇ
- Lifestyle ಪ್ರವಾಹಕ್ಕೆ ಕಾರಣವಾಗೋದು ಮಳೆಯಲ್ಲ ಬೇಸಿಗೆಯ ಬಿಸಿಲು..! ನಂಬಲು ಸಾಧ್ಯವಿಲ್ಲ ಅಂದ್ರೆ ಈ ವಿಡಿಯೋ ನೋಡಿ..!
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಾಲಿವುಡ್ ನ ನೆಚ್ಚಿನ 'ಅಮ್ಮ' ಇನ್ನಿಲ್ಲ
ಮರಾಠಿ ಹಾಗೂ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದ ಖ್ಯಾತ ನಟಿ ರೀಮಾ ಲಾಗೂ (59) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ರೀಮಾ ಅವರು ಮುಂಬೈನ ಕೋಕಿಲಾ ಬೆನ್ ಅಂಬಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಮರಾಠಿ ರಂಗಭೂಮಿ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದ ರೀಮಾ ಲಾಗೂ ಅವರು ಬಹಳಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸ್ಟಾರ್ ನಟರಿಗೆ ತಾಯಿ ಪಾತ್ರಗಳನ್ನ ನಿರ್ವಹಿಸಿರುವ ರೀಮಾ ಹೆಚ್ಚು ಖ್ಯಾತಿ ಗಳಿಸಿಕೊಂಡಿದ್ದೇ ತಾಯಿ ಪಾತ್ರಗಳಿಗೆ.
ಸಲ್ಮಾನ್ ಖಾನ್ ಅಭಿನಯದ 'ಮೈನೇ ಪ್ಯಾರ್ ಕೀಯಾ' ಚಿತ್ರದ ಮೂಲಕ ಹೆಚ್ಚು ಖ್ಯಾತಿ ಗಳಿಸಿಕೊಂಡ ರೀಮಾ, ನಂತರ ಬಾಲಿವುಡ್ ನಲ್ಲಿ 'ಖಯಾಮತ್ ಸೇ ಖಯಾಮತ್ ತಕ್', 'ಆಶಿಕಿ', 'ಹಮ್ ಆಪ್ ಕೇ ಹೈ ಕೌನ್', 'ಕಲ್ ಹೋ ನಾ ಹೋ', 'ಕುಚ್ ಕುಚ್ ಹೋತಾ ಹೈ, 'ಹಮ್ ಸಾಥ್ ಸಾಥ್ ಹೈನ' ಸೇರಿದಂತೆ ಇನ್ನು ಹಲವು ಚಿತ್ರಗಳಲ್ಲಿ ರೀಮಾ ಅಭಿನಯಿಸಿದ್ದರು.
1958 ರಲ್ಲಿ ರೀಮಾ ಲಾಗು ಮುಂಬೈನಲ್ಲಿ ಜನಿಸಿದರು. ತಾಯಿ ಮಂದಾಕಿಣಿ ಭಾಡ್ಭಾಡೆ ಮರಾಠಿ ರಂಗಭೂಮಿಯಲ್ಲಿ ಕಲಾವಿದೆಯಾಗಿದ್ದರು. ರೀಮಾ ಅವರು ಕೂಡ ಹೈ ಸ್ಕೂಲ್ ಓದುವಾಗಲೇ ರಂಗಭೂಮಿಯಲ್ಲಿ ಆಸಕ್ತಿ ಬೆಳಸಿಕೊಂಡಿದ್ದರು. ನಂತರ 1970 ರಿಂದ ಹಿಂದಿ ಹಾಗೂ ಮರಾಠಿ ಚಿತ್ರರಂಗದಲ್ಲಿ ತೊಡಗಿಸಿಕೊಂಡರು. ಇಲ್ಲಿಯವರೆಗೂ ಸುಮಾರು 90 ಕ್ಕೂ ಅಧಿಕ ಚಿತ್ರಗಳಲ್ಲಿ ರೀಮಾ ಲಾಗು ನಟಿಸಿದ್ದಾರೆ. ಅಷ್ಟೇ ಅಲ್ಲದೇ, ರೀಮಾ ಲಾಗೂ ಅವರು ಕಿರುತೆರೆಯ 'ತು ತು ಮೈ ಮೈ' ಮತ್ತು 'ಶ್ರೀಮಾನ್ ಶ್ರೀಮತಿ' ಮುಂತಾದ ಜನಪ್ರಿಯ ಧಾರಾವಾಹಿಗಳಲ್ಲಿ ಅಮೋಘ ಅಭಿನಯ ನೀಡಿದ್ದರು.