»   » 'ಸೈರಾಟ್' ನಾಯಕಿಯ 10th ಮಾರ್ಕ್ಸ್: ಯಾವುದು ಜಾಸ್ತಿ, ಯಾವುದು ಕಡಿಮೆ?

'ಸೈರಾಟ್' ನಾಯಕಿಯ 10th ಮಾರ್ಕ್ಸ್: ಯಾವುದು ಜಾಸ್ತಿ, ಯಾವುದು ಕಡಿಮೆ?

Posted By:
Subscribe to Filmibeat Kannada

'ಸೈರಾಟ್' ಸಿನಿಮಾದ ಮೂಲಕ ಇಡೀ ದೇಶದಲ್ಲಿ ದೊಡ್ಡ ಹೆಸರು ಮಾಡಿದ್ದ ರಿಂಕು ರಾಜ್ ಗುರು ಅವರ SSC (10ನೇ ತರಗತಿ) ರಿಸಲ್ಟ್ ಮೊನ್ನೆಯಷ್ಟೇ ಹೊರಬಿದ್ದಿತ್ತು. 'SSC' ಪರೀಕ್ಷೆಯಲ್ಲಿ ರಿಂಕು ರಾಜ್ ಗುರು ಶೇಕಡ 66 ಅಂಕಗಳನ್ನು ಪಡೆದಿದ್ದರು. ಆದ್ರೆ, ಯಾವ ಸಬ್ಜೆಕ್ಟ್ ನಲ್ಲಿ ಹೆಚ್ಚು ಅಂಕ ತಗೆದುಕೊಂಡಿದ್ದಾರೆ, ಯಾವ ಸಬ್ಜೆಕ್ಟ್ ನಲ್ಲಿ ಕಡಿಮೆ ಅಂಕ ತೆಗೆದುಕೊಂಡಿದ್ದಾರೆ ಎಂಬುದು ಕುತೂಹಲ ಮೂಡಿಸಿತ್ತು.

ಇಲ್ಲಿದೆ ನೋಡಿ 'ಮನಸು ಮಲ್ಲಿಗೆ'ಯ 10ನೇ ತರಗತಿಯ ಅಂಕಗಳು. ಮೂಲತಃ ಮರಾಠಿ ಹುಡುಗಿ ಆಗಿರುವ ರಿಂಕು ರಾಜಗುರು, ಮರಾಠಿಯಲ್ಲಿ 83 ಅಂಕ ಗಳಿಸಿದ್ದಾರೆ. ಹಿಂದಿಯಲ್ಲಿ 87 ಅಂಕವನ್ನ ಪಡೆದಿದ್ದಾರೆ. ಇನ್ನುಳಿದಂತೆ ಇಂಗ್ಲೀಷ್ ನಲ್ಲಿ 59, ಗಣಿತದಲ್ಲಿ 48, ಸಮಾಜ ವಿಜ್ಞಾನದಲ್ಲಿ 50, ಹಾಗೂ ವಿಜ್ಞಾನದಲ್ಲಿ 42 ಅಂಕಗಳನ್ನ ಪಡೆದಿದ್ದಾರೆ.

'ಸೈರಾಟ್' ಹುಡುಗಿ ರಿಂಕು ರಾಜ್ ಗುರು 10ನೇ ಕ್ಲಾಸ್ ರಿಸಲ್ಟ್ ಬಂದಿದೆ

Marati Actress Rinku Rajguru SSC MarkSheet

ಈ ಮೂಲಕ ಒಟ್ಟು 500 ಅಂಕಗಳಲ್ಲಿ ರಿಂಕು ರಾಜಗುರು 332 ಅಂಕ ಪಡೆದಿದ್ದಾರೆ. ಮಾತೃಭಾಷೆ ಮರಾಠಿಯಲ್ಲಿ ಅತೀ ಹೆಚ್ಚು ಸ್ಕೋರ್ ಮಾಡಿದ್ರೆ, ಸೋಷಿಯಲ್ ಸೈನ್ಸ್​ನಲ್ಲಿ ಅತಿ ಕಡಿಮೆ ಅಂಕ ಗಳಿಸಿದ್ದಾರೆ.

9ನೇ ತರಗತಿಯಲ್ಲಿ 81.6 % ಮಾರ್ಕ್ ತೆಗೆದುಕೊಂಡಿದ್ದ ರಿಂಕು, 'ಸೈರಾಟ್' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಸಿನಿಮಾ ಬ್ಲ್ಯಾಕ್ ಬಸ್ಟರ್ ಆಯ್ತು. 100 ಕೋಟಿ ಕ್ಲಬ್ ಸೇರಿತು. ನಂತರ ಅದೇ ಸಿನಿಮಾ ಕನ್ನಡದಲ್ಲಿ 'ಮನಸು ಮಲ್ಲಿಗೆ' ಎಂಬ ಹೆಸರಿನಲ್ಲಿ ರೀಮೇಕ್ ಆಯ್ತು. ಈ ಚಿತ್ರಕ್ಕೂ ರಿಂಕು ರಾಜ್ ಗುರು ಅವರೇ ನಾಯಕಿ ಆಗುವ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು.

'ಮನಸು ಮಲ್ಲಿಗೆ' ನೋಡಿದ ಯಶ್ ಹೇಳಿದ್ದೇನು?

English summary
'Sairat' star 'Rinku Rajguru' clears Maharashtra SSC Results with 66 percentage. Here is the Rinku Rajguru's 10th Class MarkSheet

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada