»   » ಜುಲೈ 20 ರಂದು 'ಮಾರ್ಚ್ 22' ಚಿತ್ರದ ಆಡಿಯೋ ಬಿಡುಗಡೆ

ಜುಲೈ 20 ರಂದು 'ಮಾರ್ಚ್ 22' ಚಿತ್ರದ ಆಡಿಯೋ ಬಿಡುಗಡೆ

Posted By:
Subscribe to Filmibeat Kannada

ಮಂಗಳೂರು ಮೂಲದ ದುಬೈನ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಹಾಗೂ ಅವರ ಪತ್ನಿ ಶರ್ಮಿಳಾ ಶೇರಿಗಾರ್ ನಿರ್ಮಿಸಿರುವ 'ಮಾರ್ಚ್-22' ಚಿತ್ರ ಆಡಿಯೋ ಬಿಡುಗಡೆಗೆ ಸಿದ್ದವಾಗಿದ್ದು, ಮಂಗಳೂರಿನಲ್ಲಿ ಚಿತ್ರದ ಧ್ವನಿ ಸುರಳಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ.

ಜುಲೈ 20 ರಂದು ಗುರುವಾರ ಸಂಜೆ 6 ಗಂಟೆಗೆ 'ಮಾರ್ಚ್ 22' ಚಿತ್ರದ ಆಡಿಯೋ ಸಮಾರಂಭ ಮಂಗಳೂರಿನ ಪಂಪ್ವೆಲ್ ನ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಲಿದೆ. ಹಿರಿಯ ನಟ ಅನಂತ್ ನಾಗ್ ಆಡಿಯೋ ಬಿಡುಗಡೆ ಮಾಡಲಿದ್ದು, ನಟ ಆಶಿಶ್ ವಿದ್ಯಾರ್ಥಿ ಆಡಿಯೋ ಟೀಸರ್ ರಿಲೀಸ್ ಮಾಡಲಿದ್ದಾರೆ.

March 22 Movie Audio Release on 20th July

ಆಡಿಯೋ ಬಿಡುಗಡೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಂಗಳೂರಿನ ಮೇಯರ್ ಕವಿತಾ ಸನಿಲ್, ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ ರಾ ಗೋವಿಂದು, ಚಿತ್ರದ ನಟ ಶರತ್ ಲೋಹಿತಾಶ್ವ, ವಿನಯ ಪ್ರಸಾದ್ ಹಾಗೂ ಕಲಾವಿದರು ಭಾಗಿಯಾಗಲಿದ್ದಾರೆ.

ಅಂದ್ಹಾಗೆ, ಆರ್ಯವರ್ಧನ್ ಹಾಗೂ ಕಿರಣ್ ರಾಜ್ ಎಂಬ ನವ ನಟರು ಈ ಚಿತ್ರದಲ್ಲಿ ನಾಯಕನಟರಾಗಿದ್ದು, ಮೇಘಶ್ರೀ ಮತ್ತು ದೀಪ್ತಿ ಶೆಟ್ಟಿ ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಿರ್ದೇಶಕ ಕೋಡ್ಲು ರಾಮಕೃಷ್ಣ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನುಳಿದಂತೆ ಅನಂತ್ ನಾಗ್, ಗೀತಾ, ರಮೇಶ್ ಭಟ್, ಸಾಧುಕೋಕಿಲಾ, ಜೈಜಗದೀಶ್, ಆಶಿಶ್ ವಿದ್ಯಾರ್ಥಿ, ಪದ್ಮಜಾ ರಾವ್ ಸೇರಿದಂತೆ ಹಲವು ರಂಗಭೂಮಿ ಕಲಾವಿದರು ಕೂಡ ಕಾಣಿಸಿಕೊಂಡಿದ್ದಾರೆ.

English summary
Aryavardhan, kiran Raj, Deepthi Shetty, Meghashree Starrer Kannada Movie 'March 22' Audio Release Held on 20th July at Mangalore. The Movie Directed By Kudlu Ramakrishan, and Produced by Harish Sherigar

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada