ಈ ವಾರ 'ಮರಿ ಟೈಗರ್' ಜೊತೆ 'ಇಲ್ಲ' ಸಿನಿಮಾ ಬಿಡುಗಡೆ
ಸ್ಯಾಂಡಲ್ ವುಡ್ ರಿಯಲ್ ಟೈಗರ್ ವಿನೋದ್ ಪ್ರಭಾಕರ್ ನಟನೆಯ ಮರಿ ಟೈಗರ್ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.ವಿನೋದ್ ಪ್ರಭಾಕರ್ ಅವರಿಗೆ ನಾಯಕಿಯಾಗಿ ಚಿಂಗಾರಿ' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಎರಡನೇ ನಾಯಕಿಯಾಗಿದ್ದ ತೇಜು ಅಭಿನಯಿಸಿದ್ದಾರೆ.
ಇನ್ನುಳಿದಂತೆ ನೀತು, ಮನೋಜ್, ಕೋಟೆ ಪ್ರಭಾಕರ್, ಬುಲೆಟ್ ಪ್ರಕಾಶ್, ಕಾಟ್ ರಾಜ, ಪೆಟ್ರೋಲ್ ಪ್ರಸನ್ನ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.ನಂದ ಲವ್ಸ್ ನಂದಿತಾ, ಭಾಗ್ಯದ ಬಳೆಗಾರ ಚಿತ್ರಗಳ ನಿರ್ಮಾಪಕ ರಮೇಶ್ ಕಷ್ಯಪ್ ಸಿಂಹಾದ್ರಿ ಪ್ರೊಡಕ್ಷನ್ಸ್ ಮೂಲಕ ನಿರ್ಮಿಸಿರುವ ಈ ಚಿತ್ರವನ್ನು ಪಿ.ಎನ್ ಸತ್ಯ ನಿರ್ದೇಶಿಸಿದ್ದಾರೆ.

ಅಜಯ್ ಕುಮಾರ್ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಮಲೇಷಿಯಾದ ರಾಕ್ ರವಿ ಸಂಗೀತ ನಿರ್ದೇಶನ ಮತ್ತು ಜೈ ಆನಂದ್ ಛಾಯಾಗ್ರಹಣ ಚಿತ್ರಕ್ಕಿದೆ. ಇನ್ನು 'ಮರಿ ಟೈಗರ್' ಚಿತ್ರದ ಜೊತೆ ಮತ್ತೊಂದು ಕನ್ನಡ ಸಿನಿಮಾ 'ಇಲ್ಲ' ತೆರೆಕಾಣುತ್ತಿದೆ. ರಾಜ್ ಪ್ರಭು ಈ ಚಿತ್ರವನ್ನ ನಿರ್ದೇಶನ ಮಾಡುವುದರ ಜೊತೆಗೆ ನಾಯಕನಾಗಿ ಅಭಿನಯಿಸಿದ್ದಾರೆ.

ಕಥೆಗೆ ಪ್ರಾಧಾನ್ಯತೆ ಇರುವ ಈ ಚಿತ್ರದಲ್ಲಿ, ನಾವು ಏನ್ ಅನ್ಕೊಳ್ತೀವೋ ಅದು ಆಗಲ್ಲ, ನಾವ್ ಏನ್ ಅನ್ಕೊಳಲ್ವೋ ಅದು ಆಗತ್ತೆ ಎಂಬುದನ್ನ ಸಸ್ಪೆನ್ಸ್ ಆಗಿ ಬಿಂಬಿಸಲಾಗಿದೆ.


Click it and Unblock the Notifications











