Just In
Don't Miss!
- News
ಸಂಸತ್ ಕಟ್ಟಡದ ಮಹಾತ್ಮ ಗಾಂಧಿ ಪ್ರತಿಮೆ ತರಾತುರಿಯಲ್ಲಿ ಸ್ಥಳಾಂತರ
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದಾರಿ ಬಿಡ್ರಿ... ಚಿತ್ರರಂಗಕ್ಕೆ ಬಂದ್ರು ಮಾರಿಮುತ್ತು ಮೊಮ್ಮಗಳು ಜಯಶ್ರೀ!

ಚಿತ್ರರಂಗ ಎನ್ನುವುದು ಒಂದು ಆಕರ್ಷಣೆ. ಒಮ್ಮೆ ಅದರ ರುಚಿ ನೋಡಿದರೆ ಅದನ್ನು ಬಿಟ್ಟು ಇರಲು ಆಗುವುದಿಲ್ಲ. ಅದೇ ಕಾರಣಕ್ಕೋ ಏನೋ ಸಿನಿಮಾರಂಗದಲ್ಲಿ ಇದ್ದ ಬಹುತೇಕ ಕಲಾವಿದರ ಮಕ್ಕಳು ತಾವು ಕೂಡ ಕ್ಯಾಮರಾ ಮುಂದೆ ಬರುವ ಕನಸು ಕಾಣುತ್ತಾರೆ.
ಈಗಾಗಲೇ ಕನ್ನಡ ಚಿತ್ರರಂಗದ ಅನೇಕ ಕಲಾವಿದರ ಮಕ್ಕಳು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಈಗ ಕನ್ನಡ ಚಿತ್ರರಂಗದ ಪೋಷಕ ನಟಿ, 'ಉಪೇಂದ್ರ' ಸಿನಿಮಾದ ಮಾರಿಮುತ್ತು ಪಾತ್ರದ ಖ್ಯಾತಿಯ ಸರೋಜಮ್ಮ ಅವರ ಮೊಮ್ಮಗಳು ಈಗ ಸಿನಿಮಾದಲ್ಲಿ ನಟಿಸುವುದಕ್ಕೆ ಶುರು ಮಾಡಿದ್ದಾರೆ. ಅಜ್ಜಿಯ ರೀತಿ ಆಕೆಯು ಚಿತ್ರರಂಗದಲ್ಲಿ ಹೆಸರು ಮಾಡುವ ಆಸೆಯೊಂದಿಗೆ ಬಲಗಾಲು ಇಟ್ಟು ನಟಿ ಜಯಶ್ರೀ ಆರಾಧ್ಯ ಇಂಡಸ್ಟ್ರಿಗೆ ಬಂದಿದ್ದಾರೆ. ಮುಂದೆ ಓದಿ...

ಮಾರಿಮುತ್ತು ಮೊಮ್ಮಗಳ ಸಿನಿಮಾ ಎಂಟ್ರಿ
'ಉಪೇಂದ್ರ' ಸಿನಿಮಾದ ಮಾರಿಮುತ್ತು ಪಾತ್ರವನ್ನು ಯಾರು ಮರೆಯುವುದಕ್ಕೆ ಆಗಲ್ಲ. ಆ ಪಾತ್ರದಲ್ಲಿ ನಟಿಸಿದ್ದ ಪೋಷಕ ನಟಿ ಸರೋಜಮ್ಮ ಅವರ ಮೊಮ್ಮಗಳು ನಟಿ ಜಯಶ್ರೀ ಆರಾಧ್ಯ ಈಗ ಸಿನಿಮಾ ಹೀರೋಯಿನ್ ಆಗಿದ್ದಾರೆ.

'ಪುಟ್ಟರಾಜು ಲವರ್ ಆಫ್ ಶಶಿಕಲಾ' ಚಿತ್ರ
ಕನ್ನಡದಲ್ಲಿ ಬರುತ್ತಿರುವ 'ಪುಟ್ಟರಾಜು ಲವರ್ ಆಫ್ ಶಶಿಕಲಾ' ಎಂಬ ಹೊಸ ಸಿನಿಮಾದಲ್ಲಿ ನಟಿ ಜಯಶ್ರೀ ಆರಾಧ್ಯ ನಟಿಸುತ್ತಿದ್ದಾರೆ. ಈ ಚಿತ್ರದ ಇಬ್ಬರು ನಾಯಕಿಯರ ಪೈಕಿ ಅವರು ಕೂಡ ಒಬ್ಬರಾಗಿದ್ದಾರೆ.

ಅಜ್ಜಿ ಆಸೆ ಈಡೇರಿಸಿದ ಮೊಮ್ಮಗಳು
ಜಯಶ್ರೀ ಆರಾಧ್ಯ ಹೇಳುವ ಹಾಗೆ ಅವರ ಅಜ್ಜಿ ನಟಿ ಸರೋಜಮ್ಮ ಅವರಿಗೆ ತಮ್ಮ ಕುಟುಂಬದ ಯಾರಾದರೂ ಒಬ್ಬರಾದರು ಚಿತ್ರರಂಗಕ್ಕೆ ಬರಬೇಕು ಎಂಬ ಆಸೆ ಇತ್ತಂತೆ ಅದನ್ನು ಮೊಮ್ಮಗಳಾಗಿ ಜಯಶ್ರೀ ಆರಾಧ್ಯ ಪೂರೈಸಿದ್ದಾರೆ.
ಕನ್ನಡದ ಖಳನಟಿ 'ಮಾರಿಮುತ್ತು' ಸರೋಜಮ್ಮ ಇನ್ನಿಲ್ಲ

ಸಖತ್ ಕ್ಯೂಟ
ಜಯಶ್ರೀ ಆರಾಧ್ಯ ಈಗಾಗಲೇ ಅನೇಕ ಫೋಟೋ ಶೂಟ್ ಗಳನ್ನು ಮಾಡಿಸಿದ್ದಾರೆ. ಅವರ ಲುಕ್ ಸಖತ್ ಕ್ಯೂಟ್ ಆಗಿದೆ. ಹೋಮ್ಲಿ ಮತ್ತು ಗ್ಲಾಮರ್ ಎರಡು ಪಾತ್ರಗಳಿಗೂ ಅವರು ಲುಕ್ ಹೊಂದಿಕೆ ಆಗುತ್ತದೆ.
ನಟ ಶರಣ್ ಗೆ ಕಾಟ ಕೋಡುತ್ತಿದ್ದಾಳಂತೆ 'ಮಾಜಿ ಡವ್

ಅನೇಕರ ಶುಭಾಶಯ
ಜಯಶ್ರೀ ಆರಾಧ್ಯ ನಟಿ ಸರೋಜಮ್ಮ ಅವರ ಮೊಮ್ಮಗಳು ಅಂತ ಇಷ್ಟು ದಿನ ಯಾರಿಗೂ ತಿಳಿದಿರಲಿಲ್ಲ. ಈಗ ಒಬ್ಬ ನಟಿಯಾಗಿ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು ಸಾಕಷ್ಟು ಜನರು ಅವರಿಗೆ ಫೇಸ್ ಬುಕ್ ನಲ್ಲಿ ಶುಭ ಕೋರಿದ್ದಾರೆ.

ಸತ್ಯ ಘಟನೆಯ ಸಿನಿಮಾ
'ಪುಟ್ಟರಾಜು ಲವರ್ ಆಫ್ ಶಶಿಕಲಾ' ಸಿನಿಮಾ ತುಮಕೂರಿನಲ್ಲಿ ನಡೆದ ಸತ್ಯ ಘಟನೆಯ ಸಿನಿಮಾವಾಗಿದೆ. ಖೋ ಖೋ ಆಟವನ್ನು ಆಧಾರಿಸಿದ ಸಿನಿಮಾ ಇದಾಗಿದೆ. ಬಹುತೇಕ ಈ ಸಿನಿಮಾದಲ್ಲಿ ಹೊಸ ಕಲಾವಿದರೆ ನಟಿಸಿದ್ದಾರೆ. ಸಿನಿಮಾದಲ್ಲಿ ಪ್ರೇಮ ಕಥೆ ಜೊತೆಗೆ ಕಾಮಿಡಿ ಅಂಶಗಳು ಇದೆಯಂತೆ.

ಇತ್ತೀಚಿಗೆ ಬಂದ ಹಾಡು
ಇತ್ತೀಚಿಗಷ್ಟೆ ಪ್ರೇಮಿಗಳ ದಿನದ ವಿಶೇಷವಾಗಿ 'ಮಾಜಿ ಡವ್..' ಎಂಬ ಒಂದು ಆಲ್ಬಂ ಹಾಡು ರಿಲೀಸ್ ಆಗಿತ್ತು. ಈ ಹಾಡಿನಲ್ಲಿ ಜಯಶ್ರೀ ಆರಾಧ್ಯ ನಟಿಸಿದ್ದರು. 'ಮಾಜಿ ಡವ್..' ಹಾಡಿನಲ್ಲಿ ಜಯಶ್ರೀ ಜೊತೆಗೆ ನಟನಾಗಿ ಸೋನಿ ಆಚಾರ್ಯ ಅಭಿನಯಿಸಿದ್ದರು. ನಟ ಶರಣ್ ಈ ಹಾಡನ್ನು ರಿಲೀಸ್ ಮಾಡಿದ್ದರು.