'ಮಾರ್ಕ್' ಫಸ್ಟ್ ಸಾಂಗ್; ಕಿಚ್ಚ ಸುದೀಪ್ ಡ್ಯಾನ್ಸ್, ಅಜನೀಶ್ ಟ್ಯೂನ್ ಚಿಂದಿ.. ಆದ್ರೆ...

By ಫಿಲ್ಮಿಬೀಟ್ ಡೆಸ್ಕ್

ಕಿಚ್ಚ ಸುದೀಪ್ ನಟನೆಯ 'ಮಾರ್ಕ್' ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಅಜನೀಶ್ ಲೋಕನಾಥ್ ಟ್ಯೂನ್‌ಗೆ ಅನೂಪ್ ಭಂಡಾರಿ ಸಾಹಿತ್ಯ ಬರೆದಿದ್ದಾರೆ. ವಿಜಯ ಪ್ರಕಾಶ್ ವಾಯ್ಸ್‌ನಲ್ಲಿ ಸಾಂಗ್ ಅಭಿಮಾನಿಗಳಿಗೆ ಕಿಕ್ ಕೊಡ್ತಿದೆ. ಕನ್ನಡ ಹಾಗೂ ತಮಿಳಿನಲ್ಲಿ ಸಾಂಗ್ ರಿಲೀಸ್ ಆಗಿದೆ.

ವಿಜಯ್ ಕಾರ್ತಿಕೇಯನ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದು. ಕ್ರಿಸ್‌ಮಸ್ ಸಂಭ್ರಮದಲ್ಲಿ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಭರದಿಂದ ಸಿನಿಮಾ ಚಿತ್ರೀಕರಣ ಸಾಗುತ್ತಿದೆ. 'ಮ್ಯಾಕ್ಸ್' ರೀತಿಯಲ್ಲೇ ಮತ್ತೊಂದು ಬ್ಲಾಕ್‌ಬಸ್ಟರ್ ಸಿನಿಮಾ ಕೊಡೊಕೆ ತಂಡ ಸಿದ್ಧವಾಗಿದೆ. ಸುದೀಪ್ ಹುಟ್ಟುಹಬ್ಬಕ್ಕೆ ಸಣ್ಣ ಟೀಸರ್ ಬಂದಿತ್ತು. ಅಜಯ್ ಮಾರ್ಕಂಡೆ ಖದರ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದರು. ಈಗ ಜಬರ್ದಸ್ತ್‌ ಸಾಂಗ್ ಬಂದಿದೆ.

Mark First Song Out Kiccha Sudeep Impresses with Energy Lyrics Spark Mixed Reactions

ವಯಸ್ಸು 50 ದಾಟಿದ್ರು ಕಿಚ್ಚನ ಎನರ್ಜಿ, ಬಿಂದಾಸ್ ಡ್ಯಾನ್ಸ್ ಮೂವ್ಸ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಎಲ್ಲಾ ಓಕೆ ಆದರೆ ಅನೂಪ್ ಭಂಡಾರಿ ಬರೆದಿರುವ ಸಾಹಿತ್ಯದ ಬಗ್ಗೆ ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ತಮಿಳು ಸಾಂಗ್‌ ನೋಡಿ ಕನ್ನಡಕ್ಕೆ ಡಬ್ ಮಾಡಿದಂತಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕನ್ನಡ, ಇಂಗ್ಲೀಷ್ ಜೊತೆಗೆ ತಮಿಳು ಪದಗಳನ್ನು ಸೇರಿಸಿ ಬಹಳ ವಿಚಿತ್ರವಾಗಿ ಸಾಹಿತ್ಯ ಬರೆದಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಸುದೀಪ್ ಸಿನಿಮಾಗಳಲ್ಲಿ ಹೀರೊ ಇಂಟ್ರೊಡಕ್ಷನ್ ಸಾಂಗ್ಸ್ ಚೆನ್ನಾಗಿರುತ್ತಿತ್ತು. ಬರ್ತಾ ಬರ್ತಾ ಯಾಕೋ ಅದು ಮಿಸ್ ಆಗ್ತಿದೆ. ಏನೇನೋ ಪದಗಳನ್ನು ಸೇರಿಸಿ ಕ್ಯಾಚಿಯಾಗಿ ಸಾಹಿತ್ಯ ಬರೆಯೋ ಅವಶ್ಯಕತೆ ಇಲ್ಲ. ಟ್ರೆಂಡ್ ಹಿಂದೆ ಬಿದ್ದು ಯಾಕೆ ಹಿಂಗೆ ಮಾಡ್ತಿದ್ದಾರೆ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕಿಚ್ಚನನ್ನು ಅನೂಪ್ ಬಣ್ಣಿಸಿರುವ ಬಗೆ ಅಭಿಮಾನಿಗಳಿಗೆ ಇಷ್ಟವಾಗ್ತಿದೆ. "ಸಿಕ್ಸ್ ಫೀಟ್ ರಾವಣ, ಬಟ್ ಸಿಂಗಲ್ ತಲೆ".. "ದಾದಾ ಅನ್ನೋ ಟೈಟಲ್ ವಾರಸ್ದಾರ".. "ಹೈ ವೋಲ್ಟೇಜ್ ತ್ರಿಬಲ್ ಸ್ಟಾರ್" ಎನ್ನುವ ಸಾಲುಗಳು ಅಭಿಮಾನಿಗಳ ಮನಗೆದ್ದಿದೆ.

'ವಿಕ್ರಾಂತ್ ರೋಣ' ಚಿತ್ರದ ಎಲ್ಲಾ ಹಾಡುಗಳಿಗೆ ಸ್ವತಃ ಅಜನೀಶ್ ಲೋಕನಾಥ್ ಸಾಹಿತ್ಯ ಬರೆದಿದ್ದರು. ರಾ ರಾ ರಕ್ಕಮ್ಮ ಸಾಂಗ್ ಸೂಪರ್ ಹಿಟ್ ಆಗಿತ್ತು. 'ಕೋಟಿಗೊಬ್ಬ- 3' ಚಿತ್ರದ 'ಪಟಾಕಿ ಪೋರಿಯೋ' ಹಾಡಿಗೆ ಲೇಖನಿ ಹಿಡಿದಿದ್ದರು. 'ಮ್ಯಾಕ್ಸ್' ಚಿತ್ರದ 3 ಹಾಡುಗಳಿಗೆ ಸಾಹಿತ್ಯ ಪೋಣಿಸಿದ್ದರು. ಇದೀಗ 'ಮಾರ್ಕ್' ಚಿತ್ರದ ಹೀರೊ ಇಂಟ್ರಡಕ್ಷನ್ ಸಾಂಗ್‌ಗೆ ಈಗ ಮತ್ತೆ ತಮ್ಮ 'ಮಾರ್ಕ್' ತೋರಿಸುವ ಪ್ರಯತ್ನ ಮಾಡಿದ್ದಾರೆ.

ಸತ್ಯಜ್ಯೋತಿ ಫಿಕ್ಸ್ ಹಾಗೂ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ 'ಮಾರ್ಕ್' ಸಿನಿಮಾ ನಿರ್ಮಾಣ ಆಗ್ತಿದೆ. ಶೇಖರ್ ಚಂದ್ರ ಛಾಯಾಗ್ರಹಣ, ಗಣೇಶ್ ಬಾಬು ಸಂಕಲನ ಚಿತ್ರಕ್ಕಿದೆ. ಸ್ಟಂಟ್ ಸಿಲ್ವಾ, ಸುಪ್ರೀಂ ಸುಂದರ್, ವಿಕ್ರಮ್ ಮೋರ್, ಕೆವಿನ್ ಕುಮಾರ್ ಸಾಹಸ ಸಂಯೋಜನೆ ಚಿತ್ರಕ್ಕಿದೆ. 'ಮ್ಯಾಕ್ಸ್' ಬಳಿಕ 'ಬಿಲ್ಲ ರಂಗ ಬಾಷ' ಚಿತ್ರವನ್ನು ಸುದೀಪ್ ಆರಂಭಿಸಿದ್ದಾರೆ. ಈ ನಡುವೆ 'ಮಾರ್ಕ್' ಸಿನಿಮಾ ಮಾಡಿ ಮುಗಿಸುವ ಪ್ರಯತ್ನ ನಡೀತಿದೆ.

'ಮಾರ್ಕ್' ಚಿತ್ರದ ಜೊತೆಗೆ ಸುದೀಪ್ ಬಿಗ್‌ಬಾಸ್ ಶೋ ನಿರೂಪಣೆ ಮಾಡುತ್ತಿದ್ದಾರೆ. ಚಿತ್ರೀಕರಣಕ್ಕಾಗಿ ಬೆಂಗಳೂರು, ಚೆನ್ನೈಗೆ ಸುತ್ತಾಡುತ್ತಿದ್ದಾರೆ. 'ಮಾರ್ಕ್' ಚಿತ್ರದಲ್ಲಿ ಕೂಡ 'ಮ್ಯಾಕ್ಸ್' ರೀತಿಯಲ್ಲೇ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸೂರತ್ಕಲ್ ಪೊಲೀಸ್ ಠಾಣೆ ಹಿನ್ನೆಲೆಯಲ್ಲಿ ಚಿತ್ರದ ಕಥೆ ಸಾಗಲಿದೆ.

More from Filmibeat

English summary
‘Mark’ Song Release: Kiccha Sudeep’s Energy Wins Applause, Lyrics Leave Fans Divided
Read more about: sudeep anup bhandari
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X