»   » ಶಬ್ದವೇಧಿಆಸ್ಟ್ರೇಲಿಯಾವೊಂದರಲ್ಲೇ 1 ಲಕ್ಷ ರು.

ಶಬ್ದವೇಧಿಆಸ್ಟ್ರೇಲಿಯಾವೊಂದರಲ್ಲೇ 1 ಲಕ್ಷ ರು.

Posted By: Super
Subscribe to Filmibeat Kannada

ಯೂರೋಪಿಯನ್‌ ದೇಶಗಳು ಸೇರಿದಂತೆ ಆಸ್ಟ್ರೇಲಿಯಾ, ಕೆನಡಾ, ಅಮೆರಿಕಾ, ಲಂಡನ್‌, ಜಪಾನ್‌ ಮೊದಲಾದ ಸಿನಿಮಾ ಮಾರುಕಟ್ಟೆಗೆ ಕನ್ನಡ ಚಿತ್ರಗಳು ಪ್ರವೇಶಿಸುವ ಕಾಲ ಸನ್ನಿಹಿತವಾಗಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವ ಈ ಅವಕಾಶಕ್ಕೆ ದೊಡ್ಡ ವೇದಿಕೆಯಾಗಿದೆ. ಕರ್ನಾಟಕ ಚಲಚ್ಚಿತ್ರೋದ್ಯಮ ಮನಸ್ಸು ಮಾಡುವುದಷ್ಟೇ ಬಾಕಿ.

ಕನ್ನಡೇತರರು ಹೆಚ್ಚಾಗಿ ಇರುವ ಅಮೆರಿಕೆಯನ್ನೇ ಉದಾಹರಣೆಗೆ ತೆಗೆದುಕೊಂಡಲ್ಲಿ, ಅಲ್ಲಿ ತೆರೆ ಕಾಣುವ ಬೆರಳೆಣಿಕೆ ಚಿತ್ರಗಳು ಪ್ರಶಸ್ತಿ ಪಡೆದವಾಗಿರುತ್ತವೆ. ಇಲ್ಲವೇ, ದಿನೇಶ್‌ ಬಾಬು, ಸುನಿಲ್‌ ಕುಮಾರ್‌ ದೇಸಾಯಿ, ನಾಗತಿಹಳ್ಳಿ, ಟಿ.ಎನ್‌.ಸೀತಾರಾಂ ಮೊದಲಾದವರ ನಿರ್ದೇಶನದ ಚಿತ್ರಗಳಾಗಿರುತ್ತವೆ. ಇವನ್ನು ಹೊರತುಪಡಿಸಿದರೆ, ಇತರೆ ಕಮರ್ಷಿಯಲ್‌ ಚಿತ್ರಗಳನ್ನು ವಿದೇಶೀ ತೆರೆ ಮುಟ್ಟಿಸುವ ಪ್ರಯತ್ನಗಳು ಕೂಡ ಕನ್ನಡ ಚಿತ್ರೋದ್ಯಮದಲ್ಲಿ ವ್ಯಾಪಕವಾಗಿ ನಡೆಯುತ್ತಿಲ್ಲ.

ಡಾ.ರಾಜ್‌ ಅಭಿನಯದ 'ಶಬ್ದವೇಧಿ" ಆಸ್ಟ್ರೇಲಿಯಾದಲ್ಲೇ 1 ಲಕ್ಷ ರುಪಾಯಿಗೂ ಹೆಚ್ಚು ವಹಿವಾಟು ನಡೆಸಿದೆ. ಇನ್ನು ತಮಿಳು ಚಿತ್ರಗಳಾದ ಭಾಷಾ ಹಾಗೂ ಮುತ್ತು ವಿದೇಶಗಳಲ್ಲಿ, ಅದರಲ್ಲೂ ವಿಶೇಷವಾಗಿ ಜಪಾನಿನಲ್ಲಿ ಜಯಭೇರಿ ಬಾರಿಸಿವೆ. ಅದರಲ್ಲೂ ಮುತ್ತು ಚಿತ್ರವನ್ನು ಜಪಾನೀಯರು ಪದೇಪದೇ ನೋಡಿದರು. ಅದರಲ್ಲಿ ಏನು ವಿಶೇಷ ಕಂಡಿರಿ ಎಂಬ ಪ್ರಶ್ನೆಗೆ ಸಿಕ್ಕ ಸಾರ್ವತ್ರಿಕ ಉತ್ತರ- ಮೀನಾ ಕಣ್ಣುಗಳು ಎಷ್ಟು ಚೆನ್ನಾಗಿವೆ. ಅವನ್ನು ನೋಡಲು ಎರಡು ಕಣ್ಣು ಸಾಲದು!

ಬಾಲಿವುಡ್‌ ಚಿತ್ರಗಳಾದರೆ ಭಾರತ ಹಾಗೂ ವಿದೇಶಗಳಲ್ಲಿ ಏಕಕಾಲಕ್ಕೇ ಬಿಡುಗಡೆಯಾಗುತ್ತಿವೆ. ಕೆಲವು ಚಿತ್ರಗಳಿಗೆ ಉಪ ಶೀರ್ಷಿಕೆಯೂ ಬಿಡುಗಡೆಗೆ ಮುನ್ನವೇ ಸಿದ್ಧವಾಗಿರುತ್ತದೆ. ಹಲವು ಎನ್‌ಆರ್‌ಐ ಒಕ್ಕೂಟಗಳು ಕನ್ನಡ ಚಿತ್ರಗಳನ್ನು ತೆರೆಗೆ ಕಾಣಿಸಲು ಶತಾಯಗತಾಯ ಯತ್ನಿಸುತ್ತಿವೆ. ಆದರೆ ಕರ್ನಾಟಕ ಚಲಚ್ಚಿತ್ರೋದ್ಯಮ ಅಲ್ಲಿನವರ ತುಡಿತಕ್ಕೆ ಸಾಕಷ್ಟು ಸ್ಪಂದಿಸುತ್ತಿಲ್ಲ ಎಂಬ ಆರೋಪ ಇದೆ. ಮತದಾನದಂಥಾ ಪ್ರಶಸ್ತಿ ಪಡೆದ ಚಿತ್ರಗಳನ್ನು ಮಾತ್ರ ವಿದೇಶೀ ಕನ್ನಡಿಗರು ನೋಡಿದರೆ ಸಾಕೆ. ಕುರಿಗಳು ಸಾರ್‌ ಕುರಿಗಳಂಥಾ ಲೈಟ್‌ ಕಾಮಿಡಿ ಬೇಡವೇ ಎಂಬ ಸೊಲ್ಲು ಅಂತರರಾಷ್ಟ್ರೀಯ ಚಲಚ್ಚಿತ್ರೋತ್ಸವದಲ್ಲೂ ಕೇಳಿಬರುವ ಸೂಚನೆಗಳಿವೆ.

ಈ ಮೊರೆ ಕರ್ನಾಟಕ ಚಲಚ್ಚಿತ್ರೋದ್ಯಮ ಹಾಗೂ ಮಂಡಳಿ ಕಿವಿಗೆ ಬಿದ್ದು, ಗಂಭೀರವಾಗಿ ತೆಗೆದುಕೊಳ್ಳಲಿ. ಆಗ ಕನ್ನಡದ ಚಿತ್ರಗಳ ಮಾರುಕಟ್ಟೆ ವಿಸ್ತಾರವಾಗುವುದರ ಜೊತೆಗೆ ಅನಿವಾಸೀ ಕನ್ನಡಿಗರಿಗೆ ತಮ್ಮ ಭಾಷೆಯ ಚಿತ್ರಗಳನ್ನು ನೋಡುವ ಭಾಗ್ಯ ಲಭಿಸಿದಂತಾಗುತ್ತದೆ.(ಇನ್ಫೋ ಇನ್‌ಸೈಟ್‌)

English summary
Kannada films for overseas markets

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada