For Quick Alerts
  ALLOW NOTIFICATIONS  
  For Daily Alerts

  ನನ್ನ ಪತಿ ನನ್ನನ್ನು ವಿರೋಧಿಸಲು ಕಾರಣ ಆ ಹೆಂಗಸು: ಚೈತ್ರಾ ಕೊಟೂರು

  |

  ಬಿಗ್‌ಬಾಸ್ ಮಾಜಿ ಸ್ಪರ್ಧಿ, ನಟಿ ಚೈತ್ರಾ ಕೊಟೂರು ಇಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ವಿವಾಹವಾಗಿದ್ದ ಚೈತ್ರಾ ಕೊಟೂರು ಅವರ ದಾಂಪತ್ಯ ಮೊದಲ ದಿನವೇ ವಿವಾದದಲ್ಲಿ ಸಿಲುಕಿ ಪೊಲೀಸ್ ಠಾಣೆ ಮೆಟ್ಟಿಲೇರುವಂತಾಗಿತ್ತು.

  ಸಿನಿಮಾ ಇಂಡಸ್ಟ್ರಿಲಿ‌ ಇರೋಳು,ಸರಿ ಇಲ್ಲ ಅಂತ ಅಂದ್ಕೊಂಡು ಮೋಸ ಮಾಡಿದ್ಯಾ | Filmibeat Kannada

  ತಮಗೆ ಪತಿ ನಾಗಾರ್ಜುನ ಇಂದ ಅನ್ಯಾಯವಾಗಿದೆ ಎಂದು ಆರೋಪಿಸಿ ಚೈತ್ರಾ ಕೊಟೂರು ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಅವರನ್ನು ಕುಟುಂಬ ಸದಸ್ಯರು ಕೋಲಾರ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

  ಆದರೆ ಚೈತ್ರಾ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಮುನ್ನಾ ಮಾಡಿದ್ದ ವಿಡಿಯೋ ಇದೀಗ ವೈರಲ್ ಆಗಿದ್ದು, ವಿಡಿಯೋದಲ್ಲಿ ತಾವು ನಾಗಾರ್ಜುನ ಅನ್ನು ನಂಬಿ ಮೋಸ ಹೋಗಿದ್ದಾಗಿ, ನಾಗಾರ್ಜುನ ತಮ್ಮನ್ನು ಬಳಸಿಕೊಂಡು ಮೋಸಮಾಡಿದ್ದಾಗಿ ಆರೋಪಿಸಿದ್ದಾರೆ. ವಿಡಿಯೋ ಮಾತ್ರವೇ ಅಲ್ಲದೆ ಫೇಸ್‌ಬುಕ್‌ನಲ್ಲಿ ಉದ್ದದ ಪೋಸ್ಟ್ ಹಾಕಿ ಶೋಕ ಕವಿತೆಯೊಂದನ್ನು ಸಹ ಚೈತ್ರಾ ಕೊಟೂರು ಬರೆದಿದ್ದಾರೆ. ಪೋಸ್ಟ್‌ನಲ್ಲಿ ತಮ್ಮ ದಾಂಪತ್ಯ ಹಾಳಾಗಲು ಒಬ್ಬ ಮಹಿಳೆ ಕಾರಣ ಎಂದು ಆರೋಪಿಸಿದ್ದಾರೆ.

  ಚೈತ್ರಾ ಕೊಟೂರು ಪೋಸ್ಟ್ ಯಥಾವತ್ತು ಇಂತಿದೆ:

  ''ನಾನು ತಪ್ಪು ಮಾಡಿದ್ದೇನೆ. ಏನೆಂದರೆ ನಾಗಾರ್ಜುನ್‌ನನ್ನು ನಂಬಿದ್ದು. ಆತ ಮಾಡಿದ ನಂಬಿಕೆ ದ್ರೊಹಕ್ಕೆ ಒಳಗಾಗಿದ್ದು. ನಾನು ಅತೀವವಾಗಿ ಪ್ರೀತಿಸಿದ ನನ್ನ ಹುಡುಗನಿಗೆ ಹಿಂಸಿಸುವ, ನೋವಿಸುವ ಯಾವ ಉದ್ದೇಶವೂ ನನಗೆ ಇರಲಿಲ್ಲ. ಆ ದಿನ ಮದುವೆಯಾಗುತ್ತೇನೆ ಎಂದು ಬಂದವನು, ಮತ್ತೆ ಚಕಾರವೆತ್ತಿ ನಾನು ನಡತೆಗೆಟ್ಟವಳು ಎಂದಾಗ ಅಲ್ಲಿನ ಸಾಮಾನ್ಯರೇ ನೋಡುತ್ತಿದ್ದವರು ಬಂದು ಪ್ರಶ್ನಿಸಿದರು, ಇವನು ಕೆಟ್ಟ ಉತ್ತರಗಳನ್ನು ಕೊಡುತ್ತಿದ್ದ ಕಾರಣ ಕೋಪಗೊಂಡು, ಗಲಭೆ ಸೃಷ್ಠಿಯಾಯಿತು. ಅನ್ಯಾಯಕ್ಕೊಳಗಾದ ಹೆಣ್ಣಿಗೆ ನ್ಯಾಯ ದೊರಕಿಸಿಕೊಡುವ ನೆವದಲ್ಲಿ ಮುನ್ನುಗ್ಗಿದರು. ಮದುವೆ ಮಾಡಿಸಿದರು. ಯಾವ ಕಿಡ್ನಾಪೂ ಅಲ್ಲ! ಅವನ ಫೋನ್ ಅವನ ಬಳಿಯೇ ಇತ್ತು. ಜೊತೆಗೆ ಕರೆಗಳು ಸಹ ಬರುತ್ತಿತ್ತು, ಹೋಗುತ್ತಿತ್ತು.

  ಯಾವ ಹೆಣ್ಣಿಗೆ ಆಗಲಿ ಜೊತೆ ಎಲ್ಲಾ ರೀತಿ ಇದ್ದು ಸಮಯ ಕಳೆದವನು, ಎಲ್ಲವೂ ಆಗಿದ್ದವನು ಕಡೆಯಲ್ಲಿ ನಮ್ಮ ಮಧ್ಯೆ ಏನು ಆಗೇ ಇಲ್ಲ, ಅದೇನ್ ಮಾಡ್ಕೊತೀಯೊ ಮಾಡ್ಕೊ ಅದೇನ್ ಕಿತ್ಕೊತೀಯೊ ಕಿತ್ಕೊ, ಎಂದಾಗ ಹೊಟ್ಟೆಯಲ್ಲಿ ಬೆಂಕಿ ಹಚ್ಚಿದಂತೆ ಆಗುವುದಿಲ್ಲ? ಆವೇಶ, ದು:ಖ, ದುಗುಡ ಎಲ್ಲವೂ ಮೂಡುವುದಿಲ್ಲ? ನನಗೆ ಆಗಿದ್ದೂ ಅದೇ... ಆತನಿಗೆ ನಾನು ಹೇಳಿದೆ, "ಏನು ಆಗಿಲ್ಲ; ಏನು ಇಲ್ಲ ನಮ್ಮ ಮಧ್ಯೆ ಅಂತ ಹೇಳಬೇಡ. ಬೇಕಾದರೆ ಒಪ್ಪಿಕೊಂಡು ಬಿಡು, ಆಗ ನನಗೆ ಬೇಕಾಗಿತ್ತು, ಆದರೆ ಈಗ ಬೇಕಾಗಿಲ್ಲ ಅಂತ ನೇರವಾಗಿ ಹೇಳಿಬಿಡು. ನಾನು ಸುಮ್ಮನಾಗುತ್ತೇನೆ" ಎಂದು. ಆದರೆ ಪಾಪ ಯಾವ ಕಾರಣದಿಂದಲೊ ಏನೋ ಆತ ಒಪ್ಪಿಕೊಳ್ಳಲಿಲ್ಲ..

  Exclusive: ನಡತೆಗೆಟ್ಟವಳು ಎಂದಿದ್ದಾರೆ, ಕೊಲೆ ಬೆದರಿಕೆ ಹಾಕಿದ್ದಾರೆ: ವಿವಾದದ ಬಗ್ಗೆ ಚೈತ್ರಾ ಪ್ರತಿಕ್ರಿಯೆ Exclusive: ನಡತೆಗೆಟ್ಟವಳು ಎಂದಿದ್ದಾರೆ, ಕೊಲೆ ಬೆದರಿಕೆ ಹಾಕಿದ್ದಾರೆ: ವಿವಾದದ ಬಗ್ಗೆ ಚೈತ್ರಾ ಪ್ರತಿಕ್ರಿಯೆ

  ನಾನು ಸುಮಾರು ತಿಂಗಳಿನಿಂದ dipression ಅಲ್ಲಿ ಇದ್ದೆ. Treatment ಕೂಡ ತಗೆದುಕೊಳ್ಳುತ್ತಿದ್ದೆ. ಅವರ ಮನೆಯವರಿಗೂ ಎಲ್ಲರಿಗೂ ವಿಷಯ ಮುಟ್ಟಿದರೂ ಯಾರೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಲಿಲ್ಲ. ಪಾಪ ಅವರವರ ಚಿಂತೆ ಅವರಿಗೆ. ನನ್ನ ನೋವು ಹೇಗೆ ತಾನೇ ಯಾರಿಗಾದರು ಮುಟ್ಟಲು ಸಾಧ್ಯ?

  ಗಂಡು ಹೆಣ್ಣನ್ನು ಬಳಸಿಕೊಳ್ಳುವಷ್ಟೂ ಬಳಸಿಕೊಂಡು ಬೇಡವೆಂದರೆ ಮುಗಿಯಿತು. ಪಾಪ ಆತ, ಅವನನ್ನು ಯಾರೂ ಏನೂ ಕೇಳುವಂತಿಲ್ಲ. ಅವನೂ ಒಂದು ಜೀವಿ ಅವನಿಗೂ ಮನಸ್ಸಿರುತ್ತದೆ. ಅವನಿಗೂ ಒಂದು ಜೀವನ ಇರುತ್ತದೆ. ಆದರೆ ಹೆಣ್ಣಾದವಳು ಆತನು ಮಾಡಿದ ಮೋಸದಿಂದ ನೊಂದು ಎಲ್ಲವನ್ನು ಕಳೆದುಕೊಂಡು ಏನಾದರೂ ಸರಿ ಅದು ಯಾರಿಗೂ ಬೇಡ!

  ನಾಗಾರ್ಜುನ್ ಒಬ್ಬ ಉದ್ಯಮಿ, ದುಡ್ಡಿಗಾಗಿ ಈಕೆ ಹೀಗೆ ಮಾಡುತ್ತಿದ್ದಾಳೆ ಎಂಬುದು ಸುಳ್ಳು. ಆತ ಒಬ್ಬ ತೀರಾ ಸಾಮಾನ್ಯ ನನ್ನಂತೆ middle class ಹುಡುಗ. ನಾನೇ ಸ್ವತಃ ಅವನು ಮಾಡಿಕೊಂಡಿರುವ ಸಾಲ ಮತ್ತು ಸಮಸ್ಯೆಗಳ ಕುರಿತು ತಿಳಿದು ಸಹಾಯ ಮಾಡಲು ಹೋಗಿದ್ದೆ. ನನ್ನನ್ನು ಮದುವೆ ಆಗುವುದಕ್ಕೆ ಅವನ ಸಾಲ ಸಮಸ್ಯೆಗಳು ಅಡ್ಡ ಇರಬಹುದೇನೊ ಎಂದು ಭಾವಿಸಿ "ನಿನ್ನ ಸಾಲಗಳನ್ನು clear ಮಾಡಿಕೊ, ನಾನೂ ಕಷ್ಟ ಪಟ್ಟು ಹಣವನ್ನು ಹೊಂದಿಸಿಕೊಡುತ್ತೇನೆ. ನಂತರ ಮದುವೆ ಆಗೋಣ" ಎಂದೂ ಹೇಳಿದ್ದೆ. ನನ್ನ ಸ್ವಲ್ಪ ಹಣವನ್ನು transfer ಮಾಡಿರುವ ದಾಖಲೆಗಳೂ ಸಿಗುತ್ತವೆ.

  ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ 'ಬಿಗ್ ಬಾಸ್' ಚೈತ್ರಾ ಕೊಟೂರುವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ 'ಬಿಗ್ ಬಾಸ್' ಚೈತ್ರಾ ಕೊಟೂರು

  ನಾನು ಈಗ ನನ್ನ ಗಂಡ ನಾಗಾರ್ಜುನನ ಮೇಲೆ ಕೇಸ್ ಹಾಕಿ ಪರೀಕ್ಷೆಗಳ ಮೂಲಕ ನಮ್ಮ ಮಧ್ಯೆ ಎಲ್ಲಾ ರೀತಿಯ ಸಂಬಂಧ ಇತ್ತು ಎಂದು ಸಾಬೀತುಪಡಿಸಬಹುದು, ಆತನಿಗೆ ಶಿಕ್ಷೆಯನ್ನೂ ಮಾಡಿಸಬಹುದು. ಆದರೆ ಅದರಿಂದ ನನಗೆ ದೊರೆಯುವುದು ಏನು? ನಾನು ಅತೀವವಾಗಿ ನಂಬಿ ಪ್ರೀತಿಸಿದ ಹುಡುಗನಿಗೆ ನೋವು, ಶಿಕ್ಷೆ ನೀಡಿ ನಾ ಗಳಿಸುವುದಾದರೂ ಏನು..??? ಅವನು ಎಲ್ಲಿದ್ದರೂ ಹೇಗಿದ್ದರೂ ಚನ್ನಾಗಿರಲಿ... ನನ್ನ ಜೀವ, ನನ್ನ ಪ್ರಾಣ, ನನ್ನ ಕನಸು, ನನ್ನ ಉಸಿರು ಅವನು ಎಂದು ಬದುಕಿದ್ದೆ.

  ನನ್ನ ಗಂಡ ನಾಗಾರ್ಜುನ್ ಇಷ್ಟೆಲ್ಲಾ ಈಗ ವಿರೋಧವಾಗಿರುವುದಕ್ಕೆ ಮುಖ್ಯ ಕಾರಣ ಆತನ ಜೊತೆಯಿರುವವರು ಮತ್ತು ಯಾರೊ ಒಂದು ಹೆಂಗಸು. ಅವರ ಹೆಸರೂ ನನಗೆ ಸರಿಯಾಗಿ ತಿಳಿದಿಲ್ಲ ಬಹುಶ: ಜ್ಯೊತಿ ಅಥವಾ ರೇಖಾ ಲಕ್ಷ್ಮಿ ಇರಬಹುದು. ಒಮ್ಮೆ ಅವನೊಂದಿಗೆ ಕೋಲಾರದ ನಮ್ಮ ಮನೆಗೂ ಬಂದಿದ್ದರು. ಬಂದವರೇ "ಇಂದಿನ ಕಾಲದಲ್ಲಿ f**k and forget common, ಹುಡುಗ ಕರೆದಾಗ ಹುಡುಗಿ ಹೋಗುವುದು ಅಥವಾ ಹುಡುಗಿ ಕರೆದಾಗ ಹುಡುಗ ಹೋಗುವುದು ಕಾಮನ್." ಎಂದು ಸ್ವತಃ ಹೆಣ್ಣಾಗಿದ್ದರೂ ಹೀನಾಯವಾಗಿ ಮಾತಾಡಿ ಹೋಗಿದ್ದರು. ಆಕೆ ನಮ್ಮ ವಿಷಯದಲ್ಲಿ ಯಾಕೆ ತಲೆದೂರಿಸಿದ್ದಾಳೆ ಗೊತ್ತಿಲ್ಲ!? ಆತ ಮತ್ತು ಆಕೆಯ ಸಂಬಂಧವೇನು? ಅದೂ ಗೊತ್ತಿಲ್ಲ! ನಮ್ಮಿಬ್ಬರನ್ನು ದೂರ ಮಾಡುವುದರಿಂದ ಆಕೆಗೆ ಸಿಗುವುದೇನು? ಎಂಬುದೂ ಗೊತ್ತಿಲ್ಲ! ಪಾಪ ಆಕೆಗೆ ಏನು ಹುಚ್ಚೊ... ನಮ್ಮ ಜೀವನದಲ್ಲಿ ಆಟವಾಡಿ ಯಾರಿಗಾದರೂ ಏನಾದರು ಆದರೆ ಹೊಟ್ಟೆಗೆ ಹಾಲು ಕುಡಿದಷ್ಟು ತೃಪ್ತಿಯಾಗುತ್ತದೇನೊ... ಇರಲಿ ಆಕೆ ತಣ್ಣಗಿರಲಿ... ನನ್ನ ಸಾವಿನಿಂದ ಆಕೆಗೆ ಸುಖ ಸಿಗುವುದಾದರೆ ಸಿಗಲಿ...

  ಇರಲಿಬಿಡಿ ನನ್ನ ಸಮಯ ನನ್ನ ಬದುಕು, ಭಾವನೆ ಎಲ್ಲವನ್ನೂ ದುರುಪಯೋಗ ಪಡಿಸಿಕೊಳ್ಳುತ್ತಿರುವವರು ಎಲ್ಲರೂ ಚನ್ನಾಗಿರಲಿ.

  'ನೀನು ಅಥವಾ ಸಾವು' ನನ್ನ ಮುಂದೆ ಎರಡೇ options ಇದೆ, ಎಂದು ಹೇಳಿದಾಗಲೆಲ್ಲಾ, ಸತ್ತು ಹೋಗು... ಇಂಥ ಬದುಕು ಬದುಕುವುದಕ್ಕಿಂತ ಸಾಯುವುದು ಮೇಲು ಎಂದು ಸಾರಿ ಸಾರಿ ಹೇಳುತ್ತಿದ್ದ. ಅದರಂತೆ ಸಾಯುತ್ತಿದ್ದೇನೆ... ನಾನು ಹೊರಡುತ್ತೇನೆ... ಎಲ್ಲವೂ ಸಾಕಾಗಿದೆ... ಪ್ರಪಂಚ, ಜನ, ಜಗತ್ತು... ಈ ಪ್ರಕ್ರಿಯೆಯಲ್ಲಿ ಎಲ್ಲವನ್ನೂ ನೋಡಿಬಿಟ್ಟೆ... ಎಲ್ಲರಿಗೂ ಧನ್ಯವಾದಗಳು...

  ಅಪ್ಪ ಅಮ್ಮ ನನ್ನ ಕುಟುಂಬದವರು ಮತ್ತು ನನ್ನನ್ನು ಪ್ರೀತಿಸುವ ಜನ ಎಲ್ಲರೂ ನನ್ನನ್ನು ಕ್ಷಮಿಸಿ...

  ನೀನು ನನ್ನನ್ನು ಒಮ್ಮೆಗೆ ಕೊಲ್ಲಲಿಲ್ಲ!

  ಪದೇ ಪದೇ ಕೊಂದೆ

  ಅದು ನಯವಾಗಿ...

  ನಿನ್ನ ಪ್ರೀತಿಯ ಮಾತುಗಳಿಂದ

  ನಿನ್ನ ಆಣೆ ನಂಬಿಕೆಗಳಿಂದ

  ನಿನ್ನ ಸ್ಪರ್ಶ ಹರ್ಷಗಳಿಂದ

  ಇದ್ದಾಗ ಇತ್ತು ಇಲ್ಲದಾಗ ಇಲ್ಲ

  ಇಲ್ಲಿ ಪ್ರೇಮವೆಂಬುದೇ ಇಲ್ಲ!

  ನಯವಂಚಕರ ಸಾಲಿಗೆ ಸೇರಿಸಲು ಮನವೊಪ್ಪಲಿಲ್ಲ

  ಗಂಡನಾಗಿಸಿಕೊಂಡೆ; ಕಲ್ಲು ಗುಂಡನ್ನು ಎದೆಯ ಮೇಲೆ ಹಾಕಿಕೊಂಡಂತೆ

  ಸತ್ತುಹೋಗಿದ್ದೇನೆ ಭಾರಕ್ಕೆ

  ಈ ವಂಚನೆಯ ಯಾನಕ್ಕೆ

  ನಿಟ್ಟುಸಿರು ಬಿಡಲಾಗದಷ್ಟು ಹಿಡಿದಿಟ್ಟು

  ಕೊಂದು ಹೋದಂತೆ ಹೋಗಿಬಿಟ್ಟೆ

  ನನ್ನ ಗೋರಿಗೆ ಹಿಡಿ ಮಣ್ಣೂ ಹಾಕಲಿಲ್ಲ

  ಕಡೆಯಪಕ್ಷ ಬಾಯಿಗೆ ಹನಿ ನೀರು ಇಲ್ಲ!

  -ಚೈತ್ರಾ ಕೊಟೂರು.

  English summary
  Former Bigg Boss contestant Chaitra Kotur record video and wrote long post on Facebook before attempting suicide.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X