ಚಂದನ್ ಶೆಟ್ಟಿ ಜೊತೆ ಇನ್ನೂ ಸಂಪರ್ಕ ಇದೆಯಾ ? ಎರಡನೇ ಮದುವೆ ಬಗ್ಗೆ ನಿವೇದಿತಾ ಗೌಡ ಹೇಳಿದ್ದೇನು ?

ಒಮ್ಮೊಮ್ಮೆ ಎಲ್ಲರ ಕಣ್ಣಿಗೆ ಕಾಮಿಡಿ ಪೀಸುಗಳಂತೆ ಕಾಣುತ್ತಿದ್ದವರು. ನೋಡ ನೋಡುತ್ತಿದ್ದಂತೇ ಹೇಳಿಮಾಡಿಸಿದಂತಾ ಬದುಕನ್ನು ರೂಪಿಸಿಕೊಂಡು, ಲೇವಡಿ ಮಾಡೋರ ಮುಂದೆ ಗೆದ್ದು ಬೀಗುತ್ತಾರೆ. ಇನ್ನೂ ಕೆಲವೊಮ್ಮೆ ತುಂಬಾನೇ ಇಷ್ಟ ಪಟ್ಟು ಮದುವೆಯಾದವರು, ಒಬ್ಬರನ್ನು ಬಿಟ್ಟು ಒಬ್ಬರು ಉಸಿರಾಡಲೂ ಸಾಧ್ಯವಿಲ್ಲ ಅಂದುಕೊಂಡವರು, ವಿರೋಧಗಳನ್ನು ಧಿಕ್ಕರಿಸಿ ಮದುವೆಯಾದವರು, ಜೊತೆಗೂಡಿದ ಕೆಲವೇ ದಿನಗಳಲ್ಲಿ ದೂರವಾಗುತ್ತಾರೆ. ಇದಕ್ಕೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅತ್ಯುತ್ತಮ ಉದಾಹರಣೆ.

ಹೌದು, ಎಲ್ಲರಿಗೆ ಗೊತ್ತಿರುವಂತೆ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ದಾಂಪತ್ಯ ಜೀವನ ಮುಕ್ತಾಯವಾಗಿ ಒಂದೂವರೆ ವರ್ಷಗಳಾಗಿವೆ.ಗೌರವಯುತವಾಗಿ ದೂರವಾದ ಇಬ್ಬರು ಈ ಒಂದೂವರೆ ವರ್ಷದಲ್ಲಿ ಬೇರೆ ಬೇರೆ ದಾರಿಯಲ್ಲಿ ನಡೆಯುತ್ತಿದ್ದಾರೆ. ತಮ್ಮ ತಮ್ಮ ಕೆಲಸಗಳ ಮೂಲಕ ಸದ್ದು ಮಾಡಿದ್ದಾರೆ.

Marriage is Scary Now Niveditha Gowda Opens Up on Divorce Pain and No Contact with Chandan Shetty

ನಿವೇದಿತಾ ಗೌಡ ತೆಲುಗು ಚಿತ್ರರಂಗದ ಬಾಗಿಲು ಬಡೆದು ಬಂದಿದ್ಧಾರೆ. ''ವಾಲು ಕಳ್ಳತಾ'' ಹೆಸರಿನ ಆಲ್ಬಂನಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದಲ್ಲಿ ''ಐ ಆಮ್ ಗಾಡ್'' ಚಿತ್ರದಲ್ಲಿ ದಿಗಂತ್ ಜೊತೆ ವಿಶೇಷ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದಾರೆ. ಇದರ ಜೊತೆ ಎಂದಿನಂತೆ ರೀಲ್ಸ್‌ಗಳನ್ನು ಮಾಡುತ್ತಾ ಪಡ್ಡೆ ಹುಡುಗರ ಕಣ್ಮನ ಸೆಳೆಯುತ್ತಿರುವ ನಿವೇದಿತಾ ದೇಶ ಸುತ್ತುವ ಕೆಲಸವನ್ನು ಕೂಡ ಮಾಡುತ್ತಿದ್ದಾರೆ.

ಮತ್ತೊಂದು ಕಡೆ ಚಂದನ್ ಶೆಟ್ಟಿ ''ಕಾಟನ್ ಕ್ಯಾಂಡಿ'' ಎಂಬ ಆಲ್ಬಂ ಹಾಡೊಂದನ್ನು ಮಾಡಿದ್ದಾರೆ. ನಾಯಕನಾಗಿ ಕೂಡ ಚಿತ್ರರಂಗದಲ್ಲಿ ಬಡ್ತಿ ಪಡೆದಿದ್ದಾರೆ. ಕ್ರಿಸ್ ಗೇಲ್ ಅವರ ಜೊತೆ ಕೂಡ ಕೈ ಜೋಡಿಸಿದ್ದಾರೆ. ಇನ್ನು ವಿಚ್ಛೇದನಕ್ಕಿಂತ ಮುನ್ನ ಒಪ್ಪಿಕೊಂಡಿದ್ದ ''ಮುದ್ದು ರಾಕ್ಷಸಿ'' ಎಂಬ ಚಿತ್ರವನ್ನು ಕೂಡ ಇಬ್ಬರು ಮುಗಿಸಿದ್ದಾರೆ.

ಹೀಗೆ ತಮ್ಮ ತಮ್ಮ ಜೀವನದಲ್ಲಿ ಬ್ಯುಸಿಯಾಗಿರುವ ಇವರು ಇಬ್ಬರು ಮುಂದೊಂದು ದಿನ ಮತ್ತೊಂದು ಮದುವೆ ಆಗ್ತಾರಾ ಗೊತ್ತಿಲ್ಲ. ಆದರೆ.. ಇವರಿಗೆ ಹೋದಲ್ಲಿ ಬಂದಲ್ಲಿ ಈ ಕುರಿತು ಪ್ರಶ್ನೆಯಂತು ಎದುರಾಗುತ್ತಿದೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ಸದ್ಯ ನಿವೇದಿತಾ ಗೌಡ ತಮ್ಮ ಎರಡನೇ ಮದುವೆ ಕುರಿತು ಮಾತನಾಡಿದ್ಧಾರೆ.

ಈ ಕುರಿತು ''ಸುವರ್ಣ ನ್ಯೂಸ್‌''ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ನಿವೇದಿತಾ ಗೌಡ ಸದ್ಯ ನಾನು ಖುಷಿಯಾಗಿದ್ದೇನೆ, ನನ್ನ ವೃತ್ತಿ ಬದುಕಿನ ಕಡೆ ಗಮನ ಹರಿಸಿದ್ದೇನೆ ಎಂದು ಹೇಳಿದ್ಧಾರೆ.

Marriage is Scary Now Niveditha Gowda Opens Up on Divorce Pain and No Contact with Chandan Shetty

ಇನ್ನು ಎರಡನೇ ಮದುವೆಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರ ನೀಡಿರುವ ನಿವೇದಿತಾ ಗೌಡ ನಾನು ಒಮ್ಮೆ ಮಾಡಿದ ತಪ್ಪು ಮತ್ತೆ ಮಾಡುವುದಿಲ್ಲ. ತಪ್ಪು ಮಾಡುವುದು ಮತ್ತು ಆ ತಪ್ಪಿಂದ ಪಾಠ ಕಲಿಯುವುದು ಮನುಷ್ಯನ ಸಹಜ ಗುಣ, ಆದರೆ ಮಾಡಿದ ತಪ್ಪನ್ನೇ ಮತ್ತೆ ಮತ್ತೇ ಮಾಡಬಾರದು ಎಂದು ಹೇಳಿದ್ದಾರೆ. ಮತ್ತೆ ಮದುವೆ ಅಂದರೆ ನನಗೆ ಭಯ ಆಗುತ್ತೆ ಎಂದು ಕೂಡ ಹೇಳಿದ್ದಾರೆ.

ಮುಂದುವರೆದು ಚಂದನ್ ಶೆಟ್ಟಿ ಅವರ ಜೊತೆ ನನಗೆ ಈಗ ಯಾವ ಸಂಪರ್ಕ ಇಲ್ಲ ಎಂದು ಹೇಳಿರುವ ನಿವೇದಿತಾ ಗೌಡ, ''ಐ ಆಮ್ ಗಾಡ್'' ಚಿತ್ರದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಕ್ಕೆ ಕಾರಣವನ್ನು ಕೂಡ ನೀಡಿದ್ದಾರೆ. ಅವಕಾಶ ಸಿಕ್ಕಿಲ್ಲ ಎಂದು ನಾನು ಐಟಂ ಹಾಡಿನಲ್ಲಿ ಕಾಣಿಸಿಕೊಂಡಿದ್ದೇನೆ ಎನ್ನುವುದೆಲ್ಲಾ ಸುಳ್ಳು ಎಂದಿರುವ ನಿವೇದಿತಾ ಆ ಹಾಡು ತುಂಬಾ ಚೆನ್ನಾಗಿತ್ತು. ಒಳ್ಳೆಯ ಕಥೆ ಮತ್ತು ಪಾತ್ರ ಇದ್ದರೆ ಯಾವುದೇ ರೀತಿಯ ಹಾಡುಗಳಲ್ಲಿ ಕಾಣಿಸಿಕೊಳ್ಳಲು ನನಗೆ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ.

ಇನ್ನೂ ''ನ್ಯೂಸ್ 18 ಕನ್ನಡ''ಗೆ ಕೂಡ ಸಂದರ್ಶನ ನೀಡಿರುವ ನಿವೇದಿತಾ ಗೌಡ ನಾನು ತೆಲುಗು ಚಿತ್ರರಂಗಕ್ಕೆ ಹೋಗುತ್ತಿದ್ದೇನೆ, ಡಿವೋರ್ಸ್‌ಗೆ ಅದೇ ಪ್ರಮುಖವಾದ ಕಾರಣ ಎಂದು ಕೆಲವರು ಹೇಳುತ್ತಾರೆ. ಆದರೆ ಅದೆಲ್ಲವೂ ಸತ್ಯಕ್ಕೆ ದೂರವಾದದ್ದು ಎಂದು ಹೇಳಿದ್ದಾರೆ. ನಾವು ದೂರ ಆಗಲು ಕಾರಣವೇನು ಎನ್ನುವುದನ್ನು ನಾನು ಎಲ್ಲರ ಮುಂದೆ ಹೇಳಲು ಆಗುವುದಿಲ್ಲ ಎಂದಿದ್ದಾರೆ.

ಚಂದನ್ ಶೆಟ್ಟಿ ಜೊತೆ ಮತ್ತೆ ನಾನು ಸಿನಿಮಾ ಮಾಡುವುದಿಲ್ಲ ಎಂದು ಕೂಡ ಹೇಳಿರುವ ನಿವೇದಿತಾ ಗೌಡ, ನಾವು ಇಬ್ಬರು ಒಟ್ಟಿಗೆ ಮಾಡಿದ ''ಮುದ್ದು ರಾಕ್ಷಸಿ'' ಚಿತ್ರದ ಪ್ರಚಾರವನ್ನು ವ್ಯೆಯಕ್ತಿಕ ವಿಚಾರ ಬದಿಗಿಟ್ಟು ಇಬ್ಬರು ಮಾಡುತ್ತೇವೆ ಎಂದು ಹೇಳಿದ್ದಾರೆ.

More from Filmibeat

English summary
Bigg Boss star Niveditha Gowda breaks silence on her divorce trauma. She clarifies item song offers and commits to a career-first approach after her split.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X