»   » ಮದುವೆಗೆ‘ಗ್ರಾಮದೇವತೆ’ ಗೀತೆಯೇ ಮಂತ್ರ

ಮದುವೆಗೆ‘ಗ್ರಾಮದೇವತೆ’ ಗೀತೆಯೇ ಮಂತ್ರ

Posted By: Staff
Subscribe to Filmibeat Kannada

ಕ್ಯಾಸೆಟ್‌ ಬಿಡುಗಡೆ ಸಮಾರಂಭಗಳನ್ನು ಅದ್ದೂರಿಯಾಗಿ ನಡೆಸುವ ಹಾಗೂ ಲಕ್ಷಾಂತರ ರುಪಾಯಿಗಳನ್ನು ಖರ್ಚು ಮಾಡುವ ಜಮಾನ ಸ್ಯಾಂಡಲ್‌ವುಡ್‌ನಲ್ಲಿ ಕಾಣಿಸಿಕೊಂಡು ಯಾವುದೋ ಕಾಲವಾಯಿತು. ಇಂಥ ಸಮಾರಂಭಗಳಿಗೆ ಖರ್ಚು ಮಾಡುವ ಮೊತ್ತದಲ್ಲೇ ಕಲಾತ್ಮಕ ಚಿತ್ರವೊಂದನ್ನು ನಿರ್ಮಿಸಬಹುದು. ಬೇಕಾದರೆ ಮುನ್ನುಡಿಯ ಶೇಷಾದ್ರಿ ಅವರನ್ನು ಕೇಳಿನೋಡಿ.

ಇದೀಗ ಇನ್ನೊಂದು ಕ್ಯಾಸೆಟ್‌ ಬಿಡುಗಡೆ ಕಾರ್ಯಕ್ರಮ ಸ್ಯಾಂಡಲ್‌ವುಡ್‌ನಲ್ಲಿ ಸುದ್ದಿ ಮಾಡಿದೆ. ಕ್ಯಾಸೆಟ್‌ ಬಿಡುಗಡೆಯ ಮುಹೂರ್ತವೇ ಮದುವೆ ಮುಹೂರ್ತವಾಗಿರುವುದು ಇಲ್ಲಿನ ವಿಶೇಷ. ವಿಷಯವಿಷ್ಟೇ-
ಮಲ್ಟಿಸ್ಟಾರ್‌ ಸಿನಿಮಾ 'ಗ್ರಾಮದೇವತೆ" ಸಿನಿಮಾ ಧ್ವನಿಸುರುಳಿ ಬಿಡುಗಡೆಯ ಸಂದರ್ಭದಲ್ಲಿ ಸಾಮೂಹಿಕ ವಿವಾಹ ಮೇಳವನ್ನೂ ನಡೆಸಲು ಆ ಚಿತ್ರದ ನಿರ್ಮಾಪಕರಾದ ಕೆ.ವಿ. ನಾಗೇಶ್‌ಕುಮಾರ್‌ ಉದ್ದೇಶಿಸಿದ್ದಾರೆ. ಅವರು ಅಂದುಕೊಂಡಂತೆ ಜರುಗಿದರೆ, 51 ಜೋಡಿಗಳ ಮದುವೆಗೆ 'ಗ್ರಾಮದೇವತೆ" ಹಾಡುಗಳೇ ಮಂತ್ರವಾಗುತ್ತವೆ.

ಗ್ರಾಮದೇವತೆಯ ನಿರ್ಮಾಪಕ ನಾಗೇಶ್‌ಕುಮಾರ್‌, ನಿರ್ದೇಶಕ ಸಾಯಿಕುಮಾರ್‌ ಹಾಗೂ ಅಶ್ವಿನಿ ಡಿಜಿಟಲ್‌ ಆಡಿಯೋದ ಮಾಲಿಕ ರಾಮ್‌ಪ್ರಸಾದ್‌ ಈ ವಿವಾಹ ಮೇಳದ ಕನಸನ್ನು ಕಾಣುತ್ತಿರುವ ತ್ರಿಮೂರ್ತಿಗಳು. ಬೆಂಗಳೂರಿನ ಅತ್ಯಂತ ದೊಡ್ಡ ಕಲ್ಯಾಣ ಮಂಟಪವೊಂದರಲ್ಲಿ ನಡೆಯಲಿರುವ ಈ ಸಾಮೂಹಿಕ ವಿವಾಹ ಮೇಳದಲ್ಲಿ ರಾಜ್ಯದ ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಸಿನಿ ಪ್ರಮುಖರು ಹಾಜರಿರುತ್ತಾರೆ ಅನ್ನುವುದು ನಿರ್ಮಾಪಕರ ಅಂಬೋಣ.

ಕನ್ನಡ ಚಿತ್ರರಂಗದಲ್ಲೇ ವಿಶಿಷ್ಟವಾದ ಈ ಕಾರ್ಯಕ್ರಮ ಭಾವೈಕ್ಯತೆಯ ಸಂಕೇತ ಎನ್ನುತ್ತಾರೆ ನಿರ್ಮಾಪಕರು. ಅಂದಹಾಗೆ, ಈ ಅಪರೂಪದ ಮದುವೆ ಮೇಳದಲ್ಲಿ ಭಾಗವಹಿಸಲು ಆಸಕ್ತರಾದವರು ಕೆಳಗಿನ ವಿಳಾಸಗಳನ್ನು ಸಂಪರ್ಕಿಸಬಹುದು. ಅದಕ್ಕೂ ಮುನ್ನ ಮೇಳ ಬಗೆಗಿನ ಕೆಲವು ವಿವರಗಳನ್ನು ಗಮನಿಸಿ-

  • ಮದುವೆ ಮೇಳದಲ್ಲಿ ಮಂಗಳಸೂತ್ರ, ವಧೂ ವರರಿಗೆ ಬಟ್ಟೆ , ಹಾಗೂ ಹೂವಿನಹಾರಗಳನ್ನು ಉಚಿತವಾಗಿ ನೀಡಲಾಗುವುದು.
  • ಪ್ರತಿಯಾಂದು ಜೋಡಿಯ ಕಡೆಯ 10 ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.
  • ಮದುವೆ ಮೇಳದ ಅಂಗವಾಗಿ ವಿಶೇಷ ಹೋಳಿಗೆ ಊಟ ಇದೆ.
  • ರಾಜ್ಯ ಹಾಗೂ ದೇಶದ ಯಾವುದೇ ಮೂಲೆಯ ಆಸಕ್ತರು ಮೇಳದಲ್ಲಿ ಮದುವೆಯಾಗಬಹುದು. ಜಾತಿ, ವಯಸ್ಸು ನಿರ್ಬಂಧವಿಲ್ಲ . ವರದಕ್ಷಿಣೆ ಕೇಸುಗಳಿಗೆ ಅವಕಾಶವಿಲ್ಲ . ಆಗಸ್ಟ್‌ 26, 2001 ನೋಂದಾವಣೆಗೆ ಕೊನೆಯ ದಿನಾಂಕ.

ಉಳಿದ ವಿವರ ಹಾಗೂ ಹೆಸರು ನೋಂದಾವಣೆಗೆ ಇವರನ್ನು ಸಂಪರ್ಕಿಸಬಹುದು, -

  1. ಕೆ.ವಿ. ನಾಗೇಶ್‌ಕುಮಾರ್‌, ಶ್ರೀ ಬಾಲಾಜಿ ಫಿಲ್ಮ್ಸ್‌, 3 ನೇ ಮಹಡಿ, ಆರ್‌ಪಿಸಿ ಲೇಔಟ್‌, ವಿಜಯನಗರ, ಬೆಂಗಳೂರು- 560040.
  2. ಡಿ.ರಾಮ್‌ಪ್ರಸಾದ್‌, ಅಶ್ವಿನಿ ಡಿಜಿಟಲ್‌ ಸ್ಟುಡಿಯೋ, 1902, ಅಜಯ್‌ಕೃಪ, 11 ನೇ ತಿರುವು, ಆರ್‌ಪಿಸಿ ಲೇ ಔಟ್‌, ಬೆಂಗಳೂರು-560040.
  3. ಸಾಯಿ ಪ್ರಕಾಶ್‌, ನಿರ್ದೇಶಕರು, ಪ್ರಶಾಂತಿ ನಿಕೇತನ, 43, 2 ನೇ ಮುಖ್ಯರಸ್ತೆ, ಗಂಗಾಧವ ಲೇಔಟ್‌, ವಿಜಯನಗರ, ಬೆಂಗಳೂರು- 560040.
English summary
Gramadevathe cassette release function will be the stage for marriage

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada