ಚಿತ್ರವೊಂದಕ್ಕೆ ತಮ್ಮ ಸಂಭಾವನೆ ಎಷ್ಟು ಎಂದು ಹೇಳಿದ ಧ್ರುವ; ನಿರ್ಮಾಪಕರ ಜೇಬು ಗಟ್ಟಿ ಇರಬೇಕು
ಸ್ಟಾರ್ ನಟರು ಚಿತ್ರವೊಂದಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ ಅದು ಮತ್ತಷ್ಟು ಜಾಸ್ತಿ ಆಗಿದೆ. ತಡವಾಗಿ ಸಿನಿಮಾ ಮಾಡಿದರೆ ಒಂದೇ ಚಿತ್ರದಲ್ಲಿ ಭಾರೀ ಸಂಭಾವನೆಯನ್ನು ಸ್ಟಾರ್ ಹೀರೊಗಳು ಜೇಬಿಗಿಳಿಸುತ್ತಾರೆ.
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಎಪಿ ಅರ್ಜುನ್ ನಿರ್ದೇಶನದ ಸಿನಿಮಾ ಇಂಟರ್‌ನ್ಯಾಷನಲ್ ಲೆವೆಲ್‌ನಲ್ಲಿ ಮುಂದಿನ ವಾರ ತೆರೆಗಪ್ಪಳಿಸಲಿದೆ. ಈಗಾಗಲೇ ಚಿತ್ರದ ಟೀಸರ್ ಹಾಗೂ ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಅಂದಾಜು 100 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿರುವುದಾಗಿ ಹೇಳಲಾಗ್ತಿದೆ. ಉದಯ್ ಕೆ ಮೆಹ್ತಾ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಧ್ರುವ ಸರ್ಜಾ ಚಿತ್ರರಂಗಕ್ಕೆ ಬಂದು 12 ವರ್ಷ ಕಳೆದಿದೆ. ಆದರೆ ನಟಿಸಿರುವುದು 4 ಸಿನಿಮಾಗಳು ಮಾತ್ರ. ಆದರೆ ಈ ನಾಲ್ಕು ವರ್ಷದಲ್ಲಿ ಹಿಟ್ ಸಿನಿಮಾಗಳ ಮೂಲಕ ಧ್ರುವ ಕ್ರೇಜ್ ಹೆಚ್ಚಾಗಿದೆ. ಹೀರೊ ಆಗಿ ಧ್ರುವ ನಟಿಸಿರುವ 5ನೇ ಸಿನಿಮಾ 'ಮಾರ್ಟಿನ್'. ಧ್ರುವ ಹೀರೊ ಆಗಿ ನಟಿಸಿದ ಮೊದಲ ಸಿನಿಮಾ 'ಅದ್ಧೂರಿ'. ಎಪಿ ಅರ್ಜುನ್ ಆ ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದರು. 2012ರಲ್ಲಿ ಆ ಚಿತ್ರದಕ್ಕೆ ಧ್ರುವ ಕೇಲವ 51 ಸಾವಿರ ಸಂಭಾವನೆ ಪಡೆದಿದ್ದರು.
'ಮಾರ್ಟಿನ್' ಸಿನಿಮಾ ಪ್ರಚಾರಕ್ಕಾಗಿ ಧ್ರುವ ಸಾಕಷ್ಟು ಸಂದರ್ಶನಗಳಲ್ಲಿ ಭಾಗವಹಿಸುತ್ತಿದ್ದಾರೆ. ಈ ವೇಳೆ ಸಂದರ್ಶನವೊಂದರಲ್ಲಿ ತಮ್ಮ ಮೊದಲ ಚಿತ್ರಕ್ಕೆ ಪಡೆದ ಸಂಭಾವನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇನ್ನು 'ಮಾರ್ಟಿನ್' ಚಿತ್ರಕ್ಕಾಗಿ 3 ವರ್ಷ ವ್ಯಯಿಸಿದ್ದಾರೆ. ಈ ಚಿತ್ರಕ್ಕಾಗಿ ಧ್ರುವ ಸಂಭಾವನೆ ಕೇಳಿದವರು ಶಾಕ್ ಆಗಿದ್ದಾರೆ. 'ಅದ್ಧೂರಿ' ಟು 'ಮಾರ್ಟಿನ್' ಸಿನಿಮಾಗಳ ನಡುವೆ ಧ್ರುವ ಸಂಭಾನಗೆ ಗಣನೀಯಾಗಿ ಹೆಚ್ಚಾಗಿದೆ.

ಸ್ವತಃ ಧ್ರುವ ಸರ್ಜಾ ಫಸ್ಟ್ ಡೇ ಫಸ್ಟ್ ಶೋ ಕನ್ನಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ತಮ್ಮ ಸಂಭಾವನೆ ರಿವೀಲ್ ಮಾಡಿದ್ದಾರೆ. ಈಗ ನಾನು ಚಿತ್ರವೊಂದಕ್ಕೆ 10 ರಿಂದ 12 ಕೋಟಿ ರೂ. ಸಂಭಾವನೆ ಪಡೆಯುತ್ತೇನೆ ಎಂದು ಹೇಳಿದ್ದಾರೆ. ಟ್ಯಾಕ್ಸ್ ಕಟ್ತೀನಿ. ಹಾಗಾಗಿ ಹೇಳುವುದಕ್ಕೆ ಸಮಸ್ಯೆ ಏನು ಇಲ್ಲ. 'ಅದ್ಧೂರಿ' ಹಾಗೂ ಈಗಿನ ಸಿನಿಮಾ ಸಂಭಾವನೆಗೆ ಹೋಲಿಕೆ ಮಾಡೋಕೆ ಸಾಧ್ಯವಿಲ್ಲ. ಅಂದು ಅವಕಾಶ ಕೊಟ್ಟಿದ್ದಕ್ಕೆ ಸದಾ ನಾನು ಚಿರಋಣಿ ಎಂದು ಧ್ರುವ ಸರ್ಜಾ ಹೇಳಿದ್ದಾರೆ.
'ಮಾರ್ಟಿನ್' ಬಳಿಕ ಜೋಗಿ ಪ್ರೇಮ್ ನಿರ್ದೇಶನದ 'ಕೆಡಿ' ಚಿತ್ರದಲ್ಲಿ ಧ್ರುವ ಸರ್ಜಾ ನಟಿಸುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಅತಿದೊಡ್ಡ ಚಿತ್ರ ನಿರ್ಮಾಣ ಸಂಸ್ತೆ ಕೆವಿಎನ್ ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳಿಗೆ ಕೈ ಹಾಕಿದೆ. ಸ್ಟಾರ್ ನಟರು ಕೇಳಿದಷ್ಟು ಸಂಭಾವನೆ ಕೊಟ್ಟು ಸಿನಿಮಾ ನಿರ್ಮಾಣ ಮಾಡುತ್ತಿದೆ. ದಳಪತಿ69 ಚಿತ್ರಕ್ಕಾಗಿ ವಿಜಯ್‌ಗೆ 200 ಕೋಟಿ ರೂ.ಗೂ ಅಧಿಕ ಸಂಭಾವನೆ ಕೊಡುತ್ತಿರುವುದಾಗಿ ವರದಿಯಾಗ್ತಿದೆ. 'ಕೆಡಿ' ಚಿತ್ರಕ್ಕೂ ಧ್ರುವ ಒಳ್ಳೆ ಸಂಭಾವನೆ ಪಡೆದಿದ್ದಾರೆ ಎನ್ನಲಾಗ್ತಿದೆ.
ಧ್ರುವ ಸರ್ಜಾ ಸಂಭಾವನೆ ಸಂಗತಿ ಕೇಳಿ ಅಭಿಮಾನಿಗಳು ಕಾಲರ್ ಎಗರಿಸುತ್ತಿದ್ದಾರೆ. ಇದಪ್ಪಾ ನಮ್ಮ ಹೀರೊ ಕ್ರೇಜ್ ಎನ್ನುತ್ತಿದ್ದಾರೆ. 'ಮಾರ್ಟಿನ್' ಸಿನಿಮಾ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ದೇಶ ವಿದೇಶದ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ಅರ್ಜುನ್ ಸರ್ಜಾ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಹೈವೋಲ್ಟೇಜ್ ಆಕ್ಷನ್ ಎಂಟರ್‌ಟೈನರ್ ಮಾಸ್ ಪ್ರೇಕ್ಷಕರಿಗೆ ಹಬ್ಬ ಎನ್ನುವಂತೆ ಮೂಡಿ ಬಂದಿದೆ ಎನ್ನಲಾಗ್ತಿದೆ. ಇತ್ತೀಚೆಗೆ ಸಿನಿಮಾ ಸೆನ್ಸಾರ್ ಸಹ ಮುಗಿಸಿದೆ.


Click it and Unblock the Notifications











