ಮಾರ್ಟಿನ್ ಸೋಲಿನ ಬೆನ್ನಲ್ಲೇ ಸದ್ದಿಲ್ಲದೇ ಮದುವೆಯಾಗಿ ಶಾಕ್ ನೀಡಿದ ವೈಭವಿ ಶಾಂಡಿಲ್ಯ..!

ವೈಭವಿ ಶಾಂಡಿಲ್ಯ ಗೊತ್ತಲ್ವಾ ? ಮಾರ್ಟಿನ್‌ನ ಮನದರಸಿ. ಕನ್ನಡ ಚಿತ್ರರಂಗಕ್ಕೆ ರಾಜ್ ವಿಷ್ಣು ಚಿತ್ರದ ಮೂಲಕ ವಲಸೆ ಬಂದ ಮಹಾರಾಷ್ಟ್ರದ ಈ ಚೆಲುವೆ ಆ ನಂತರ ಗಾಳಿಪಟ 2 ಚಿತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದರು. ಇಂಥಾ ವೈಭವಿ ಶಾಂಡಿಲ್ಯ ಸದ್ದಿಲ್ಲದೇ ಸದ್ಯ ಮದುವೆಯಾಗಿದ್ದಾರೆ. ಹೊಸ ಬದುಕಿಗೆ ಮುನ್ನುಡಿ ಬರೆದಿದ್ದಾರೆ.

ಹೌದು, ಹರ್ಷವರ್ಧನ್ ಜೆ ಪಾಟೀಲ್ ಜೊತೆ ವೈಭವಿ ಶಾಂಡಿಲ್ಯ ಕೊಲ್ಲಾಪರದಲ್ಲಿ ಸಪ್ತಪದಿಯನ್ನು ತುಳಿದಿದ್ದಾರೆ. ಮೂಲತಃ ಮುಂಬೈದವರಾದ ಹರ್ಷವರ್ಧನ್ ಬಾಲಿವುಡ್‌ನಲ್ಲಿ ಸಿನಿಮ್ಯಾಟೋಗ್ರಾಫರ್ ಆಗಿ ಗುರುತಿಸಿಕೊಂಡಿದ್ದಾರೆ.

Martin actress Vaibhavi Shandilya marries cinematographer Harshawardhan J Patil

ವೈಭವಿ ಶಾಂಡಿಲ್ಯ ಮತ್ತು ಹರ್ಷವರ್ಧನ್ ಅನೇಕ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈಗ ಇಬ್ಬರು ಮನೆಯವರ ಸಮ್ಮತಿಯ ಮೇರೆಗೆ ಸಪ್ತಪದಿಯನ್ನು ತುಳಿದಿದ್ದಾರೆ. ಫೆಬ್ರವರಿ 21 ರಂದು ಕೆಲವೇ ಕೆಲ ಸ್ನೇಹಿತರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ವೈಭವಿ ಶಾಂಡಿಲ್ಯ ನಮ್ಮ ಕುಟುಂಬಸ್ಥರು ಮತ್ತು ಸ್ನೇಹಿತರ ಎದುರು ನಾನು ಮತ್ತು ಹರ್ಷವರ್ಧನ್ ಹೊಸ ಜೀವನಕ್ಕೆ ಕಾಲಿಟ್ಟಿದ್ದೇವೆ. ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ಸದಾ ಚಿರರುಣಿ ಎಂದಿದ್ದಾರೆ.

ಅಂದ್ಹಾಗೇ ವೈಭವಿ ಶಾಂಡಿಲ್ಯ ಬೆಸಿಕಲಿ ಮಹಾರಾಷ್ಟ್ರದ ಚೆಲುವೆ. ಅಪ್ಪಟ ಮರಾಠಿ ಹುಡುಗಿ. ಮೇ 27 1994ರಂದು ಮುಂಬೈನಲ್ಲಿ ಹುಟ್ಟಿದ ವೈಭವಿ ಸರಿಯಾಗಿ ಒಂದು ದಶಕದ ಹಿಂದೆ ಮರಾಠಿಯ ಜನಿವಾ ಚಿತ್ರದ ಮೂಲಕ ತಮ್ಮ ವೃತ್ತಿ ಜೀವನ ಆರಂಭ ಮಾಡಿದರು. ಚಿತ್ರರಂಗಕ್ಕೆ ಬಂದರು. ಈ ಚಿತ್ರ ಬಾಲಿವುಡ್ ನಟ ಮಹೇಶ್ ಮಾಂಜ್ರೇಕರ್ ಅವರ ಮಗನ ಮೊದಲ ಚಿತ್ರ ಕೂಡ ಹೌದು. ಆ ನಂತರ ಮರಾಠಿ ಚಿತ್ರರಂಗದ ದಂತಕಥೆ ಭಗವಾನ್ ಅವರ ಜೀವನಕಥೆಯನ್ನಾಧರಿಸಿದ ಚಿತ್ರ ಏಕ್ ಅಲ್ಬೆಲಾದಲ್ಲಿ ವೈಭವಿ ಶಾಂಡಿಲ್ಯ ಕಾಣಿಸಿಕೊಂಡರು. ಈ ಚಿತ್ರದಲ್ಲಿ ವಿದ್ಯಾ ಬಾಲನ್ ಅತಿಥಿ ಪಾತ್ರವನ್ನು ನಿರ್ವಹಿಸಿದ್ದರು.

ಆ ನಂತರ ಎರಡು ವರ್ಷ ಖಾಲಿ ಕುಂತ ವೈಭವಿ ಆ ನಂತರ ಅವಕಾಶಗಳನ್ನು ಅರಸುತ್ತಾ ತಮಿಳು ಚಿತ್ರರಂಗಕ್ಕೆ ವಲಸೆ ಬಂದರು. 2017ರಲ್ಲಿ ಸಕ್ಕ ಪೊಡು ಪೊಡು ರಾಜಾ ಚಿತ್ರದಲ್ಲಿ ಸಕ್ಕ ಪೊಡು ಪೊಡು ರಾಜಾ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿದರು. ಸಂತಾನಂ ಈ ಚಿತ್ರದ ನಾಯಕ. ಇದೇ ವರ್ಷ ಶರಣ್ ಅಭಿನಯದ ರಾಜ್ ವಿಷ್ಣು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ವೈಭವಿ 2017ರಲ್ಲಿಯೇ ನೆಕ್ಸ್ಟ್ ನುವೇ ಚಿತ್ರದ ಮೂಲಕ ತೆಲುಗು ಚಿತ್ರರಂಗವನ್ನು ಕೂಡ ಪ್ರವೇಶಿಸಿದರು. ಕನ್ನಡದಲ್ಲಿ ಗಾಳಿಪಟ 2 ಮತ್ತು ಮಾರ್ಟಿನ್ ಚಿತ್ರಗಳಲ್ಲಿ ಕಾಣಿಸಿಕೊಂಡರು.ತಮಿಳಿನಲ್ಲಿ ನಿಶಾ ಎಂಬ ವೆಬ್ ಸರಣಿಯನ್ನು ಕೂಡ ಮಾಡಿದರು.

ಹೀಗೆ ಉತ್ತರದಿಂದ ದಕ್ಷಿಣಕ್ಕೆ ಬಂದ ವೈಭವಿ ಶಾಂಡಿಲ್ಯ ಅವರಿಗೆ ಗಾಳಿಪಟ 2 ಹೊರತು ಪಡಿಸಿದರೆ ಬಹು ದೊಡ್ಡ ಗೆಲುವು ಸಿಗಲಿಲ್ಲ. ದಕ್ಷಿಣದ ಮೂರು ಭಾ‍ಷೆಯಲ್ಲಿ ಕಾಣಿಸಿಕೊಂಡರು ಬಾಲಿವುಡ್‌ ಪ್ರವೇಶಿಸಲು ಮಾತ್ರ ಸಾಧ್ಯವಾಗಲಿಲ್ಲ. ಆದರೂ ಬಾಲಿವುಡ್ ಛಾಯಾಗ್ರಹಕನ ಮೇಲೆ ವೈಭವಿ ಶಾಂಡಿಲ್ಯಗೆ ಲವ್ವಾಯ್ತು. ಒಟ್ನಲ್ಲಿ ಸದ್ಯ ಹರ್ಷವರ್ಧನ್ ಜೊತೆ ವೈಭವಿ ಶಾಂಡಿಲ್ಯ ಗ್ರಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ಹೊಸ ಬದುಕನ್ನು ಶುರು ಮಾಡಿದ್ದಾರೆ. ವೈಭವಿ ಅವರಿಗೆ ನಿಮ್ಮ ಶುಭ ಹಾರೈಕೆ ಕೂಡ ಇರಲಿ.

More from Filmibeat

Read more about: marriage filmibeat news wedding
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X