Martin Trailer: ಪಾಕಿಸ್ತಾನಕ್ಕೆ ನುಗ್ಗಿ ಇಂಡಿಯನ್ ವಿಧ್ವಂಸ; ಹಸಿದ 'ಮಾರ್ಟಿನ್' ಮಜಬೂತ್ ಬೇಟೆ

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಸದ್ಯ ಚಿತ್ರದ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಮುಂಬೈನಲ್ಲಿ ಅದ್ಧೂರಿ ಟ್ರೈಲರ್ ಲಾಂಚ್ ಈವೆಂಟ್ ನಡೀತಿದೆ. ಎ. ಪಿ ಅರ್ಜುನ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ.

ಟೀಸರ್ ಮುಂದುವರೆದ ಭಾಗ ಎನ್ನುವಂತೆ 'ಮಾರ್ಟಿನ್' ಮೊದಲ ಟ್ರೈಲರ್ ಕಾಣುತ್ತಿದೆ. ಆದರೆ ಮೇಕಿಂಗ್ ಮಾತ್ರ ಹುಬ್ಬೇರಿಸುವಂತಿದೆ. ಧ್ರುವ ಸರ್ಜಾ ರಗಡ್ ಲುಕ್‌ನಲ್ಲಿ ಅಬ್ಬರಿಸಿದ್ದಾರೆ. ಆಕ್ಷನ್ ಪ್ರಿನ್ಸ್ ಸಣ್ಣ ಡೈಲಾಗ್ ಜೊತೆ ಆಕ್ಷನ್ ಸನ್ನಿವೇಶಗಳನ್ನು ಕಟ್ ಮಾಡಿ ಟ್ರೈಲರ್ ರಿಲೀಸ್ ಮಾಡಿದ್ದಾರೆ. ಅಭಿಮಾನಿಗಳಿಗಂತೂ ಸಖತ್ ಕಿಕ್ ಕೊಡ್ತಿದೆ.

Martin trailer 1 Dhurva Sarja in beast mode in action entertainer

'ಮಾರ್ಟಿನ್' ಪ್ರೀತಿ ಹಾಗೂ ದೇಶಪ್ರೇಮದ ಕಥೆಯನ್ನು ಚಿತ್ರದಲ್ಲಿ ಹೇಳಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಸತ್ಯಾ ಹೆಗಡೆ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ ಚಿತ್ರಕ್ಕಿದೆ. ಇದು ಕನ್ನಡ ಸಿನಿಮಾನಾ ಅಥವ ಹಾಲಿವುಡ್ ಸಿನಿಮಾನ ಎನ್ನುವ ಮಟ್ಟದಲ್ಲಿ ವಿಷ್ಯುವಲ್ಸ್ ನೋಡಬಹುದು. ಕಥೆಯ ಬಗ್ಗೆ ಹೆಚ್ಚು ಸುಳಿವು ಬಿಟ್ಟುಕೊಡದೇ ಮೊದಲ ಟ್ರೈಲರ್ ರಿಲೀಸ್ ಮಾಡಿದ್ದಾರೆ.

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ 'ಮಾರ್ಟಿನ್' ಚಿತ್ರಕ್ಕೆ ಕಥೆ ಬರೆದಿದ್ದಾರೆ. ಉದಯ್ ಕೆ ಮೆಹ್ತಾ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಿಸಿದ್ದಾರೆ. 240 ದಿನಗಳ ಕಾಲ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಅದೇ ಕಾರಣಕ್ಕೆ ಅಂದಾಜಿಗಿಂತ ಸಿನಿಮಾ ಬಜೆಟ್ ಹೆಚ್ಚಾಗಿದೆ. ಸದ್ಯ ಟ್ರೈಲರ್ ನೋಡಿದರೆ ಸಿನಿಮಾ ಬಗ್ಗೆ ಭರವಸೆ ಮೂಡಿದೆ. ಇದೇ ಟ್ರೈಲರ್ ಅನ್ನು ವೀರೇಶ್ ಚಿತ್ರಮಂದಿರದಲ್ಲಿ ಪ್ರದರ್ಶಿಸಲಾಗಿತ್ತು.

ಪಾಕಿಸ್ತಾನದ ಸೇನಾ ಅಧಿಕಾರಿ 'ಮಾರ್ಟಿನ್'ನನ್ನು ಕೊಂದುಬಿಡಿ ಎಂದು ತನ್ನ ಸೇನೆಗೆ ಆಜ್ಞೆ ಮಾಡುವುದರೊಂದಿಗೆ ಟ್ರೈಲರ್ ಶುರುವಾಗುತ್ತದೆ. ಅದಕ್ಕೆ ಕಾರಣ ಆತ ಪಾಕಿಸ್ತಾನಕ್ಕೆ ಹೋಗಿ ಕ್ರೈಂ ಮಾಡಿದ್ದಾನೆ ಎನ್ನುವುದು. ಅವನು ಪಾಕಿಸ್ತಾನಕ್ಕೆ ಬಂದಿರುವುದೇ ದೊಡ್ಡ ಕ್ರೈಂ ಎನ್ನುತ್ತಾನೆ. ಅವನ ಕೈಯಲ್ಲಿರುವ ಇಂಡಿಯನ್ ಟ್ಯಾಟೂ ಹಾಗೂ ಆತನನ್ನು ಮುಗಿಸಿಬಿಡಿ. ಇಲ್ಲೇ ಊತು ಹಾಕಿ ಎಂದು ಹೇಳುತ್ತಾನೆ.

Martin trailer 1 Dhurva Sarja in beast mode in action entertainer

ಅಲ್ಲಿಂದ ಮುಂದೆ ಹಸಿದ ಹುಲಿಯಂತೆ ಮಾರ್ಟಿನ್ ಘರ್ಜಿಸುತ್ತಾ ಸಾಗುತ್ತಾನೆ. ಒಂದಷ್ಟು ಆಕ್ಷನ್ ಸನ್ನಿವೇಶಗಳು, ಆತನ ಮೇಲೆ ಅಟ್ಯಾಕ್, ಅದಕ್ಕೆ ಆತನ ತಿರುಗೇಟು ಆರ್ಭಟ ಎಲ್ಲದರ ದರ್ಶನವಾಗುತ್ತದೆ. ಭಾರೀ ವಿಧ್ವಂಸದ ಬಳಿಕ ಗನ್ ಹಿಡಿದು ಸಣ್ಣ ಡೈಲಾಗ್ ಹೇಳಿ 'ಮಾರ್ಟಿನ್' ಗಹಗಹಿಸಿ ನಗುತ್ತಾನೆ. ಅಲ್ಲಿಗೆ ಟ್ರೈಲರ್ ಕಂಪ್ಲೀಟ್ ಆಗುತ್ತದೆ. 12 ಭಾಷೆಗಳಲ್ಲಿ ಟೈಟಲ್ ಕಾರ್ಡ್ ಹಾಕಿ ಚಿತ್ರತಂಡ ಕುತೂಹಲ ಮೂಡಿಸಿದೆ.

ಪಾತ್ರಕ್ಕಾಗಿ ಧ್ರುವ ಸರ್ಜಾ ಮೈ ಹುರಿಗೊಳಿಸಿರುವ ರೀತಿ ಹುಬ್ಬೇರಿಸುವಂತಿದೆ. ಇನ್ನು ಅಲ್ಲಲ್ಲಿ 'ಕೆಜಿಎಫ್' ಸರಣಿ ಛಾಯೆ ಕಾಣುತ್ತದೆ. ಇನ್ನು ಗ್ರಾಫಿಕ್ಸ್ ಹೈಲೆಟ್ ಎನ್ನುವಂತಿದೆ. ಚಿತ್ರದ ಬಹುತೇಕ ದೃಶ್ಯಗಳಲ್ಲಿ ವಿಎಫ್‌ಎಕ್ಸ್ ವರ್ಕ್ ಮಾಡಿರೋದು ಗೊತ್ತಾಗುತ್ತದೆ. ಸಿನಿಮಾ ಯಾಕೆ ತಡವಾಯಿತು ಎನ್ನುವುದು ಅರ್ಥವಾಗುತ್ತಿದೆ. ಆದರೆ ಮೇಕಿಂಗ್, ಗ್ರಾಫಿಕ್ಸ್ ರೀತಿಯಲ್ಲೇ ಕಥೆ, ಸ್ಕ್ರೀನ್‌ಪ್ಲೇ ಇರುತ್ತಾ ಎಂದು ಕಾದು ನೋಡಬೇಕಿದೆ.

ಧ್ರುವ ಸರ್ಜಾ ಜೊತೆಗೆ ವೈಭವಿ ಶಾಂಡಿಲ್ಯ, ಅನ್ವೇಶಿ ಜೈನ್, ಜಾರ್ಜಿಯಾ ಆಂಡ್ರಿಯಾನಿ, ಚಿಕ್ಕಣ್ಣ, ಮಾಳವಿಕಾ ಅವಿನಾಶ್, ಅಚ್ಯುತ್ ಕುಮಾರ್, ನಿಕಿತಿನ್ ಧೀರ್ ಸೇರಿದ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಅಕ್ಟೋಬರ್ 11ಕ್ಕೆ ಸಿನಿಮಾ ವಿಶ್ವದಾದ್ಯಂತ ಏಕಕಾಲಕ್ಕೆ ತೆರೆಗಪ್ಪಳಿಸಲಿದೆ. ಅದಕ್ಕೂ ಮುನ್ನ ಮತ್ತೊಂದು ಟ್ರೈಲರ್ ಹಾಗೂ ಸಾಂಗ್ಸ್ ರಿಲೀಸ್ ಆಗಲಿದೆ.

More from Filmibeat

English summary
Dhurva Sarja's Martin trailer 1 is intense and action-packed
Read more about: dhruva sarja martin sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X