ಟ್ರೈಲರ್‌ನಲ್ಲೇ 'ಮಾರ್ಟಿನ್' ಮ್ಯಾಜಿಕ್; ಪ್ಯಾನ್ ಇಂಡಿಯಾ ಗೆಲುವಿನ ಬಾವುಟ ಹಾರಿಸ್ತಾರಾ ಎಪಿ ಅರ್ಜುನ್?

ಬಹುನಿರೀಕ್ಷಿತ 'ಮಾರ್ಟಿನ್' ಸಿನಿಮಾ ಟ್ರೈಲರ್ ಹೊರಬಿದ್ದಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವು ಭಾಷೆಗಳಲ್ಲಿ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಟ್ರೈಲರ್‌ ಟೆಸ್ಟ್‌ನಲ್ಲಿ ಚಿತ್ರತಂಡ ಬಹುತೇಕ ಪಾಸ್ ಆಗಿದೆ. ಅಕ್ಟೋಬರ್ 11ಕ್ಕೆ ಸಿನಿಮಾ ಹಲವು ಭಾಷೆಗಳಲ್ಲಿ ತೆರೆಗೆ ಬರಲು ಸಜ್ಜಾಗುತ್ತಿದೆ. ಸದ್ಯ ಪ್ರಮೋಷನ್ ಶುರುವಾಗಿದೆ.

'ಅಂಬಾರಿ', 'ಅದ್ಧೂರಿ' ರೀತಿಯ ಹಿಟ್ ಸಿನಿಮಾಗಳನ್ನು ಕೊಟ್ಟ ಎ. ಪಿ ಅರ್ಜುನ್ ದಿಢೀರನೆ 'ಮಿ. ಐರಾವತ' ಸಿನಿಮಾ ನಿರ್ದೇಶಿಸುವ ಅವಕಾಶ ಗಿಟ್ಟಿಸಿದ್ದರು. 4 ವರ್ಷಗಳ ಹಿಂದೆ 'ಕಿಸ್' ಎನ್ನುವ ಸಣ್ಣ ಚಿತ್ರ ಕಟ್ಟಿಕೊಟ್ಟ ನಿರ್ದೇಶಕರು ಇದೀಗ ಏಕಾಏಕಿ ಪ್ಯಾನ್ ವರ್ಲ್ಡ್ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಬಹಳ ಹಿಂದೆ ಸೆಟ್ಟೇರಿದ 'ಮಾರ್ಟಿನ್' ತೆರೆಗೆ ಬರುವುದು ತಡವಾಗುತ್ತಿದೆ. ಅದಕ್ಕೆ ಕಾರಣ ಏನು ಎನ್ನುವುದು ಈಗ ಗೊತ್ತಾಗುತ್ತಿದೆ.

Martin Trailer AP Arjun film promises high-voltage action film

ಟೆಕ್ನಿಕಲಿ 'ಮಾರ್ಟಿನ್' ಸಿನಿಮಾ ಅದ್ಧೂರಿಯಾಗಿದೆ ಎನ್ನುವುದು ಟ್ರೈಲರ್ ನೋಡಿದರೆ ಗೊತ್ತಾಗುತ್ತಿದೆ. ಕೆಲವರು ಇಂತಾದೊಂದು ಔಟ್‌ಫುಟ್ ನಿರೀಕ್ಷೆ ಮಾಡಿರಲಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಧ್ರುವ ಸರ್ಜಾ ಲುಕ್, ಆರ್ಭಟ ನೋಡಿ ಹುಬ್ಬೇರಿಸುತ್ತಿದ್ದಾರೆ. ನಿರ್ದೇಶಕ ಎ. ಪಿ ಅರ್ಜುನ್ ದೊಡ್ಡದಾಗಿ ಏನೋ ಪ್ಲ್ಯಾನ್ ಮಾಡಿದ್ದಾರೆ ಎನ್ನುವುದು ಗೊತ್ತಾಗುತ್ತಿದೆ.

ಪ್ಯಾನ್ ಇಂಡಿಯಾ ಸಿನಿಮಾ ಮಾಡೋಕೆ ಹೆಚ್ಚಿನ ಸಮಯ ಬೇಕು ಎನ್ನುವುದು ಚಿತ್ರರಂಗದಲ್ಲಿ ಚಾಲ್ತಿಯಲ್ಲಿರುವ ಮಾತು. 'ಮಾರ್ಟಿನ್' ಸಿನಿಮಾ ಕೂಡ ಹೆಚ್ಚು ಸಮಯ ತೆಗೆದುಕೊಂಡಿದೆ. ಅಂದಾಜು ಮಾಡಿದ್ದಕ್ಕಿಂತ ಬಜೆಟ್ ಹೆಚ್ಚಾಗಿದೆ. 240 ದಿನಗಳ ಕಾಲ ಎ. ಪಿ ಅರ್ಜುನ್ ಸಿನಿಮಾ ಚಿತ್ರೀಕರಣ ಮಾಡಿದ್ದಾರೆ. ಅವರ ಶ್ರಮಕ್ಕೆ ಶೀಘ್ರದಲ್ಲೇ ಫಲಿತಾಂಶ ಸಿಗಲಿದೆ.

Martin Trailer AP Arjun film promises high-voltage action film

'ಪೊಗರು' ಬಳಿಕ ಧ್ರುವ ಸರ್ಜಾ ಕಾಂಬಿನೇಷನ್‌ನಲ್ಲಿ ಎ. ಪಿ ಅರ್ಜುನ್ ಸಿನಿಮಾ ಘೋಷಿಸಿದ್ದರು. ಆದರೆ ಅದನ್ನು ಪಕ್ಕಕ್ಕಿಟ್ಟು ಅರ್ಜುನ್ ಸರ್ಜಾ ಕಥೆ ಬೆರದ 'ಮಾರ್ಟಿನ್' ಸಿನಿಮಾ ಕೈಗೆತ್ತಿಕೊಂಡಿದ್ದರು. ದೇಶಪ್ರೇಮವನ್ನು ಸೇರಿಸಿ ಒಂದು ಲವ್‌ ಸ್ಟೋರಿಯನ್ನು ಚಿತ್ರದಲ್ಲಿ ಹೇಳಿರುವಂತೆ ಕಾಣುತ್ತಿದೆ. ಧ್ರುವ ಕ್ಯಾರೆಕ್ಟರೈಜೇಷನ್ ಬಗ್ಗೆ ಚಿತ್ರತಂಡ ಹೆಚ್ಚು ತಲೆ ಕೆಡಿಸಿಕೊಂಡಿದೆ.

ಪ್ಯಾನ್ ಇಂಡಿಯಾ ಸಿನಿಮಾ ಮಾಡೋದು, ಆಕ್ಷನ್ ಸೀಕ್ವೆನ್ಸ್ ರೋಚಕವಾಗಿ ಕಟ್ಟಿಕೊಡೋದು ಇತ್ತೀಚೆಗೆ ಎಲ್ಲಾ ಸಿನಿಮಾಗಳಲ್ಲಿ ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಆದರೆ ಅದನ್ನೆಲ್ಲಾ ಮೀರಿ ಸಿನಿಮಾ ಎಮೋಷನಲ್ ಆಗಿ ಕನೆಕ್ಟ್ ಆಗಬೇಕು. ಅದಕ್ಕೆ ಕಥೆ, ಚಿತ್ರಕಥೆ ಚೆನ್ನಾಗಿರಬೇಕು. ಆ ನಿಟ್ಟಿನಲ್ಲಿ 'ಮಾರ್ಟಿನ್' ಸಿನಿಮಾ ಹೇಗಿರುತ್ತದೆ ಎನ್ನುವ ಕುತೂಹಲ ಹಲವರಲ್ಲಿದೆ. ಆದರೆ ಈ ಬಗ್ಗೆ ಎ. ಪಿ ಅರ್ಜುನ್ ಬಹಳ ಕಾನ್ಫಿಡೆಂಟ್ ಆಗಿದ್ದಾರೆ.

5 ಭಾಷೆಗಳಲ್ಲಿ ದೊಡ್ಡ ದೊಡ್ಡ ಸಿನಿಮಾಗಳನ್ನು ತೆರೆಗೆ ತರಲಾಗುತ್ತಿದೆ. ಆದರೆ 'ಮಾರ್ಟಿನ್' ಈ ದಿಕ್ಕಿನಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟಿದೆ. ವಿದೇಶದ ಹಲವು ಭಾಷೆಗಳಲ್ಲಿ ಸಿನಿಮಾ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ. ಎ. ಪಿ ಅರ್ಜುನ್ ಚಿತ್ರದ ಪ್ರಮೋಷನ್‌ನಲ್ಲಿ ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ. ದೊಡ್ಡ ಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ತರಲುವ ಪ್ರಯತ್ನದಲ್ಲಿದ್ದಾರೆ.

ಧ್ರುವ ಸರ್ಜಾ ಕೂಡ ಪಾತ್ರಕ್ಕಾಗಿ ಬಹಳ ಎಫರ್ಟ್ ಹಾಕಿರೋದು ಗೊತ್ತಾಗುತ್ತಿದೆ. ಇನ್ನು ಇಡೀ ತಂಡವನ್ನು ಒಟ್ಟುಗೂಡಿಸಿಕೊಂಡು ಎ. ಪಿ ಅರ್ಜುನ್ ಸಿನಿಮಾ ಮಾಡಿ ಮುಗಿಸಿದ್ದಾರೆ. ಚಿತ್ರಕ್ಕೆ ಅಂತಿಮ ಸ್ಪರ್ಶ ನೀಡುವ ಪ್ರಯತ್ನಗಳು ನಡೆಯುತ್ತಿದೆ. ಇದು ಮೊದಲ ಟ್ರೈಲರ್ ಮಾತ್ರ. ಮುಂದೆ ಸಾಂಗ್ಸ್ ಹಾಗೂ ಮತ್ತೊಂದು ಟ್ರೈಲರ್ ರಿಲೀಸ್ ಆಗಲಿದೆ. ಕನ್ನಡ ನಿರ್ದೇಶಕರು ಒಬ್ಬೊಬ್ಬರಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಅದೇ ಹಾದಿಯಲ್ಲಿ ಎಪಿ ಅರ್ಜುನ್ ಕೂಡ ಇದ್ದಾರೆ.

More from Filmibeat

English summary
AP Arjun Directional Martin Trailer Raises Expectations;
Read more about: ap arjun martin dhruva sarja
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X