ಬೇಗ ಎಚ್ಚೆತ್ತುಕೊಳ್ಳಿ; ಇಲ್ಲದಿದ್ರೆ ಈ ವರ್ಷ ಕೂಡ ಬಾಕ್ಸಾಫೀಸ್ ಕಲೆಕ್ಷನ್ ಕಂಡವರ ಪಾಲಾಗುತ್ತೆ!

ಈ ವರ್ಷ ಕನ್ನಡದ ಯಾವುದೇ ದೊಡ್ಡ ಸಿನಿಮಾ ಇನ್ನು ಥಿಯೇಟರ್‌ಗೆ ಬಂದಿಲ್ಲ. ಯುಐ, ಮಾರ್ಟಿನ್, ಭೀಮ ಹೀಗೆ ದೊಡ್ಡ ಸಿನಿಮಾಗಳ ಪ್ರೀ ಪ್ರೊಡಕ್ಷನ್ ವರ್ಕ್ ನಡೀತಿದೆ. ಎಲೆಕ್ಷನ್, ಐಪಿಎಲ್ ಬಳಿಕ ಚಿತ್ರಗಳನ್ನು ರಿಲೀಸ್ ಮಾಡಲು ಪ್ಲ್ಯಾನ್ ಮಾಡಲಾಗುತ್ತಿದೆ. ಆದರೆ ಯಾವ ಸಿನಿಮಾ? ಯಾವಾಗ ರಿಲೀಸ್? ಎನ್ನುವುದು ಮಾತ್ರ ಗೊತ್ತಾಗುತ್ತಿಲ್ಲ.

ಸ್ಯಾಂಡಲ್‌ವುಡ್‌ನಲ್ಲಿ ಇರುವುದು ಬೆರಳೆಣಿಕೆಯಷ್ಟು ಸ್ಟಾರ್ ನಟರು ಮಾತ್ರ. ಎಲ್ಲರೂ ವರ್ಷಕ್ಕೆ ಒಂದು ಸಿನಿಮಾ ಮಾಡಲು ಹಿಂದು ಮುಂದು ನೋಡುತ್ತಿದ್ದಾರೆ. ಅಂತೂ ಇಂತೂ ಸಿನಿಮಾ ಮಾಡಿದರೂ ಸರಿಯಾದ ರೀತಿಯಲ್ಲಿ ಪ್ರಮೋಷನ್ ಮಾಡಿ ರಿಲೀಸ್ ಮಾಡುತ್ತಿಲ್ಲ. ಅದೇ ಕಾರಣಕ್ಕೆ ಪರಭಾಷಾ ಸಿನಿಮಾಗಳು ಇಲ್ಲಿ ಜೋರಾಗಿ ಸದ್ದು ಮಾಡುತ್ತಿವೆ.

Martin UI Bhima Max Makers have to announce film release date soon

ಈಗಾಗಲೇ ತೆಲುಗು, ತಮಿಳಿನದ ದೊಡ್ಡ ದೊಡ್ಡ ಸಿನಿಮಾಗಳ ರಿಲೀಸ್ ಡೇಟ್ ಘೋಷಣೆ ಆಗಿದೆ. 'ಕಲ್ಕಿ', 'ಪುಷ್ಪ'2, 'ದೇವರ', 'ಇಂಡಿಯನ್-2', 'ಕಂಗುವ' ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್ ಆಗಿದೆ. 'ಗೇಮ್ ಚೇಂಜರ್' ಹಾಗೂ 'ತಂಗಾಲನ್' ಚಿತ್ರತಂಡಗಳು ಒಳ್ಳೆ ವೀಕೆಂಡ್ ಹುಡುಕಾಟದಲ್ಲಿವೆ. ಆದರೆ ಕನ್ನಡ ಸಿನಿಮಾಗಳ ರಿಲೀಸ್ ಡೇಟ್ ಮಾತ್ರ ಇನ್ನು ಘೋಷಣೆ ಆಗಲಿಲ್ಲ.

'ಭೈರತಿ ರಣಗಲ್' ಬಿಟ್ಟು ಈ ವರ್ಷ ಯಾವ ಕನ್ನಡ ಸಿನಿಮಾ ಯಾವಾಗ ರಿಲೀಸ್ ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಎಲೆಕ್ಷನ್, ಐಪಿಎಲ್ ಮುಗಿದ ಬೆನ್ನಲ್ಲಿ ಒಟ್ಟೊಟ್ಟಿಗೆ ರಿಲೀಸ್‌ ಮಾಡೋಕೆ ಮುಂದಾದರೂ ಅಚ್ಚರಿ ಪಡಬೇಕಿಲ್ಲ. ಮುಂದೆ ಪರಭಾಷೆಯ ದೊಡ್ಡ ಸಿನಿಮಾಗಳ ಎದುರು ಸಿನಿಮಾ ರಿಲೀಸ್ ಮಾಡಲು ಭಯಪಡುವಂತಾಗುತ್ತದೆ. ಹಾಗಾಗಿ ಈಗಲೇ ರಿಲೀಸ್ ಡೇಟ್ ಅನೌನ್ಸ್ ಮಾಡಬೇಕಾಗಿದೆ. ಇನ್ನು ಕಾಯುತ್ತಾ ಕೂರುವುದರಲ್ಲಿ ಅರ್ಥವಿಲ್ಲ.

ಕೊನೆ ಪಕ್ಷ 'ಮಾರ್ಟಿನ್', 'ಯುಐ', 'ಭೀಮ', 'ಬಘೀರ' ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಈ 3 ಸಿನಿಮಾಗಳ ರಿಲೀಸ್ ಡೇಟ್ ಘೋಷಣೆ ಮಾಡಲು ಅಡ್ಡಿಯಿಲ್ಲ. ಸುದೀಪ್ ನಟನೆಯ 'ಮ್ಯಾಕ್ಸ್' ಚಿತ್ರದ ಚಿತ್ರೀಕರಣ ಕೊನೆಹಂತ ತಲುಪಿದೆ. ಹಾಗಾಗಿ ಆ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಲು ಅಡ್ಡಿಯಿಲ್ಲ. ಆದರೆ ಯಾಕೋ ಯಾರೊಬ್ಬರು ಈ ಬಗ್ಗೆ ಯೋಚಿಸಿದಂತೆ ಕಾಣುತ್ತಿಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

Martin UI Bhima Max Makers have to announce film release date soon

ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಉಪೇಂದ್ರ ನಿರ್ದೇಶಿಸಿ ನಟಿಸಿರುವ 'ಯುಐ' ಹಾಗೂ ದುನಿಯಾ ವಿಜಯ್ 'ಭೀಮ' ಸಿನಿಮಾಗಳು ಕಳೆದ ವರ್ಷವೇ ಬರಬೇಕಿತ್ತು. 'ಸಲಗ' ಬಳಿಕ 'ಭೀಮ' ಚಿತ್ರಕ್ಕೆ ವಿಜಯ್ ಆಕ್ಷನ್ ಕಟ್ ಸಹ ಹೇಳಿದ್ದಾರೆ. ಆದರೆ ಕಾರಣಾಂತರಗಳಿಂದ ತಡವಾಗಿತ್ತು. ಆದರೆ ಇನ್ನು ಕೂಡ ಎರಡೂ ಸಿನಿಮಾಗಳ ರಿಲೀಸ್ ಯಾವಾಗ? ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ.

ಧ್ರುವ ಸರ್ಜಾ 'ಮಾರ್ಟಿನ್' ಸಿನಿಮಾ ಬಹಳ ತಡವಾಗುತ್ತಿದೆ. ಬರೋಬ್ಬರಿ 240 ದಿನಗಳ ಕಾಲ ಸಿನಿಮಾ ಚಿತ್ರೀಕರಣ ನಡೆದಿದೆ. ಹಾಗಾಗಿ ಬಜೆಟ್ ಕೂಡ ಡಬಲ್ ಆಗಿದೆ. ಮತ್ತೊಂದು ಕಡೆ ಧ್ರುವ ನಟನೆಯ 'ಕೆಡಿ' ಸಿನಿಮಾ ಚಿತ್ರೀಕರಣ ಕೂಡ ಬಹುತೇಕ ಮುಕ್ತಾಯವಾಗಿದೆ. ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಈ ವರ್ಷ ತೆರೆಗೆ ಬರುವುದು ಅನುಮಾನ ಎನ್ನುವಂತಾಗಿದೆ.

ದರ್ಶನ್ ಕಳೆದ ವರ್ಷದ ಕೊನೆಗೆ 'ಕಾಟೇರ' ರೀತಿಯ ಹಿಟ್ ಸಿನಿಮಾ ಕೊಟ್ಟಿದ್ದರು. ಈ ವರ್ಷ ಅಕ್ಟೋಬರ್ ವೇಳೆಗೆ 'ಡೆವಿಲ್' ಸಿನಿಮಾ ರಿಲೀಸ್ ಮಾಡಲು ಪ್ರಯತ್ನಿಸುತ್ತಿರುವುದಾಗಿ ಘೋಷಿಸಿದ್ದರು. ಆದರೆ ಚಿತ್ರೀಕರಣದ ವೇಳೆ ಗಾಯಗೊಂಡು ಸಿನಿಮಾ ತಡವಾಗುತ್ತಿದೆ. ಎಡಗೈಗೆ ಸರ್ಜರಿ ಸಹ ಆಗಿದ್ದು ದರ್ಶನ್ ವಿಶ್ರಾಂತಿ ಪಡೆಯುತ್ತಿದ್ದಾರೆ. ಆದಷ್ಟು ಬೇಗ ಮತ್ತೆ ಚಿತ್ರೀಕರಣದಲ್ಲಿ ಭಾಗಿ ಆಗಲು ಮುಂದಾಗಿದ್ದಾರೆ.

More from Filmibeat

English summary
Bhima, Martin, UI, Max Makers have to concentrate on film promotion and release
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X