ಅಂಬೇಡ್ಕರ್ ಭವನದಲ್ಲಿ ಏನಾಯ್ತು ಎಂದು ಪಿನ್ ಟು ಪಿನ್ ಮಾಹಿತಿ ಬಿಚ್ಚಿಟ್ಟ ಮಾರುತಿ ಗೌಡ

Recommended Video

ಇಂಚಿಂಚು ಮಾಹಿತಿ ಬಿಚ್ಚಿಟ್ಟ ಮಾರುತಿ ಗೌಡ..! | Filmibeat Kannada

ಅಂಬೇಡ್ಕರ್ ಭವನದಲ್ಲಿ ನಡೆದ ಬಾಡಿ ಬಿಲ್ಡಿಂಗ್ ಕಾಂಪಿಟೇಶನ್ ವೇಳೆ ಜಿಮ್ ಟ್ರೈನರ್ ಮಾರುತಿ ಗೌಡ ಅವರ ಮೇಲೆ ನಟ ದುನಿಯಾ ವಿಜಯ್ ಮತ್ತು ಸ್ನೇಹಿತರಿಂದ ಹಲ್ಲೆ ಮಾಡಲಾಗಿತ್ತು ಎಂಬ ಪ್ರಕರಣ ಕಳೆದ ಮೂರು ದಿನಗಳಿಂದ ದೊಡ್ಡ ಸುದ್ದಿ ಮಾಡುತ್ತಿದೆ.

ಈ ಪ್ರಕರಣದಲ್ಲಿ ಈಗಾಗಲೇ ನಟ ದುನಿಯಾ ವಿಜಯ್, ಪ್ರಸಾದ್ ಸೇರಿದಂತೆ ನಾಲ್ಕು ಜನ ಜೈಲು ಸೇರಿದ್ದಾರೆ. ಇಷ್ಟ ದಿನ ಪ್ರತ್ಯಕ್ಷದರ್ಶಿಗಳ ಹೇಳಿಕೆ, ಪಾನಿಪುರಿ ಕಿಟ್ಟಿ ಹೇಳಿಕೆ ಮತ್ತು ಮೂರನೇ ವ್ಯಕ್ತಿಗಳ ಹೇಳಿಕೆಯಿಂದ ಘಟನೆ ಹೇಗಾಯಿತು, ಯಾಕಾಯಿತು ಎಂಬುದರ ಬಗ್ಗೆ ತಿಳಿಯಲಾಗಿತ್ತು.

ಇದೀಗ, ಹಲ್ಲೆಗೆ ಒಳಗಾದ ಮಾರುತಿ ಗೌಡ ಅವರೇ ಸ್ವತಃ ಘಟನೆ ಬಗ್ಗೆ ಪಿನ್ ಟು ಪಿನ್ ಮಾಹಿತಿಯನ್ನ ಬಿಚ್ಚಿಟ್ಟಿದ್ದಾರೆ. ಅಂದು ರಾತ್ರಿ ಅಂಬೇಡ್ಕರ್ ಭವನದಲ್ಲಿ ಏನಾಯಿತು.? ದುನಿಯಾ ವಿಜಯ್ ನಿಜಕ್ಕೂ ಹೊಡೆದ್ರಾ.? ವಿಡಿಯೋ ಮಾಡಿದ್ರಾ ಎಂಬುದನ್ನ ಬಹಿರಂಗಪಡಿಸಿದ್ದಾರೆ. ಮಾರುತಿ ಗೌಡ ಹೇಳಿದ ಸಂಪೂರ್ಣ ವಿವರ ಮುಂದೆ ಓದಿ.....

ನಮ್ಮ ಅಂಕಲ್ ನ ಕೇಳಿದ್ರು

ನಮ್ಮ ಅಂಕಲ್ ನ ಕೇಳಿದ್ರು

ದುನಿಯಾ ವಿಜಿ, ಡ್ರೈವರ್ ಪ್ರಸಾದ್, ಬಾಡಿ ಬಿಲ್ಡರ್ ಪ್ರಸಾದ್, ಮಣಿ ಸೇರಿದಂತೆ ಹಲವರು ಇದ್ದರು ಎಂದು ಹೇಳುವ ಮಾರುತಿ ಗೌಡ ''ಬಾಡಿ ಬಿಲ್ಡಿಂಗ್ ಕಾಂಪಿಟೇಶನ್ ವೇಳೆ ವಿಜಿ ಸರ್ ನನ್ನನ್ನು ಕೇಳಿದ್ರು ಕಿಟ್ಟಿ ಎಲ್ಲಿ ಅಂತ. ಬಂದಿಲ್ಲ ಅಂತ ಹೇಳಿದೆ. ಎಲ್ಲಿದ್ದಾನೆ ಅಂದ್ರು, ಗೊತ್ತಿಲ್ಲ ಅಂದೆ. ಆಮೇಲೆ ಅವರೆಲ್ಲರೂ ಹೋದ್ರು. ಸ್ವಲ್ಪ ಹೊತ್ತಿನ ನಂತರ ಹತ್ತು ಜನ ಹುಡುಗರು ಬಂದ್ರು. ನನ್ನನ್ನು ಹೊಡೆದರು'' ಎಂದು ಘಟನೆಯನ್ನ ವಿವರಿಸಿದರು.

ವಿಜಿ ಅವರೇ ಕಾರ್ ಗೆ ಎತ್ತಾಕ್ಕೊಳ್ಳಿ ಅಂದ್ರು

ವಿಜಿ ಅವರೇ ಕಾರ್ ಗೆ ಎತ್ತಾಕ್ಕೊಳ್ಳಿ ಅಂದ್ರು

''ಒಳಗಡೆಯಿಂದ ಹೊರಗಡೆವರೆಗೂ ಹೊಡೆದುಕೊಂಡೇ ಕರೆದುಕೊಂಡು ಹೋದರು. ಕಾರ್ ಬಳಿ ವಿಜಿ ಇದ್ದರು. ಇವನ ಕಾರ್ ಗೆ ಎತ್ತಾಕ್ಕೊಳ್ಳಿ ಅಂತ ದುನಿಯಾ ವಿಜಿ ಹೇಳಿದ್ರು. ಡ್ರೈವರ್ ಪ್ರಸಾದ್, ಬಾಡಿ ಬಿಲ್ಡರ್ ಪ್ರಸಾದ್, ವಿಜಿ, ಮಣಿ ಮತ್ತು ವಿಜಿ ಅವರ ಮಗ ಕೂಡ ಕಾರಿನಲ್ಲಿದ್ದರು''

ಅಭಿಮಾನಿಗಳು ಹೊಡೆದ್ರು ಅಂತ ಹೇಳ್ಬೇಕು

ಅಭಿಮಾನಿಗಳು ಹೊಡೆದ್ರು ಅಂತ ಹೇಳ್ಬೇಕು

''ನಾನು ಹೊಡೆದಿದ್ದು ಅಲ್ಲ, ಅಭಿಮಾನಿಗಳು ಹೊಡೆದ್ರು ಅಂತ ಹೇಳ್ಬೇಕು. ನಾನು ನಿನ್ನ ಕರ್ಕೊಂಡು ಬರ್ತಾ ಇದ್ದೀನಿ ಅಷ್ಟೇ ಅಂತಾ ವಿಜಿ ಹೇಳಿದ್ರು. ನಮ್ಮ ಅಂಕಲ್ ಗೂ ಫೋನ್ ಮಾಡಿದ್ರು. ಸಿಕ್ಕಾಪಟ್ಟೆ ಬೈದ್ರು. ವಿಜಿ ಅವರ ಮಗ ವಿಡಿಯೋ ಮಾಡಿದ್ದು''

ಪೊಲೀಸಿನವರು ಫೋನ್ ಮಾಡಿದ್ರು

ಪೊಲೀಸಿನವರು ಫೋನ್ ಮಾಡಿದ್ರು

ಒಂದೂವರೆ ಗಂಟೆ ಸುತ್ತಾಡಿಸಿದ್ರು. ರಾಜರಾಜೇಶ್ವರಿ ನಗರದ ಬಳಿ ನನಗೆ ಗೊತ್ತಾಯಿತು. ಅಲ್ಲೆ ಬಿಡ್ತಿನಿ ಅಂದ್ರು. ಅಷ್ಟರಲ್ಲೇ ಪೊಲೀಸಿನವರು ಫೋನ್ ಮಾಡಿದರು. ವಿಜಿ ಅವರೇ ಕರ್ಕೊಂಡು ಬರಬೇಕು ಅಂದ್ರು. ಆಮೇಲೆ ಸ್ಟೇಷನ್ ಗೆ ಬಂದಿದ್ದು'' ಎಂದು ನಡೆದ ಘಟನೆಯನ್ನ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ.

ಹಲ್ಲೆ ಮಾಡಿದ್ದು ನಿಜ ಅಂತೆ

ಹಲ್ಲೆ ಮಾಡಿದ್ದು ನಿಜ ಅಂತೆ

ಮಾರುತಿ ಗೌಡ ಅವರ ಹೇಳಿಕೆ ಪ್ರಕಾರ ದುನಿಯಾ ವಿಜಿ, ಪ್ರಸಾದ್, ಪ್ರಸಾದ್ ಡ್ರೈವರ್, ಮಣಿ ಮತ್ತು ವಿಜಿ ಅವರ ಮಗ ಕಾರಿನಲ್ಲಿದ್ದರು. ಒಂದೂವರೆ ಗಂಟೆ ಸುತ್ತಾಡಿಸಿಕೊಂಡು ಹಲ್ಲೆ ಮಾಡಿದ್ರು ಎಂಬುದು ನಿಜವಾಗಿದೆ. ಇಂದು ವಿಜಿ ಮತ್ತು ತಂಡದವರ ಜಾಮೀನು ಅರ್ಜಿಯ ಆದೇಶ ಹೊರಬೀಳಲಿದ್ದು, ಜಾಮೀನು ಸಿಗುತ್ತಾ ಅಥವಾ ಮತ್ತಷ್ಟು ದಿನ ಜೈಲಿನಲ್ಲೇ ಇರ್ಬೇಕಾ ಕಾದುನೋಡಬೇಕಿದೆ.

More from Filmibeat

English summary
Gym trainer Maruti Gowda has revealed about the duniya vijay assault incident.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X