»   » ಚಕಿತಗೊಳಿಸುವ ರವಿಚಂದ್ರನ್ 'ಅಪೂರ್ವ' ಸಂಗತಿಗಳು

ಚಕಿತಗೊಳಿಸುವ ರವಿಚಂದ್ರನ್ 'ಅಪೂರ್ವ' ಸಂಗತಿಗಳು

By: ಜೀವನರಸಿಕ
Subscribe to Filmibeat Kannada

'ಅಪೂರ್ವ' ಸಿನಿಮಾ ಹೆಸರಿಗೆ ತಕ್ಕಂತೆ ಅಪೂರ್ವವಾಗೋ ಎಲ್ಲ ಲಕ್ಷಣಗಳೂ ಇವೆ. ಕ್ರೇಜಿಸ್ಟಾರ್ ರವಿಚಂದ್ರನ್ ಕೈಚಳಕದ ಈ ಚಿತ್ರ ಗೆಲ್ಲೋ ಸಿನಿಮಾ ಆಗುತ್ತೋ ಇಲ್ಲವೋ ಗೊತ್ತಿಲ್ಲ. ಒಳ್ಳೆಯ ಸಿನಿಮಾ ಮಾತ್ರ ಖಂಡಿತ ಆಗುತ್ತೆ ಅನ್ನುತ್ತಿದ್ದವರು ಈಗ ಕಣ್ಣರಳಿಸಿ ನೋಡ್ತಿದ್ದಾರೆ.

ಯಾಕಂದ್ರೆ ಅಂತಹ ಅಚ್ಚರಿ ಅದ್ದೂರಿ ಮುಖಗಳನ್ನ ನೀವು ತೆರೆಮೇಲೆ ನೋಡಬಹುದು. ಪಾತ್ರಗಳಾಗಿ ನೋಡದಿದ್ರೂ ಹಾಡಿನಲ್ಲಿ ಬಂದುಹೋಗೋ ಸೂಪರ್ ಸ್ಟಾರ್ ಗಳ ಝಲಕನ್ನ ಈಗಾಗ್ಲೇ ರವಿಮಾಮ ತೆರೆದಿಟ್ಟಿದ್ದಾರೆ. [ತಂದೆಯ ಹುಟ್ಟುಹಬ್ಬಕ್ಕೆ ರವಿಚಂದ್ರನ್ 'ಅಪೂರ್ವ' ಕನಸು]

ಈ ಪ್ರೇಮಲೋಕದ ಸರದಾರನ ಮಾತಿಗೆ ಮರುಮಾತಾಡದೆ ತಾರೆಯರು ತಮ್ಮ ಶೂಟಿಂಗ್ ಸಮಯವನ್ನೂ ಲೆಕ್ಕಿಸದೇ ರವಿಮಾಮನ ಅಪೂರ್ವ ಸಿನಿಮಾದ ಅತ್ಯಪೂರ್ವ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ.

ನಿರ್ದೇಶಕ, ನಟ, ನಿರ್ಮಾಪಕರಾಗಿ ಕ್ರೇಜಿಸ್ಟಾರ್ ತಮ್ಮ ಸಿನಿಮಾ ಬಗ್ಗೆ ಹೆಮ್ಮೆಯಿಂದ ಹೇಳುವುದೇನೆಂದರೆ... 'ಪ್ರೇಮಲೋಕ' (1987) ಅಂದಿನ ಪ್ರೇಮಲೋಕವಾದ್ರೆ 'ಅಪೂರ್ವ' ಇಂದಿನ ಪ್ರೇಮಲೋಕ ಅಂತಾರೆ. ಅಂತಹಾ ಸಿನಿಮಾಗೆ ಎಂಟ್ರಿಕೊಟ್ಟ ಸ್ಟಾರ್ ಪಟ್ಟಿ ನೋಡಿದ್ರೆ ನೀವು ಬೆರಗಾಗ್ತೀರ. ಇದು ಫಿಲ್ಮಿಬೀಟ್ ವಿಶೇಷ.

ಸುದೀಪ್ ನನ್ನ ಹಿರಿಯ ಮಗ

ಇಲ್ಲಿ ಬಂದಿರೋ ಎಲ್ಲ ಹೀರೋಗಳಿಗಿಂತ ಸುದೀಪ್ ವಿಭಿನ್ನ, ಯಾಕಂದ್ರೆ ಅಪೂರ್ವ ಸಿನಿಮಾದಲ್ಲಿ ಒಂದು ಪಾತ್ರವನ್ನೂ ಮಾಡಿದ್ದಾರಂತೆ. ಇನ್ನು ತನ್ನ ಗುಣಗಳನ್ನ ಇಷ್ಟಪಡೋ ಸುದೀಪ್ ರನ್ನ ಚಿತ್ರದಲ್ಲಿ ತನ್ನ ಹಿರಿಯ ಮಗ ಅಂತ ಪರಿಚಯಿಸ್ತಾರೆ ರವಿಮಾಮ.

ಮೊದಲ ಎಂಟ್ರಿ ಗೆಳೆಯ ಶಿವ

ಇವನು ನನ್ನ ಗೆಳೆಯ ಶಿವ, ಹೃದಯ ಶಿವ ಅನ್ನೋ ರವಿಮಾಮನ ನೆಚ್ಚಿನ ಗೆಳೆಯ ಬಾಲ್ಯದ ಗೆಳೆಯ ಶಿವರಾಜ್ ಕುಮಾರ್ ಹಾಡಿನ ಮೊದಲಿಗೆ ಎಂಟ್ರಿಕೊಡ್ತಾರೆ. ಅಲ್ಲಿಂದ ಶುರುವಾಗುತ್ತೆ 13 ಹಾಡಿನ ತುಣುಕುಗಳ ಝಲಕ್.

ಪವರ್ ಸ್ಟಾರ್ ಎಂಟ್ರಿ ಸೂಪರ್

ಪವರ್ ಸ್ಟಾರ್ ಪುನೀತ್ ರ ಎಲ್ಲಾ ಸಿನಿಮಾಗಳಿಗೂ ಕ್ಲಾಪ್ ಮಾಡಿ ಆಲ್ ದ ಬೆಸ್ಟ್ ಹೇಳೋದು ರವಿಮಾಮ. ಇನ್ನು ರವಿಮಾಮನ ಅಪೂರ್ವ ಸಿನಿಮಾದಲ್ಲಿ ಪುನೀತ್ ಎಂಟ್ರಿಗೆ ದೊಡ್ಡ ಸ್ಪೇಸ್ ಇದೆ. ಸಿನಿಮಾದ ಥೀಮ್ ಬಿಟ್ ನೊಂದಿಗೆ ಪುನೀತ್ ಎಂಟ್ರಿಕೊಡ್ತಾರೆ.

ರವಿಮಾಮನ ಸಂಗೀತಕ್ಕೆ ಯಶ್ ಎಂಟ್ರಿ

ಇನ್ನು ಅಪೂರ್ವ ವಿಶೇಷತೆ ಅಂದ್ರೆ ಮತ್ತದೇ 13 ಹಾಡುಗಳು. ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದ ಚಿತ್ರ ಪ್ರೇಮಲೋಕದಲ್ಲಿ ಇದ್ದಿದ್ದೂ ಇಷ್ಟೇ ಸಂಖ್ಯೆಯ ಹಾಡುಗಳು ಎಂಬುದು ವಿಶೇಷ.

ಚಾಲೆಂಜಿಂಗ್ ಸ್ಟಾರ್ ಸೂಪರ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ರವಿಮಾಮನ ಬಣ್ಣದ ಲೋಕ ನೋಡಿ ಬೆರಗಾಗ್ತಾರೆ. ನಸುನಗುತ್ತಲೇ ಹಾಡಿಗೆ ತಲೆದೂಗಿ ಸಂಭ್ರಮಿಸ್ತಾರೆ. ದರ್ಶನ್ ಕೇವಲ ಎಂಟ್ರೀನಾ ಅಥವಾ ಡೈಲಾಗ್ ಪಾತ್ರ ಏನಾದ್ರೂ ಇದ್ಯ ಅನ್ನೋ ಕುತೂಹಲ ಅಭಿಮಾನಿಗಳಿಗಿದೆ.

ಯಶ್ ಇಸ್ ಯಂಗ್ ಫ್ರೆಂಡ್

ರಾಕಿಂಗ್ ಸ್ಟಾರ್ ಯಶ್ ರನ್ನ ರವಿಮಾಮ ಪರಿಚಯಿಸೋದು ಮೈ ಯಂಗ್ ಫ್ರೆಂಡ್ ಅಂತ. ರವಿಚಂದ್ರನ್ ರನ್ನು ಆರಾಧಿಸೋ ಯಶ್ ಅಪೂರ್ವ ಹಾಡುಗಳನ್ನ ಮೆಚ್ಚಿದ್ದಾರೆ. ಸಿನಿಮಾಗಾಗಿ ಕಾದಿದ್ದಾರೆ.

ಶಿವಣ್ಣ ನಂತರ ರಮೇಶ್ ಅರವಿಂದ್

ಹಾಡುಗಳ ಸಾಲಲ್ಲಿ ಶಿವಣ್ಣ ನಂತರ ಎಂಟ್ರಿಕೊಡೋದು ತ್ಯಾಗರಾಜ (ಟ್ರ್ಯಾಜಿಡಿ ಕಿಂಗ್) ರಮೇಶ್ ಅರವಿಂದ್. ರಮೇಶ್ ರ ಹ್ಯಾಂಡ್ಸಮ್ ಲುಕ್ಕನ್ನ ಪ್ರೇಕ್ಷಕರು ಚಿತ್ರದಲ್ಲಿ ಎಂಜಾಯ್ ಮಾಡೋದ್ರಲ್ಲಿ ಅನುಮಾನವಿಲ್ಲ.

ಗಣೇಶ್, ವಿಜಯ್ ರಾಘವೇಂದ್ರ, ಉಪ್ಪಿ

ಗೋಲ್ಡನ್ ಸ್ಟಾರ್ ಗಣೇಶ್, ನಟ ವಿಜಯ್ ರಾಘವೇಂದ್ರನ್ನ ಕೂಡ ಚಿತ್ರ ಹಾಡಿನ ಮೂಲಕ ಕ್ರೇಜಿ ನಿರ್ದೇಶಕ ತೆರೆಮೇಲೆ ತಂದಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಕೂಡ ರವಿಮಾಮನ ಕರೆಗೆ ಓಗೊಟ್ಟು ಅಪೂರ್ವದಲ್ಲಿ ಒಂದಾಗಿದ್ದಾರೆ.

ಇನ್ನೂ ಯಾರ್ಯಾರಿರ್ತಾರೋ

ಅಪೂರ್ವ ಸಿನಿಮಾ ಒಂದು ಲಿಫ್ಟ್ ನಲ್ಲಿ ನಡೆಯೋ ಕಥೆ. ಕಥೆಯಲ್ಲಿ 61 ವರ್ಷದ ಮುದುಕನಿಗೂ 19 ವರ್ಷದ ಹುಡುಗಿಗೂ ಪ್ರೇಮಾಂಕುರವಾಗುತ್ತೆ. ಇದೇ ಚಿತ್ರದ ತಿರುಳು.

English summary
Here are the marvellous facts of Crazy Star Ravichandran's 'Apoorva' movie. The movie is slated for release on 17th April on his father N Veeraswamy birthday. The film has only two main characters. But many Sandalwood star herores are appearing on screen.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada