twitter
    For Quick Alerts
    ALLOW NOTIFICATIONS  
    For Daily Alerts

    ಅಪ್ಪು ಸ್ಮರಣಾರ್ಥ ದೊಡ್ಮನೆಯಿಂದ ಬೃಹತ್ ಅನ್ನ ಸಂತರ್ಪಣೆ: ಮೆನು ಏನೇನು?

    |

    ಪುನೀತ್ ರಾಜ್‌ಕುಮಾರ್ ನಿಧನರಾಗಿ ಇಂದಿಗೆ 12 ದಿನಗಳಾಗಿವೆ. ಪ್ರತಿದಿನ 20 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಪುನಿತ್ ಸಮಾಧಿ ದರ್ಶನಕ್ಕೆ ಬರುತ್ತಿದ್ದಾರೆ. ಪುನೀತ್ ಅಂತಿಮ ದರ್ಶನಕ್ಕೆ ಬಂದ ಜನಸಾಗರದ್ದಂತೂ ವಿಶ್ವ ದಾಖಲೆಯೇ. ಕರ್ನಾಟಕದ ಜನ ದೊಡ್ಮನೆ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿ, ಅಪ್ಪು ಮೇಲಿನ ಅಭಿಮಾನಕ್ಕೆ ಇವು ಸಾಕ್ಷಿ.

    ಇದೀಗ ಆ ಅಭಿಮಾನಿಗಳಿಗಾಗಿ ಬೃಹತ್ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಪುನೀತ್ ರಾಜ್‌ಕುಮಾರ್ ಕುಟುಂಬದವರು ಇರಿಸಿಕೊಂಡಿದ್ದಾರೆ. ಇಂದು ಅರಮನೆ ಮೈದಾನದ ತ್ರಿಪುರ ವಾಸಿನಿ ಗ್ರೌಂಡ್‌ನಲ್ಲಿ ಅಭಿಮಾನಿಗಳಿಗೆ ಭೋಜನ ಉಣಬಡಿಸಲಾಗುತ್ತದೆ.

    ಭಾರಿ ಸಂಖ್ಯೆಯ ಜನರು ಭೋಜನಕೂಟದಲ್ಲಿ ಭಾಗವಹಿಸುತ್ತಾರೆ ಎನ್ನಲಾಗಿದ್ದು ಕಳೆದ ಎರಡು-ಮೂರು ದಿನಗಳಿಂದಲೂ ಈ ಭೋಜನ ಕೂಟಕ್ಕಾಗಿ ತಯಾರಿ ನಡೆಸಲಾಗಿದೆ. ಅಣ್ಣಾವ್ರ ಕುಟುಂಬ, ರಾಕ್‌ಲೈನ್ ವೆಂಕಟೇಶ್, ಶಾಸಕ ರಾಜುಗೌಡ, ಪರಮೇಶ್ವರ್ ಹಾಗೂ ಇನ್ನೂ ಹಲವರ ಮೇಲುಸ್ತುವಾರಿಯಲ್ಲಿ ಅನ್ನ ಸಂತರ್ಪಣೆ ಕಾರ್ಯ ನಡೆಯುತ್ತಿದ್ದು, ಮಧ್ಯಾಹ್ನ 12 ಗಂಟೆಗೆ ಅನ್ನಸಂತರ್ಪಣೆ ಆರಂಭವಾಗಲಿದೆ. ಅಭಿಮಾನಿಗಳಿಗಾಗಿ ಸಸ್ಯಹಾರ ಹಾಗೂ ಮಾಂಸಾಹಾರಗಳನ್ನು ಭಾರಿ ಮೊತ್ತದಲ್ಲಿ ತಯಾರು ಮಾಡಲಾಗಿದೆ.

    ಸುಮಾರು 30,000 ಸಾವಿರ ಜನರಿಗೆ ಸಾಕಾಗುವಷ್ಟು ಊಟ ತಯಾರು ಮಾಡಲಾಗುತ್ತಿದೆ. 5 ರಿಂದ 10 ಸಾವಿರ ಜನಕ್ಕಾಗುವಷ್ಟು ಸಸ್ಯಾಹಾರ, 25 ಸಾವಿರ ಜನಕ್ಕಾಗುವಷ್ಟು ಮಾಂಸಾಹಾರವನ್ನು ತಯಾರು ಮಾಡಲಾಗುತ್ತಿದೆ. ನಿನ್ನೆ ರಾತ್ರಿಯಿಂದಲೇ ಅಡುಗೆ ಕಾರ್ಯ ಪ್ರಾರಂಭವಾಗಿದೆ. ಈಗಾಗಲೇ ಹಲವು ಚಿಕನ್ ಭಕ್ಷ್ಯಗಳು ಅಭಿಮಾನಿಗಳ ಹೊಟ್ಟೆ ಸೇರಲು ತಯಾರಾಗಿವೆ.

    ನಾನ್ ವೆಜ್‌ ಪ್ರಿಯರಿಗೆ ಹಲವು ಭಕ್ಷ್ಯಗಳು

    ನಾನ್ ವೆಜ್‌ ಪ್ರಿಯರಿಗೆ ಹಲವು ಭಕ್ಷ್ಯಗಳು

    ಸ್ವತಃ ಪುನೀತ್ ರಾಜ್‌ಕುಮಾರ್ ಭೋಜನ ಪ್ರಿಯರಾಗಿದ್ದರು ಅದರಲ್ಲೂ ನಾನ್‌ ವೆಬ್ ಭಕ್ಷ್ಯಗಳೆಂದರೆ ಅವರಿಗೆ ಬಹಳ ಪ್ರೀತಿ. ಹಾಗಾಗಿ ವಿವಿಧ ನಾನ್‌ ವೆಬ್ ಭೋಜನಗಳನ್ನು ಅಭಿಮಾನಿಗಳಾಗಿ ಇಂದು ಮಾಡಲಾಗಿದೆ. ಚಿಕನ್ ಕೂರ್ಮಾ, ಚಿಕನ್ ಪ್ರೈ, ಚಿಕನ್ ಕಬಾಬ್, ಬಿರಿಯಾನಿ, ಮುದ್ದೆ, ಅನ್ನ, ರಸಂ, ಚಿಕನ್ ಸಾರು, ಮೊಟ್ಟೆಗಳನ್ನು ನಾನ್‌ ವೆಬ್ ಪ್ರಿಯರಿಗಾಗಿ ಸಿದ್ಧಪಡಿಸಲಾಗಿದೆ.

    ಸಸ್ಯಾಹಾರಿಗಳಿಗಾಗಿ ಪ್ರತ್ಯೇಕ ವ್ಯವಸ್ಥೆ

    ಸಸ್ಯಾಹಾರಿಗಳಿಗಾಗಿ ಪ್ರತ್ಯೇಕ ವ್ಯವಸ್ಥೆ

    ಇನ್ನು ಸಸ್ಯಾಹರ ಊಟ ಮಾಡುವವರಿಗಾಗಿ ಪ್ರತ್ಯೇಕವಾಗಿ ಅಡುಗೆ ಮಾಡಲಾಗಿದ್ದು, ಆಲೂ ಕಬಾಬ್, ಮಸಾಲೆ ವಡೆ, ಬೇಬಿ ಕಾರ್ನ್ ಫ್ರೈ, ಮುದ್ದೆ, ಗೀ ರೈಸ್, ಗೀ ರೈಸ್‌ಗಾಗಿ ವೆಜ್ ಕೂರ್ಮಾ, ಅನ್ನ, ಸಾರು, ರಸಂ, ಮಜ್ಜಿಗೆಗಳನ್ನು ತಯಾರು ಮಾಡಲಾಗಿದೆ. ಇದರ ಜೊತೆಗೆ ಪಾಯಸ, ಕೆಲವು ರೀತಿಯ ಸಿಹಿ ತಿಂಡಿಗಳನ್ನು ಮಾಡಲಾಗಿದೆ. ಒಂದು ಪಂಕ್ತಿಗೆ 5 ಸಾವಿರದಿಂದ 7 ಸಾವಿರ ಜನ ಕೂರಬಹುದಾದಂತೆ ವ್ಯವಸ್ಥೆ ಮಾಡಲಾಗಿದೆ.

    8500 ಕೆಜಿ ಚಿಕನ್, 1000 ಲೀಟರ್ ಅಡುಗೆ ಎಣ್ಣೆ

    8500 ಕೆಜಿ ಚಿಕನ್, 1000 ಲೀಟರ್ ಅಡುಗೆ ಎಣ್ಣೆ

    ಭಾರಿ ದೊಡ್ಡ-ದೊಡ್ಡ ಪಾತ್ರೆಗಳಲ್ಲಿ ಸುಮಾರು 1500 ಅಡುಗೆಯವರು ನಿನ್ನೆ ರಾತ್ರಿಯಿಂದಲೇ ವಿವಿಧ ರೀತಿಯ ಅಡುಗೆಗಳನ್ನು ಮಾಡುತ್ತಿದ್ದಾರೆ. ಈವರೆಗೆ 8500 ಸಾವಿರ ಕೆಜಿ ಚಿಕನ್, 25 ಸಾವಿರ ಕೇಜಿ ಸೊನಾ ಮಸೂರಿ ಅಕ್ಕಿ, 10,000 ಮೊಟ್ಟೆ, 1000 ಲೀ ಅಡುಗೆ ಎಣ್ಣೆ, ನೂರಾರು ಕೆಜಿ ಟಮೆಟೊ, ಈರುಳ್ಳಿ ಇನ್ನಿತರೆ ತರಕಾರಿಗಳು. ಭಾರಿ ಸಂಖ್ಯೆಯ ಪೇಪರ್ ರೋಲ್, ಪೇಪರ್ ತಟ್ಟೆ, ಲೋಟಗಳು ಇನ್ನಿತರೆ ವಸ್ತುಗಳನ್ನು ತರಿಸಲಾಗಿದೆ. ಪಾತ್ರೆಗಳನ್ನು ಎತ್ತಲು ಮಿನಿ ಕ್ರೇನ್‌ ಮಾದರಿ ವಾಹನಗಳನ್ನು ಬಳಸಲಾಗುತ್ತಿದೆ. ಅಡುಗೆಯನ್ನು ಬಹುತೇಕ ಕಟ್ಟಿಗೆ ಒಲೆಯಲ್ಲಿಯೇ ಮಾಡಲಾಗುತ್ತಿದೆ. ಗ್ಯಾಸ್ ಅನ್ನು ಬಹಳ ಕಡಿಮೆ ಬಳಸಲಾಗುತ್ತಿದೆ.

    ನಾವು ಸಿದ್ಧರಾಗಿದ್ದೇವೆ: ರಾಜುಗೌಡ

    ನಾವು ಸಿದ್ಧರಾಗಿದ್ದೇವೆ: ರಾಜುಗೌಡ

    ಮಧ್ಯಾಹ್ನ 12 ಗಂಟೆಯಿಂದ 4 ಗಂಟೆ ವರೆಗೆ ಅನ್ನ ಸಂತರ್ಪಣೆ ಕಾರ್ಯ ನಡೆಯಲಿದೆ. ಭಾರಿ ಸಂಖ್ಯೆಯಲ್ಲಿ ಜನರು ಬರುವ ನಿರೀಕ್ಷೆ ಇದೆ. ತ್ರಿಪುರ ವಾಸಿನಿ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ''ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಬರುವ ನಿರೀಕ್ಷೆ ಇದೆ. ನಿರೀಕ್ಷೆ ಮೀರಿ ಜನ ಬಂದರೂ ನಾವು ಸಿದ್ಧರಾಗಿದ್ದೇವೆ. ಕಾರ್ಯಕ್ರಮದಲ್ಲಿ ಅಹಿತಕರ ಘಟನೆ ನಡೆಯದಂತೆ ಅಪ್ಪು ಅಭಿಮಾನಿಗಳೇ ಎಚ್ಚರ ವಹಿಸಲಿದ್ದಾರೆ'' ಎಂದು ಅನ್ನ ಸಂತರ್ಪಣೆ ಕಾರ್ಯದ ಮೇಲುಸ್ತುವಾರಿ ವಹಿಸಿಕೊಂಡಿರುವ ಶಾಸಕ ರಾಜುಗೌಡ ಹೇಳಿದ್ದಾರೆ.

    English summary
    Mass dinner organized for Puneeth Rajkumar fans from family. Both Veg and Non Veg dishes prepared for fans. Here is the menu.
    Tuesday, November 9, 2021, 14:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X