twitter
    For Quick Alerts
    ALLOW NOTIFICATIONS  
    For Daily Alerts

    ಟೈಟಲ್ ವಿವಾದ ಅಂತ್ಯ: 'ಮಾಸ್ ಲೀಡರ್' ಆಗಸ್ಟ್ 11ಕ್ಕೆ ರಿಲೀಸ್

    By Bharath Kumar
    |

    ಶಿವರಾಜ್ ಕುಮಾರ್ ಅಭಿನಯದ 'ಮಾಸ್ ಲೀಡರ್' ಚಿತ್ರದ ಟೈಟಲ್ ವಿವಾದ ಕೊನೆಗೂ ಅಂತ್ಯ ಕಂಡಿದೆ. ಇತ್ತೀಚೆಗಷ್ಟೇ ನಿರ್ದೇಶಕ ಎ.ಎಂ.ಆರ್ ರಮೇಶ್ ಮತ್ತು ಅವರ ಪತ್ನಿ ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಚಿತ್ರ ಬಿಡುಗಡೆಯಾಗದಂತೆ ತಡೆಯಾಜ್ಞೆ ತಂದಿದ್ದರು.

    ಆದ್ರೀಗ, ಈ ವಿವಾದವನ್ನ ಮಾತುಕತೆಯ ಮೂಲಕ ಬಗೆಹರಿಸಿಕೊಂಡಿದ್ದು, ಕೋರ್ಟ್ ನಿಂದ ತಂದಿದ್ದ ತಡೆಯಾಜ್ಞೆಯನ್ನ ಹಿಂಪಡೆಯಲು ನಿರ್ಧರಿಸಿದ್ದಾರೆ. ನಿರ್ಮಾಪಕ ಕೆ.ಮಂಜು ಅವರ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ 'ಮಾಸ್ ಲೀಡರ್' ನಿರ್ಮಾಪಕ ತರುಣ್ ಶಿವಪ್ಪ ಹಾಗೂ ಎ.ಎಂ.ಆರ್ ರಮೇಶ್ ಅವರ ಮಧ್ಯೆ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಲಾಗಿದೆ.

    Mass Leader Controversy has been Cleared

    ಶಿವಣ್ಣನ 'ಮಾಸ್ ಲೀಡರ್'ಗೆ ರಿಲೀಸ್ ಕಂಟಕ: ಬಿಡುಗಡೆ ಮಾಡುವಂತಿಲ್ಲ.!ಶಿವಣ್ಣನ 'ಮಾಸ್ ಲೀಡರ್'ಗೆ ರಿಲೀಸ್ ಕಂಟಕ: ಬಿಡುಗಡೆ ಮಾಡುವಂತಿಲ್ಲ.!

    ನಿರ್ದೇಶಕ ಎ.ಎಂ.ಆರ್ ರಮೇಶ್ 'ಲೀಡರ್' ಟೈಟಲ್ ಹಕ್ಕನ್ನ ಹೊಂದಿದ್ದರು. ಹೀಗಾಗಿ, ಶಿವಣ್ಣ ಅಭಿನಯದ 'ಮಾಸ್ ಲೀಡರ್' ಚಿತ್ರವನ್ನ ಬಿಡುಗಡೆ ಮಾಡಬಾರದು ಎಂದು ವಿರೋಧ ವ್ಯಕ್ತಪಡಿಸಿದ್ದರು. ಈಗ ಈ ವಿವಾದ ಸುಖಾಂತ್ಯ ಕಂಡಿದ್ದು, ಈ ಮೊದಲೇ ಹೇಳಿದಂತೆ ಆಗಸ್ಟ್ 11 ರಂದು 'ಮಾಸ್ ಲೀಡರ್' ಸಿನಿಮಾ ತೆರೆ ಕಾಣುತ್ತಿದೆ.

    'ಮಾಸ್ ಲೀಡರ್' ಚಿತ್ರಕ್ಕೆ ರೋಸ್ ಖ್ಯಾತಿಯ ನರಸಿಂಹ (ಸಹನಾ ಮೂರ್ತಿ) ಆಕ್ಷನ್ ಕಟ್ ಹೇಳಿದ್ದು, ಶಿವರಾಜ್ ಕುಮಾರ್, ವಿಜಯ ರಾಘವೇಂದ್ರ, ಲೂಸ್ ಮಾದ ಯೋಗೇಶ್, ಗುರು ಜಗ್ಗೇಶ್, ಪ್ರಣೀತಾ, ಶರ್ಮಿಳಾ ಮಾಂಡ್ರೆ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

    English summary
    Shiva rajkumar starter Mass leader controversy has been cleared and the movie is releasing on 11th August as announced earlier. Movie is produced by Tarun Shivappa.
    Monday, August 7, 2017, 18:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X