»   » 'ಮಾಸ್ ಲೀಡರ್' ಶಿವಣ್ಣನಿಗೆ ಸೆನ್ಸಾರ್ ನಿಂದ ಗ್ರೀನ್ ಸಿಗ್ನಲ್

'ಮಾಸ್ ಲೀಡರ್' ಶಿವಣ್ಣನಿಗೆ ಸೆನ್ಸಾರ್ ನಿಂದ ಗ್ರೀನ್ ಸಿಗ್ನಲ್

Posted By:
Subscribe to Filmibeat Kannada

ತರುಣ್ ಟಾಕೀಸ್ ಲಾಂಛನದಲ್ಲಿ ತರುಣ್ ಶಿವಪ್ಪ ಮತ್ತು ಹಾರ್ದಿಕ್ ಗೌಡ ನಿರ್ಮಿಸಿರುವ ಶಿವರಾಜ್ ಕುಮಾರ್ ನಾಯಕರಾಗಿ ನಟಿಸಿರುವ ಚಿತ್ರ ಮಾಸ್ ಲೀಡರ್'. ಈ ಚಿತ್ರಕ್ಕೆ ಸೆನ್ಸಾರ್ ನಿಂದ U/A ಪ್ರಮಾಣಪತ್ರ ದೊರಕಿದೆ.

ಬಹು ನಿರೀಕ್ಷೆ ಮೂಡಿಸಿರುವ 'ಮಾಸ್ ಲೀಡರ್' ಸಿನಿಮಾ ಆಗಸ್ಟ್ 11ಕ್ಕೆ ಬಿಡುಗಡೆ ಆಗಲಿದೆ.

'ಮಾಸ್ ಲೀಡರ್' ಚಿತ್ರದಲ್ಲಿ ಶಿವರಾಜ್ ಕುಮಾರ್ ಯೋಧನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾಶ್ಮೀರದ ಕಣಿವೆಗಳು ಹಾಗೂ ಕತಾರ್‍ನಲ್ಲಿ ಈ ಚಿತ್ರದ ಒಂದು ಹಾಡು ಮತ್ತು ಆಕ್ಷನ್ ದೃಶ್ಯಗಳ ಚಿತ್ರೀಕರಣ ನಡೆಸಲಾಗಿದೆ.

Mass Leader gets U/A Certificate: releasing on August 11th

ಹಲವಾರು ವಿಶೇಷತೆಗಳನ್ನು ಒಳಗೊಂಡಿರುವ 'ಮಾಸ್ ಲೀಡರ್' ಆಗಸ್ಟ್ 11 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಗೊಳ್ಳಲು ತಯಾರಿಯಲ್ಲಿದೆ.

'ರೋಸ್' ಖ್ಯಾತಿಯ ನರಸಿಂಹ (ಸಹನಾಮೂರ್ತಿ) ನಿರ್ದೇಶನದಲ್ಲಿ ಶಿವರಾಜ್ ಕುಮಾರ್ ನಾಯಕರಾಗಿ ನಟಿಸಿರುವ 'ಮಾಸ್ ಲೀಡರ್' ಚಿತ್ರದಲ್ಲಿ ಪ್ರಣೀತ ನಾಯಕಿಯಾಗಿ ನಟಿಸಿದ್ದಾರೆ.

ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರ ಜೊತೆಗೆ ವಿಜಯ ರಾಘವೇಂದ್ರ, ಗುರು ಜಗ್ಗೇಶ್, ಲೂಸ್ ಮಾದ ಯೋಗಿ, ಪ್ರಕಾಶ್ ಬೆಳವಾಡಿ, ಲಹರಿ ವೇಲು ಹಾಗೂ ಶ್ರೀನಗರ ಕಿಟ್ಟಿ - ಭಾವನ ದಂಪತಿಯ ಪುತ್ರಿ ಬೇಬಿ ಪರಿಣಿತ ಕೂಡಾ ಅಭಿನಯಿಸಿದ್ದಾರೆ. ವೀರಸಮರ್ಥ್ ಸಂಗೀತ ನಿರ್ದೇಶನ, ಗುರುಪ್ರಶಾಂತ್ ರೈ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ.

English summary
Shiva Rajkumar starrer 'Mass Leader' gets U/A Certificate and the movie is releasing on August 11th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada