ಯಶ್ 'ಟಾಕ್ಸಿಕ್' ಚಿತ್ರಕ್ಕಾಗಿ ಥಿಯೇಟರ್‌ಗಳ ನಡುವೆ ಭಾರೀ ಪೈಪೋಟಿ; ಇದಪ್ಪಾ ರಾಯನ ಕ್ರೇಜ್ ಅಂದ್ರೆ

ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡ್ತಿದೆ. ಸಿನಿಮಾ ಬಿಡುಗಡೆಗೆ ಸರಿಯಾಗಿ 2 ತಿಂಗಳು ಬಾಕಿಯಿದೆ. ಶೀಘ್ರದಲ್ಲೇ ಪ್ರಚಾರ ಶುರುವಾಗಲಿದೆ. ದೊಡ್ಡಮಟ್ಟದಲ್ಲಿ ದೇಶವಿದೇಶಗಳಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ. ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಈಗಾಗಲೇ ಚರ್ಚೆ ಶುರುವಾಗಿದೆ.

ಈ ವರ್ಷ ಕನ್ನಡದಲ್ಲಿ ಯಾವುದೇ ಸಿನಿಮಾ ದೊಡ್ಡದಾಗಿ ಸದ್ದು ಮಾಡಿಲ್ಲ. ಇದರಿಂದ ಚಿತ್ರಮಂದಿರಗಳಿಗೂ ಹಿನ್ನೆಡೆಯಾಗಿದೆ. ಪರಭಾಷೆಯ ಕೆಲ ಚಿತ್ರಗಳು ಕರ್ನಾಟಕದಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದವು. ಆದರೂ ರಾಜ್ಯದ ಮೂಲೆ ಮೂಲೆಯಲ್ಲಿರುವ ಚಿತ್ರಮಂದಿರಗಳು ಹೌಸ್‌ಫುಲ್ ಆಗಬೇಕು ಅಂದ್ರೆ 'ಟಾಕ್ಸಿಕ್' ಬರಬೇಕು ಎನ್ನುವಂತಾಗಿದೆ. ಚಿತ್ರಮಂದಿರದ ಮಾಲೀಕರು ಕೂಡ ಯಶ್ ಚಿತ್ರಕ್ಕಾಗಿ ಎದುರು ನೋಡುತ್ತಿದ್ದಾರೆ.

Massive Demand for Yash s Toxic The Reason Theaters Are Competing for Screens

ದೊಡ್ಡ ಸಿನಿಮಾಗಳನ್ನು ಪ್ರದರ್ಶನ ಮಾಡಲು ಇವತ್ತಿಗೂ ಕೆಲವೆಡೆ ಚಿತ್ರಮಂದಿರಗಳ ನಡುವೆ ಪೈಪೋಟಿ ಏರ್ಪಡುತ್ತದೆ. ರೀಲ್ ಬಾಕ್ಸ್ ತಂದು ಸಿನಿಮಾ ಪ್ರದರ್ಶನ ಮಾಡುತ್ತಿದ್ದಾಗ ಇಂತಹ ಜಿದ್ದಾಜಿದ್ದಿ ಜಾಸ್ತಿ ಇರ್ತಿತ್ತು. ಈಗ ಸ್ಯಾಟಲೈಟ್(UFO QUBE) ಮೂಲಕ ಸಿನಿಮಾ ಪ್ರದರ್ಶನ ಮಾಡಲಾಗ್ತಿದೆ. ಹಾಗಾಗಿ ಬೇಡಿಕೆಗೆ ತಕ್ಕಂತೆ ಹೆಚ್ಚಿನ ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆ ಮಾಡಬಹುದು. ಅಕ್ಕಪಕ್ಕದ ಎರಡು ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಮಾಡಲು ಹೆದರುತ್ತಾರೆ. ಆದರೆ 'ಟಾಕ್ಸಿಕ್' ರೀತಿಯ ದೊಡ್ಡ ಸಿನಿಮಾ ಬಂದಾಗ ಧೈರ್ಯ ಮಾಡಿ ಸಿನಿಮಾ ಹಾಕುತ್ತಾರೆ. ಇದೇ ಕಾರಣಕ್ಕೆ ಚಿತ್ರಮಂದಿರದ ಮಾಲೀಕರು ಈ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

ದಾವಣಗೆರೆಯ ತ್ರಿಶೂಲ್ ಹಾಗೂ ತ್ರಿನೇತ್ರ ಚಿತ್ರಮಂದಿರದ ಆಡಳಿತ ಮಂಡಳಿ ಕೂಡ 'ಟಾಕ್ಸಿಕ್' ಚಿತ್ರಕ್ಕಾಗಿ ಕಾಯ್ತಿದೆ. ಚಿತ್ರಮಂದಿರದ ಸಿಬ್ಬಂದಿ ಈ ಬಗ್ಗೆ Vijay Mailor ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಆ ವೀಡಿಯೋ ವೈರಲ್ ಆಗ್ತಿದೆ. "ಟಾಕ್ಸಿಕ್ ಬಹುನಿರೀಕ್ಷಿತ ಸಿನಿಮಾ. ಇತ್ತೀಚೆಗೆ ಇಂತಹ ಸಿನಿಮಾ ಬಂದಿಲ್ಲ. 'ಕೆಜಿಎಫ್- 2' ಬಳಿಕ ಬರ್ತಿರೋ ಯಶ್ ಸಿನಿಮಾ ಇದು. ಹಾಗಾಗಿ ಎಲ್ಲರಿಗೂ ಕುತೂಹಲ ಇದೆ. ನಮಗೂ ಸಿನಿಮಾ ಪ್ರದರ್ಶನ ಮಾಡುವ ಆಸೆಯಿದೆ. ದೊಡ್ಡ ಸಿನಿಮಾ ಆಗಿರುವುದರಿಂದ ದಾವಣಗೆರೆಯ 3 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆಯಿದೆ. ಎಲ್ಲವೂ ಹೌಸ್‌ಫುಲ್ ಆಗುವ ನಿರೀಕ್ಷೆಯಿದೆ. ಶ್ರಮದ ಜೊತೆ ಅದೃಷ್ಟ ಕೂಡ ಯಶ್ ಜೊತೆಗಿದೆ. ಅದಕ್ಕೆ ಇಂತಹ ಗೆಲುವು ಸಿಗುತ್ತಿದೆ" ಎಂದಿದ್ದಾರೆ.

'ಟಾಕ್ಸಿಕ್' ಸಿನಿಮಾ ಬಂದ್ರೆ ಕಮ್ಮಿ ಅಂದ್ರು ಒಂದು ತಿಂಗಳು ಹೌಸ್‌ಫುಲ್ ಆಗುತ್ತೆ ಎಂದು ನಗರದ ವೀರಭದ್ರೇಶ್ವರ ಚಿತ್ರಮಂದಿರದ ಸಿಬ್ಬಂದಿ ಹೇಳಿದ್ದರು. SSTV ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅವರು ಮಾತನಾಡಿದ್ದರು. 'ರಕ್ಕಸಪುರದೋಳ್' ಸಿನಿಮಾ ನಮ್ಮ ಚಿತ್ರಮಂದಿರದಲ್ಲಿ ಪ್ರದರ್ಶನವಾಗ್ತಿದೆ. ಪರವಾಗಿಲ್ಲ, ಇನ್ನುಳಿದಂತೆ ಯಾವುದೇ ಸಿನಿಮಾ ಇತ್ತೀಚೆಗೆ ಸದ್ದು ಮಾಡಲಿಲ್ಲ. 'ಟಾಕ್ಸಿಕ್' ಚಿತ್ರಕ್ಕಾಗಿ ನಾವು ಕಾಯ್ತಿದ್ದೀವಿ ಎಂದಿದ್ದರು. ಎರಡೂ ಟೀಸರ್ ಚೆನ್ನಾಗಿದೆ, ಹಿಟ್ ಆಗಿದೆ. 100%ರಷ್ಟು ಸಿನಿಮಾ ಗೆದ್ದೇ ಗೆಲ್ಲುತ್ತೆ. ಬಾಕ್ಸಾಫೀಸ್‌ನಲ್ಲಿ ಸಿನಿಮಾ ಧೂಳೆಬ್ಬಿಸುವುದರಲ್ಲಿ ದೂಸ್ರಾ ಮಾತಿಲ್ಲ ಎಂದಿದ್ದರು.

ಎಲ್ಲಾ ಅಂದುಕೊಂಡಂತೆ ಆಗಿದ್ರೆ ಈಗಾಗಲೇ 'ಟಾಕ್ಸಿಕ್' ಸಿನಿಮಾ ತೆರೆಗೆ ಬರಬೇಕಿತ್ತು. ಮಾರ್ಚ್ 19ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಮೊದಲಿಗೆ ಹೇಳಿದ್ದರು. ಬಳಿಕ ಜೂನ್ 4ಕ್ಕೆ ಪೋಸ್ಟ್ ಪೋನ್ ಆಗಿತ್ತು. ಇದೀಗ ಅಂತಿಮವಾಗಿ ಆಗಸ್ಟ್ 26ರಂದು ಸಿನಿಮಾ ತೆರೆಗೆ ಬರುವುದು ಪಕ್ಕಾ ಆಗಿದೆ. 500 ಕೋಟಿ ರೂ.ಗೂ ಅಧಿಕ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ಹಾಲಿವುಡ್ ಪ್ರೇಕ್ಷಕರನ್ನು ಮನದಲ್ಲಿಟ್ಟುಕೊಂಡು ಸಿನಿಮಾ ಕಟ್ಟಿಕೊಡಲಾಗ್ತಿದೆ. ದ್ವಿಪಾತ್ರಗಳಲ್ಲಿ ತಂದೆ, ಮಗನಾಗಿ ಯಶ್ ನಟಿಸಿದ್ದಾರೆ. ಎರಡು ಭಾಗಗಳಾಗಿ ಸಿನಿಮಾ ತೆರೆಗೆ ಬರಬಹುದು ಎನ್ನುವ ಊಹಾಪೋಹ ಶುರುವಾಗಿದೆ. ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೇಗೆ ಸದ್ದು ಮಾಡುತ್ತೆ ಕಾದು ನೋಡಬೇಕಿದೆ.

Read more about: toxic yash theater
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X