twitter
    For Quick Alerts
    ALLOW NOTIFICATIONS  
    For Daily Alerts

    ಲಾಟರಿ ಸರ್ಕಾರಕ್ಕೆ ಮಂಗಳಾರತಿ ಎತ್ತಿದ ಮಾಸ್ಟರ್ ಹಿರಣ್ಣಯ್ಯ

    |

    Master Hirannayya
    ನಾನು ಮೂಲತಃ ಕಟ್ಟಾ ಆರ್ ಎಸ್ ಎಸ್ ನವನಾಗಿದ್ದೆ. ಗಣವಸ್ತ್ರ ಧರಿಸಿ ಸಂಘಟನೆಯ ಶಾಖೆಯಲ್ಲಿ ಭಾಗವಹಿಸಿ, ನಮಸ್ತೆ ಸದಾ ವತ್ಸಲೇ ಮಾತೃಭೂಮಿ ಎನ್ನುತ್ತಿದ್ದೆ. ನನಗೆ ಸಂಘಟನೆಯ ಶಾಖೆಗಳಲ್ಲಿ ಪಾಲ್ಗೊಳ್ಳುವುದಕ್ಕೆ ಹೆಮ್ಮೆ ಇತ್ತು. ಆದರೆ ಅಂದಿನ ಆರ್ ಎಸ್ ಎಸ್ ಸಂಘಟನೆಗೂ ಇಂದಿನ ಸಂಘಟನೆಗೂ ಬಹಳ ವ್ಯತ್ಯಾಸವಿದೆ ಎಂದು ನಟ ರತ್ನಾಕರ ಮಾಸ್ಟರ್ ಹಿರಣ್ಣಯ್ಯ ಖೇದ ವ್ಯಕ್ತಪಡಿಸಿದ್ದಾರೆ.

    ಅಂದು ದೇಶಭಕ್ತಿ, ರಾಷ್ಟ್ರಪ್ರೇಮ ನಮ್ಮಲ್ಲಿ ಬೆಳೆಸುತ್ತಿದ್ದರು. ಸಂಘಟನೆಯಲ್ಲಿ ರಾಜಕೀಯದ ಸುಳಿವೇ ಇರಲಿಲ್ಲ. ದುಡ್ಡಿನ ವ್ಯವಹಾರಗಳೇ ನಡೆಯುತ್ತಿರಲಿಲ್ಲ. ಶಾಖೆಯಲ್ಲಿ ಪಾಲ್ಗೊಳ್ಳಲು ತುದಿಗಾಲಲ್ಲಿ ನಿಲ್ಲುತ್ತಿದ್ದೆ, ನಮ್ಮ ಭಾಷೆ, ಸಂಸ್ಕೃತಿ ಬಗ್ಗೆ ಶಾಖೆಯ ಮೇಲಾಧಿಕಾರಿಗಳು ಭಾಷಣ ನೀಡುತ್ತಿದ್ದರು. ಈಗ ನಾನು ಸಂಘಟನೆಯ ಸದಸ್ಯನೂ ಅಲ್ಲ, ಶಾಖೆಯಲ್ಲಿ ಭಾಗವಹಿಸುತ್ತನೂ ಇಲ್ಲ. ಈ ಬಗ್ಗೆ ನನಗೆ ಯಾವುದೇ ಬೇಸರವಿಲ್ಲ ಎಂದು ಹಿರಣ್ಣಯ್ಯ ಬೇಸರವನ್ನು ಹೊರಹಾಕಿದ್ದಾರೆ.

    ಟಿವಿ9 ವಾಹಿನಿಯ ಜನಪ್ರಿಯ ಚಕ್ರವ್ಯೂಹ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಹಿರಣ್ಣಯ್ಯ, ದಾರಿಯಲ್ಲಿ ಹೋಗುವ ಪೆಟ್ಟಿಗೆ ಅಂಗಡಿಯವನಿಗೆ ಹತ್ತು ರೂಪಾಯಿ ಕೊಡಲು ಬಾಕಿಯಿದ್ದರೆ ನಮಗೆ ಆ ರಸ್ತೆಯಲ್ಲಿ ಹೋಗೋಕೆ ಮುಜುಗರವಾಗುತ್ತೆ. ಈಗಿನ ರಾಜಕಾರಿಣಿಗಳು ಕೋಟಿ ಕೋಟಿ ದೇಶವನ್ನು ಲೂಟಿ ಹೊಡೆದು ರಾಜಾರೋಷವಾಗಿ ತಿರುಗುತ್ತಾರಲ್ಲಾ ಇವರಿಗೆ ಮಾನ ಮರ್ಯಾದೆ ಎನ್ನುವದು ಏನೂ ಇಲ್ಲವೇ. ಮೂರು ಬಿಟ್ಟವರು ತಾನೇ ಇವರು ಎಂದು ಲೇವಡಿ ಮಾಡಿದ್ದಾರೆ.

    ರಾಜಕೀಯ ಅನ್ನೋದು ದೊಂಬರಾಟ ರೀತಿ ಆಗಿ ಹೋಗಿದೆ. ರಾಜ್ಯ ರಾಜಕಾರಣದ ಬಗ್ಗೆ ಹೇಸಿಗೆಯಾಗುತ್ತಿದೆ. ದಿನಕ್ಕೊಂದು ಹಗರಣ, ರಾಜ್ಯದ ಸಂಪತ್ತನ್ನು ಲೂಟಿ ಮಾಡೋದು, ಪಕ್ಷಪಕ್ಷಗಳ ನಡುವಣ ಕಿತ್ತಾಟದಲ್ಲಿ ಸಾಮಾನ್ಯ ಪ್ರಜೆ ತಬ್ಬಲಿಯಾಗುತ್ತಿದ್ದಾನೆ. ನಮ್ಮ ರಾಜ್ಯ ರಾಜಕಾರಣವನ್ನು ಸದ್ಯದಲ್ಲೇ ನಾಟಕ ರೂಪದಲ್ಲಿ ತಂದು, ನಾಟಕವನ್ನು ರಾಜ್ಯಾದ್ಯಂತ ಪ್ರದರ್ಶಿಸುತ್ತೇನೆ ಎಂದು ಹಿರಿಯ ರಂಗಕರ್ಮಿ ಹಿರಣ್ಣಯ್ಯ ಲಂಚಾವತಾರಿಗಳನ್ನು ಬೆಂಡೆತ್ತಿದ್ದಾರೆ. (ಒನ್ಇಂಡಿಯಾ ಕನ್ನಡ)

    English summary
    Noted dramatist Master Hirannaiah criticized ongoing Political satire in Karnataka. In a interview with news channel he said, earlier I was participating in RSS programmes, but not now. Shortly I will start drama on our state politics.
    Tuesday, October 25, 2011, 14:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X