'ಮಾಸ್ಟರ್ ಪೀಸ್' ಸೆನ್ಸಾರ್ ನಿಂದ ಪಾಸ್, ರಿಲೀಸ್ ಫಿಕ್ಸ್!

By Harshitha

2015 ವರ್ಷಾಂತ್ಯಕ್ಕೆ ಕನ್ನಡ ಸಿನಿ ಪ್ರೇಮಿಗಳಿಗೆ ಬಂಪರ್ ಉಡುಗೊರೆ ಕೊಡೋಕೆ ಬರ್ತಿದ್ದಾರೆ ರಾಕಿಂಗ್ ಸ್ಟಾರ್ ಯಶ್. ಅದು ತಮ್ಮ 'ಮಾಸ್ಟರ್ ಪೀಸ್' ಸಿನಿಮಾ ಮೂಲಕ.

ಹೌದು, ನಿನ್ನೆಯಷ್ಟೇ ಸೆನ್ಸಾರ್ ಅಂಗಳದಿಂದ ಪಾಸ್ ಆಗಿರುವ 'ಮಾಸ್ಟರ್ ಪೀಸ್' U/A ಸರ್ಟಿಫಿಕೇಟ್ ಪಡೆದಿದೆ. ಡಿಸೆಂಬರ್ 24 ರಂದು 'ಮಾಸ್ಟರ್ ಪೀಸ್' ಭಾರತದಾದ್ಯಂತ ಬಿಡುಗಡೆ ಆಗಲಿದೆ. [ಎಕ್ಸ್ ಕ್ಲೂಸಿವ್ ; 'ಮಾಸ್ಟರ್ ಪೀಸ್' ವಿತರಣಾ ಹಕ್ಕು ಅಬ್ಬಬ್ಬಾ! ಅಷ್ಟೊಂದಾ?!]

'Masterpiece' gets U/A certificate; Release on December 24th

ಸಂಭಾಷಣೆಕಾರ ಮಂಜು ಮಾಂಡವ್ಯ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ ಚಿತ್ರ ಇದು. ಹೀಗಾಗಿ ಸಿನಿಮಾದಲ್ಲಿ ಅಬ್ಬರದ ಡೈಲಾಗ್ಸ್ ಗ್ಯಾರೆಂಟಿ! ಹೇಳಿ ಕೇಳಿ 'ಮಾಸ್ಟರ್ ಪೀಸ್' ರಾಕಿಂಗ್ ಸ್ಟಾರ್ ಯಶ್ ಸಿನಿಮಾ. ಅಂದ್ಮೇಲೆ ಡ್ಯಾನ್ಸ್ ಮತ್ತು ಫೈಟ್ ಗೆ ಕೊರತೆ ಇಲ್ಲ. [ಯಶ್ ಅಭಿನಯದ 'ಮಾಸ್ಟರ್ ಪೀಸ್' ಧ್ವನಿಸುರುಳಿ ವಿಮರ್ಶೆ]

ಕ್ರಾಂತಿಕಾರಿ ಭಗತ್ ಸಿಂಗ್ ಲುಕ್ ನಲ್ಲಿ ಯಶ್ ಕಾಣಿಸಿಕೊಂಡಿದ್ದರೂ, ಡ್ಯುಯೆಟ್ ಹಾಡುವುದಕ್ಕೆ ನಾಯಕಿ ಶಾನ್ವಿ ಇದ್ದಾರೆ. ಈಗಾಗಲೇ ವಿ.ಹರಿಕೃಷ್ಣ ಸಂಗೀತ ನೀಡಿರುವ 'ಮಾಸ್ಟರ್ ಪೀಸ್' ಹಾಡುಗಳು ಎಲ್ಲೆಡೆ ಸದ್ದು ಮಾಡುತ್ತಿವೆ.

ಬಹುನಿರೀಕ್ಷೆ ಹುಟ್ಟಿಸಿರುವ 'ಮಾಸ್ಟರ್ ಪೀಸ್' ಡಿಸೆಂಬರ್ 24 ರಂದು ನಿಮ್ಮ ಮುಂದೆ.....

More from Filmibeat

English summary
Kannada Actor Yash starrer 'Masterpiece' has received U/A certificate from Censor Board. The movie is all set to release on December 24th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X