For Quick Alerts
  ALLOW NOTIFICATIONS  
  For Daily Alerts

  ರಾಕಿಂಗ್ ಸ್ಟಾರ್ ಯಶ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಗೆ ಕ್ಲ್ಯಾಷ್!!

  By Suneetha
  |

  ಈ ಬಾರಿಯ ಕ್ರಿಸ್ ಮಸ್ ಗೆ ರಾಕಿಂಗ್ ಸ್ಟಾರ್ ಯಶ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅವರ ಫ್ಯಾನ್ಸ್ ಸಮರ ಆಗುವ ಸಾಧ್ಯತೆಯಿದೆ.

  ಯಾಕಂತೀರಾ?, ಯಾಕೆಂದರೆ ರಾಕಿಂಗ್ ಸ್ಟಾರ್ ಯಶ್ ಹಾಗೂ ಚಿನ್ನದ ಹುಡುಗ ಗಣಿ ಅವರ ಬಹುನಿರೀಕ್ಷಿತ ಚಿತ್ರಗಳು ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಗುತ್ತಿದೆ. ಒಟ್ನಲ್ಲಿ ಕ್ರಿಸ್ ಮಸ್ ಹಬ್ಬಕ್ಕೆ ಇವರಿಬ್ಬರಿಗೂ ಕ್ಲ್ಯಾಷಸ್ ಆಗುವ ಸಾಧ್ಯತೆ ಬಹಳಷ್ಟಿದೆ.

  ಅಂದಹಾಗೆ ಸ್ಯಾಂಡಲ್ ವುಡ್ ನ ಈ ಎರಡೂ ನಟರಿಗೂ ಡಿಸೆಂಬರ್ ತಿಂಗಳೆಂದರೆ ಅದೊಂಥರಾ ಸೆಂಟಿಮೆಂಟ್ ಅಂತೆ ಅದಕ್ಕಾಗಿ ಇಬ್ಬರು ಚಿತ್ರಗಳು ಡಿಸೆಂಬರ್ ಕೊನೆಯ ವಾರದಲ್ಲಿ ತೆರೆ ಮೇಲೆ ಬರಲಿದೆ.['ರಾಜ್ಯೋತ್ಸವ'ದಲ್ಲಿ ನಂದೇ ಸ್ಟೈಲ್, ಎಂದ ಚಿನ್ನದ ಹುಡುಗ ]

  ಗೋಲ್ಡನ್ ಸ್ಟಾರ್ ಗಣೇಶ್ ಅವರ 'ಮುಂಗಾರು ಮಳೆ' ಹಾಗೂ 'ಶ್ರಾವಣಿ ಸುಬ್ರಮಣ್ಯ' ಡಿಸೆಂಬರ್ ನ ಕೊನೆಯ ವಾರದಲ್ಲಿ ತೆರೆ ಕಂಡು ಬಾಕ್ಸಾಫೀಸ್ ನಲ್ಲಿ ಒಳ್ಳೆ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ. ಅದಕ್ಕಾಗಿ ನಿರ್ದೇಶಕ ಪಿ.ಸಿ ಶೇಖರ್ ಆಕ್ಷನ್-ಕಟ್ ಹೇಳಿರುವ 'ಸ್ಟೈಲ್ ಕಿಂಗ್' ಚಿತ್ರವನ್ನು ಕೂಡ ಡಿಸೆಂಬರ್ ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಚಿಸುತ್ತಿದೆಯಂತೆ.

  ಇನ್ನು ರಾಕಿಂಗ್ ಸ್ಟಾರ್ ಯಶ್ ವಿಷಯಕ್ಕೆ ಬಂದ್ರೆ, ಅವರ 'ಮಿ.ಅಂಡ್ ಮಿಸಸ್ ರಾಮಾಚಾರಿ' ಚಿತ್ರ ಕಳೆದ ವರ್ಷ ಡಿಸೆಂಬರ್ ನಲ್ಲಿ ತೆರೆ ಕಂಡು ಸೂಪರ್, ಡೂಪರ್ ಹಿಟ್ ಕಂಡಿತ್ತು. ಹಾಗಾಗಿ ಈ ವರ್ಷ 'ಮಾಸ್ಟರ್ ಪೀಸ್' ಚಿತ್ರವನ್ನು ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆ ಮಾಡಲು ನಿರ್ದೇಶಕ ಮಂಜು ಮಾಂಡವ್ಯ ಅವರು ನಿರ್ಧರಿಸಿದ್ದಾರೆ.[ಯಶ್ ಗೆ, ಈ ವರ್ಷ 'ಮಾಸ್ಟರ್ ಪೀಸ್', ಬ್ಲಾಕ್ ಬಸ್ಟರ್ ಸಿನಿಮಾ ಆಗುತ್ತಾ?]

  ಒಟ್ಟಾರೆ ಇವರಿಬ್ಬರ ಈ ಸೆಂಟಿಮೆಂಟ್ ನಿಂದ ಅಭಿಮಾನಿಗಳು ಹಾಗೂ ಪ್ರೇಕ್ಷಕರು ಫಸ್ಟ್ ಡೇ ಫ್ಟ್ ಶೋ ನೋಡಲು ಯಾವ ಸಿನಿಮಾಕ್ಕೆ ಹೋಗೋದು ಅಂತ ಕನ್ ಫ್ಯೂಶನ್ ಆಗೋದು ಗ್ಯಾರಂಟಿ.

  ಇಲ್ಲಿಗೆ ಡಿಸೆಂಬರ್ ಕೊನೆಯ ವಾರದ ಒಳ್ಳೆ ಮುಹೂರ್ತದಿಂದಾಗಿ, ಎರಡು ದೊಡ್ಡ ಬಜೆಟ್ ನ ಹಾಗೂ ನಿರೀಕ್ಷಿತ ಚಿತ್ರಗಳು ಒಂದೇ ದಿನ ಬಿಡುಗಡೆಯಾಗುವ ಸಾಧ್ಯತೆ ಬಹಳಷ್ಟಿದೆ. ಹಾಗಾದ್ರೆ ಪ್ರೇಕ್ಷಕ ಗಣೇಶ್ ದ್ವಿಪಾತ್ರದಲ್ಲಿ ಮಿಂಚಿರುವ 'ಸ್ಟೈಲ್ ಕಿಂಗ್' ಒಪ್ಪುತ್ತಾನೋ, ಅಥವಾ ಯಶ್ ಹೀರೋ ಹಾಗೂ ವಿಲನ್ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿರುವ 'ಮಾಸ್ಟರ್ ಪೀಸ್' ಮೆಚ್ಚುತ್ತಾನೋ ಕಾದು ನೋಡಬೇಕು.

  English summary
  As the release Kannada movie 'Masterpiece' starring Yash and Kannada movie 'Style King' starring Ganesh scheduled to hit screen on the same day, Karnataka will witness the healthy competition between yash and Golden star Ganesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X