For Quick Alerts
  ALLOW NOTIFICATIONS  
  For Daily Alerts

  'ಲಾಕ್‌ಡೌನ್‌'ನಲ್ಲಿ ಕ್ರೈಂ ಕಾಮಿಡಿಯ ಕಥೆ ಹೇಳಲು ಹೊರಟಿದ್ದಾರೆ ಗುರುಪ್ರಸಾದ್

  |

  ಲಾಕ್‌ಡೌನ್‌ನಲ್ಲಿ ಸಂದರ್ಭದಲ್ಲಿ ಫಾರ್ಮ್ ಹೌಸ್‌ ಒಂದರಲ್ಲಿ ಕುಳಿತು ಕಾಲಕಳೆಯುತ್ತಿರುವ 'ಮಠ' ಗುರುಪ್ರಸಾದ್, ಈಗಿನ ಸನ್ನಿವೇಶವನ್ನೇ ಆಧಾರವಾಗಿಟ್ಟುಕೊಂಡು ಸಿನಿಮಾ ಮಾಡುವುದಾಗಿ ಹೇಳಿದ್ದರು. ಅದಕ್ಕೀಗ ಅವರು 'ಲಾಕ್‌ಡೌನ್' ಎಂಬ ಶೀರ್ಷಿಕೆಯನ್ನೇ ಇರಿಸಿದ್ದಾರೆ.

  ಟ್ರೆಂಡಿಂಗ್‌ನಲ್ಲಿರುವ ಸಂಗತಿಯನ್ನು ಸಿನಿಮಾ ವಸ್ತು ಮಾಡುವುದು, ಅದರ ಶೀರ್ಷಿಕೆಯನ್ನು ಪಡೆದುಕೊಳ್ಳುವುದು ಹೊಸದೇನಲ್ಲ. ಇತ್ತೀಚೆಗೆ ಕೊರೊನಾ ವೈರಸ್ ಎಂಬ ಶೀರ್ಷಿಕೆಯನ್ನು ಕೂಡ ಯಾರೋ ನೋಂದಣಿಮಾಡಿಸಿದ್ದಾಗಿದೆ. ಸಾಮಾನ್ಯವಾಗಿ ವಿಭಿನ್ನ ದಿಕ್ಕಿನಲ್ಲಿ ಸಾಗುವ ನಿರ್ದೇಶಕ ಗುರುಪ್ರಸಾದ್, ಈ ಬಾರಿ ಎಲ್ಲರ ಜತೆಯಲ್ಲಿಯೇ ಸಾಗುವ ಮನಸ್ಸು ಮಾಡಿದ್ದಾರೆ.

  ಲಾಕ್‌ಡೌನ್‌ನಲ್ಲಿಯೇ ವಿಶಿಷ್ಟ ಪ್ರಯೋಗದ ಸಿನಿಮಾ ಮಾಡಲಿದ್ದಾರೆ 'ಮಠ' ಗುರುಪ್ರಸಾದ್ಲಾಕ್‌ಡೌನ್‌ನಲ್ಲಿಯೇ ವಿಶಿಷ್ಟ ಪ್ರಯೋಗದ ಸಿನಿಮಾ ಮಾಡಲಿದ್ದಾರೆ 'ಮಠ' ಗುರುಪ್ರಸಾದ್

  'ಲಾಕ್‌ಡೌನ್' ಹೆಸರಿನ ಸಿನಿಮಾ ಕ್ರೈಮ್ ಕಾಮಿಡಿ ಕಥೆಯನ್ನು ಒಳಗೊಂಡಿದೆ. ಎರಡು ಗಂಟೆಯ ಸಿನಿಮಾದಲ್ಲಿ ಹಾಡುಗಳು ಇರುವುದಿಲ್ಲ ಎಂಬ ಮಾಹಿತಿಯನ್ನು ಗುರುಪ್ರಸಾದ್ ನೀಡಿದ್ದಾರೆ. ಅಷ್ಟೇ ಅಲ್ಲ, ಇಡೀ ಚಿತ್ರದ ಪ್ರಮುಖ ಪಾತ್ರಧಾರಿಯೂ ಅವರೇ ಆಗಿರಲಿದ್ದಾರೆ. ಅನೇಕ ಸಿನಿಮಾಗಳಲ್ಲಿ ನಟಿಸಿರುವ ಗುರುಪ್ರಸಾದ್ ತಾವೇ ಈ ಕಥೆ ಹೇಳುವುದು ಸೂಕ್ತ ಎಂದು ತೀರ್ಮಾನಿಸಿದ್ದಾರೆ.

  'ಸಾಯಲಿ ಕೊರೊನಾ ಸ್ವಲ್ಪ ಹೊತ್ತು ನಗೋಣ': ದಿನವೂ ನಗಿಸ್ತಿದ್ದಾರೆ 'ಮಠ' ಗುರುಪ್ರಸಾದ್'ಸಾಯಲಿ ಕೊರೊನಾ ಸ್ವಲ್ಪ ಹೊತ್ತು ನಗೋಣ': ದಿನವೂ ನಗಿಸ್ತಿದ್ದಾರೆ 'ಮಠ' ಗುರುಪ್ರಸಾದ್

  ಇನ್ನು ಉಳಿದ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ಕಾರ್ಯ ನಡೆಯುತ್ತಿದೆ. ಈ ಚಿತ್ರಕ್ಕೆ ಯಾರು ಬಂಡವಾಳ ಹೂಡಲಿದ್ದಾರೆ ಎನ್ನುವುದು ಖಚಿತವಾಗಿಲ್ಲ. ಲಾಕ್‌ಡೌನ್‌ನಲ್ಲಿಯೇ ಸಿನಿಮಾ ಮಾಡುವುದಾಗಿ ಗುರುಪ್ರಸಾದ್ ಹೇಳಿದ್ದಾರೆ. ಈ ಸಿನಿಮಾವನ್ನು ಅವರು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವುದಿಲ್ಲ. ತಮ್ಮ ಅಧಿಕೃತ ಆಪ್‌ನಲ್ಲಿ ಬಿಡುಗಡೆ ಮಾಡಲಿದ್ದಾರೆ. ಪ್ರೇಕ್ಷಕರು 100 ರೂ ಪಾವತಿಸಿ ಆಪ್‌ ಮೂಲಕ ಸಿನಿಮಾ ವೀಕ್ಷಿಬಹುದಾಗಿದೆ.

  English summary
  Director Mata Guru Prasad is preparing to do a crime comedy movie with Lockdown title.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X