13 ವರ್ಷಗಳ ಹಿಂದಿನ ಚಿತ್ರ 'ಮಠ' ಈಗ ಸುದ್ದಿಯಾಯ್ತು

'ಮಠ' ಎಷ್ಟು ಬಾರಿ ನೋಡಿದರೂ ಮತ್ತೆ ಮತ್ತೆ ನೋಡಬೇಕು ಎನ್ನಿಸುವ ಸಿನಿಮಾ. ಈ ಸಿನಿಮಾ ಬಿಡುಗಡೆಯಾಗಿ 13 ವರ್ಷಗಳ ಕಳೆದರೂ ಈ ಚಿತ್ರ ನೋಡುವವರ ಸಂಖ್ಯೆ ಕಡಿಮೆಯಾಗಿಲ್ಲ.

ಥಿಯೇಟರ್ ನಲ್ಲಿ ಮಾತ್ರವಲ್ಲ 'ಮಠ' ಸಿನಿಮಾ ಯೂ ಟ್ಯೂಬ್ ನಲ್ಲಿಯೂ ದೊಡ್ಡ ಹಿಟ್ ಆಗಿದೆ. ಸಿನಿಮಾ ಬರೋಬ್ಬರಿ ಒಂದು ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ. ಒಂದು ಮಿಲಿಯನ್ ವೀಕ್ಷಣೆ ಪಡೆಯುವ ಮೂಲಕ ತನ್ನ ಜನಪ್ರಿಯತೆಯನ್ನು ಮತ್ತೆ ಸಾಬೀತು ಮಾಡಿದೆ.

2017ರ ಸಪ್ಟೆಂಬರ್ ನಲ್ಲಿ 'ಮಠ' ಸಿನಿಮಾದ ಆಫೀಶಿಯಲ್ ವಿಡಿಯೋವನ್ನು ಯೂ ಟ್ಯೂಬ್ ಗೆ SRS ಮೀಡಿಯಾ ಅಪ್ ಲೋಡ್ ಮಾಡಿತ್ತು. ಯೂ ಟ್ಯೂಬ್ ನಲ್ಲಿ ಸಿನಿಮಾ ಬಿಡುಗಡೆಯಾದ ಒಂದುವರೆ ವರ್ಷಕ್ಕೆ ಒಂದು ಮಿಲಿಯನ್ ಹಿಟ್ಸ್ ಸಿಕ್ಕಿದೆ.

mata kannada movie got 1 million in youtube

'ಮಠ' ಒಂದು ಗಂಭೀರ ವಿಚಾರದ ಪಕ್ಕಾ ಹಾಸ್ಯ ಸಿನಿಮಾವಾಗಿತ್ತು. ಜಗ್ಗೇಶ್ ನಟನೆಯ ನೂರನೇ ಸಿನಿಮಾ ಎನ್ನುವ ಹೆಗ್ಗಾಳಿಕೆ ಈ ಸಿನಿಮಾಗೆ ಇದೆ. ಅಲ್ಲದೆ ನಿರ್ದೇಶಕ ಗುರುಪ್ರಸಾದ್ ಈ ಸಿನಿಮಾದ ಮೂಲಕವೇ ಚಿತ್ರರಂಗಕ್ಕೆ ಬಂದಿದ್ದರು.

'ಮಠ' ಸಿನಿಮಾದ ದೊಡ್ಡ ಹೈಲೈಟ್ ಡೈಲಾಗ್. ಪದೇ ಪದೇ ಸಿನಿಮಾ ನೋಡಿದರೂ ಬೇಸರ ಆಗದಂತ ಡೈಲಾಗ್ ಇಲ್ಲಿವೆ.

More from Filmibeat

English summary
'Mata' kannada movie got 1 million in youtube. The movie is Jaggesh's 100th movie directed by Guruprasad.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X