ನೋಟ್ ಬ್ಯಾನ್ ಸಿನಿಮಾ 'ಮಟಾಶ್' ಬಿಡುಗಡೆ ಮುಂದಕ್ಕೆ ಹೋಯ್ತು
ಎಲ್ಲ ಅಂದುಕೊಂಡಂತೆ ಆಗಿದ್ದರೇ ಈ ವಾರ 'ಮಟಾಶ್' ಚಿತ್ರವೂ ರಿಲೀಸ್ ಆಗಬೇಕಿತ್ತು. ಆದ್ರೆ, ಅಂತಿಮ ಕ್ಷಣದಲ್ಲಿ ತಾಂತ್ರಿಕ ದೋಷದಿಂದ ಬಿಡುಗಡೆಯಾಗಿಲ್ಲ. ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ. ಇನ್ನುಳಿದಂತೆ ಈ ವಾರ ಭೈರವಗೀತ, ಆರೆಂಜ್, ಚರಂತಿ, ಮುಂದಿನ ಬದಲಾವಣೆ ಹಾಗೂ ಲೂಟಿ ಸಿನಿಮಾಗಳು ತೆರೆಕಂಡಿವೆ.
2016ರ ನವೆಂಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ದಿಢೀರ್ ಅಂತ 500, 1000 ರೂಪಾಯಿ ನೋಟುಗಳನ್ನ ನಿಷೇಧ ಮಾಡಿದರು. ಇದರಿಂದ ಏನೆಲ್ಲಾ ಬೆಳವಣಿಗೆಗಳು ಆಯಿತು, ಯಾರಿಗೆ ಸಮಸ್ಯೆ ಆಯ್ತು, ಯಾರಿಗೆ ಲಾಭ ಆಯ್ತು ಎಂಬ ಕಥೆಯನ್ನಿಟ್ಟು 'ಮಟಾಶ್' ಚಿತ್ರ ಮನರಂಜನಾತ್ಮಕ ಮಾಡಿದ್ದ ಸಿನಿಮಾ ಮಟಾಶ್.
ಸದ್ಯ, ಚಿತ್ರದ ಟೀಸರ್ ಮತ್ತು ಲಿರಿಕಲ್ ಹಾಡುಗಳು ಬಿಡುಗಡೆಯಾಗಿದ್ದು, ಪ್ರೇಕ್ಷಕರನ್ನ ಆಕರ್ಷಿಸುತ್ತಿದೆ. ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಹಾಡಿರುವ 'ಚವಳಿಕಾಯಿ' ಸಖತ್ ಸದ್ದು ಮಾಡಿದ್ದು, ಅದರ ಜೊತೆ, 'ನಮೋ ವೆಂಕಟೇಶಾ' ಹಾಗೂ 'ವಾಟ್ ಎ ಟ್ರ್ಯಾಜಿಡಿ' ಹಾಡುಗಳು ಕೂಡ ವಿಶೇಷವಾಗಿ ಗಮನ ಸೆಳೆದಿದೆ.

ಇನ್ನುಳಿದಂತೆ ಜುಗಾರಿ ಅರವಿಂದ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಸಮರ್ಥ ನರಸಿಂಹ ರಾಜು, ಐಶ್ವರ್ಯ ಸಿಂಧೋಗಿ, ರಜನಿ ಭಾರಾಧ್ವಜ್, ರೂಪ ಶ್ರೀಧರ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಈಗ ಟೆಕ್ನಿಕಲಿ ಸಮಸ್ಯೆಯಿಂದ ಮುಂದಕ್ಕೆ ಹೋಗಿರುವ ಈ ಸಿನಿಮಾ ಸದ್ಯದಲ್ಲೆ ಇನ್ನೊಂದು ದಿನಾಂಕವನ್ನ ಘೋಷಿಸಲಿದೆ.


Click it and Unblock the Notifications











